Home ಕ್ರೈಂ ನ್ಯೂಸ್ ಹಗಲು ಪತಿ, ರಾತ್ರಿ ಪ್ರೇಮಿ! ವಿಚಿತ್ರ ಸಂಸಾರದ ಪ್ಲಾನ್ ಕೇಳಿ ತಲೆಮೇಲೆ ಕೈಹೊತ್ತು ಕುಳಿತ ಪೊಲೀಸರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹಗಲು ಪತಿ, ರಾತ್ರಿ ಪ್ರೇಮಿ! ವಿಚಿತ್ರ ಸಂಸಾರದ ಪ್ಲಾನ್ ಕೇಳಿ ತಲೆಮೇಲೆ ಕೈಹೊತ್ತು ಕುಳಿತ ಪೊಲೀಸರು!

Share
ಪತಿ
Share

ಸೀತಾಪುರ (ಉತ್ತರ ಪ್ರದೇಶ): ಪೋಲಿಸ್ ಠಾಣೆಗಳಿಗೆ ದಿನವೂ ನಾನಾ ರೀತಿಯ ದೂರುಗಳು ಬರುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹಮೂದಾಬಾದ್ ಕೊತ್ವಾಲಿ ಪೊಲೀಸ್ ಠಾಣೆಗೆ ಬಂದ ದೂರು ಕೇಳಿ ಸ್ವತಃ ಪೊಲೀಸ್ ಅಧಿಕಾರಿಯೇ ತಬ್ಬಿಬ್ಬಾಗಿದ್ದಾರೆ. ಮಹಿಳೆಯೊಬ್ಬಳು ತನ್ನ ಪತಿ ಹಾಗೂ ಪ್ರೇಮಿ ಇಬ್ಬರೊಂದಿಗೂ ಒಟ್ಟಿಗೇ ಸಂಸಾರ ನಡೆಸಲು ಅನುಮತಿ ಕೊಡಿಸುವಂತೆ ಪೊಲೀಸರ ಬಳಿ ಅರ್ಜಿಯೊಂದಿಗೆ ಆಗಮಿಸಿದ್ದಾಳೆ.

ಠಾಣೆಗೆ ಬಂತು ವಿಚಿತ್ರ ಒಪ್ಪಂದ ಅರ್ಜಿ!

ಮಹಮೂದಾಬಾದ್ ಠಾಣೆಗೆ ಪತಿ, ಪತ್ನಿ ಹಾಗೂ ಆಕೆಯ ಪ್ರೇಮಿ ಮೂವರೂ ಒಟ್ಟಿಗೇ ಆಗಮಿಸಿ ಲಿಖಿತ ಮನವಿ ಸಲ್ಲಿಸಿದ್ದಾರೆ. “ನಾವು ಮೂವರೂ ಒಪ್ಪಂದದ ಮೇರೆಗೆ ಒಂದೇ ಮನೆಯಲ್ಲಿ ವಾಸಿಸಲು ಬಯಸಿದ್ದೇವೆ. ಆದರೆ ಪತಿಯ ಕುಟುಂಬಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ನಮಗೆ ಒಟ್ಟಿಗೇ ಇರಲು ಪೊಲೀಸರು ಅನುಮತಿ ನೀಡಬೇಕು” ಎಂದು ಕೋರಿದ್ದಾರೆ.

ಶಿಫ್ಟ್ ಆಧಾರಿತ ಸಂಸಾರದ ಪ್ಲ್ಯಾನ್!

ತಮ್ಮ ಯೋಜನೆ ಬಗ್ಗೆ ವಿವರಿಸಿದ ಮಹಿಳೆ, “ನನ್ನ ಪತಿ ಹಗಲು ವೇಳೆ ಕೆಲಸಕ್ಕೆ ಹೋಗುವುದರಿಂದ ಆ ಸಮಯದಲ್ಲಿ ಪ್ರೇಮಿ ನನ್ನೊಂದಿಗೆ ಇರುತ್ತಾನೆ. ರಾತ್ರಿ ವೇಳೆ ಪ್ರೇಮಿ ನೈಟ್ ಶಿಫ್ಟ್ ಕೆಲಸಕ್ಕೆ ಹೋದಾಗ ಪತಿ ಮನೆಗೆ ಬಂದು ನನ್ನೊಂದಿಗೆ ಇರುತ್ತಾರೆ” ಎಂದು ಸಲೀಸಾಗಿ ಹೇಳಿದ್ದಾಳೆ.

ತಮ್ಮ 12 ವರ್ಷಗಳ ಸುದೀರ್ಘ ಸೇವೆಯಲ್ಲಿ ಇಂತಹ ವಿಚಿತ್ರ ಪ್ರಕರಣವನ್ನು ಎಂದೂ ನೋಡಿರಲಿಲ್ಲ ಎಂದು ಕೊತ್ವಾಲ್ ಅಧಿಕಾರಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ‘ಶಿಫ್ಟ್ ಸಂಸಾರದ’ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles