ರೋಮ್: ಇಟಲಿಯ ಶಿಕ್ಷಣ ವ್ಯವಸ್ಥೆ, ದೇಶದ ಸಂಸ್ಕೃತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಪ್ರಮುಖ ಹೆಜ್ಜೆಯನ್ನಿಟ್ಟಿದೆ. ದೇಶದ ಶಾಲೆಗಳಲ್ಲಿ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಬುರ್ಖಾ ಮತ್ತು ನಿಕಾಬ್‌ಗಳನ್ನು ನಿಷೇಧಿಸುವುದು, ತರಗತಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರುವುದು ಹಾಗೂ ವಲಸಿಗ ಪೋಷಕರಿಗೆ ಇಟಾಲಿಯನ್ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವ ಹೊಸ ನೂತನ ಮಸೂದೆಯನ್ನು ಸಚಿವ ಸಂಪುಟಕ್ಕೆ ತರಲು ಯೋಜನೆ ರೂಪಿಸಲಾಗಿದೆ.
ರೋಮ್‌ನಲ್ಲಿ ನಡೆದ ಜಿಯೋವೆಂಟು ನಾಜಿಯೋನಾಲೆ ಯುವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೆಲೋನಿ, “ಇಟಲಿಗೆ ಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಯಾರೇ ಆಗಲಿ, ಅವರು ನಮ್ಮ ಭಾಷೆಯನ್ನು ಕಲಿಯಬೇಕು, ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಮ್ಮ ನಿಯಮಗಳನ್ನು ಗೌರವಿಸಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ನಿರ್ಧಾರಗಳು ಮತ್ತು ನಿಯಮಗಳು:
ಬುರ್ಖಾ ಮತ್ತು ನಿಕಾಬ್ ನಿಷೇಧ: ಶಾಲೆಗಳಿಗೆ ವಿದ್ಯಾರ್ಥಿಗಳು ತಮ್ಮ ಮುಖವನ್ನು ಮರೆಮಾಚದೆ ಮುಕ್ತವಾಗಿ ಬರಬೇಕು. ಧರ್ಮ ಅಥವಾ ಸಾಂಪ್ರದಾಯಿಕ ಕಾರಣಗಳ ನೆಪದಲ್ಲಿ ಹೆಣ್ಣುಮಕ್ಕಳು ತಮ್ಮ ಗುರುತನ್ನು ಮರೆಮಾಚುವುದನ್ನು ಇಟಲಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ಮೆಲೋನಿ ಪ್ರತಿಪಾದಿಸಿದ್ದಾರೆ (ಟಿಪ್ಪಣಿ: ಮುಖ ತೆರೆದಿಡುವ ಹಿಜಾಬ್ ಪ್ರಸ್ತಾವನೆಯಲ್ಲಿ ಉಲ್ಲೇಖವಾಗಿಲ್ಲ, ಕೇವಲ ಮುಖ ಮುಚ್ಚುವ ಬುರ್ಖಾ ಮತ್ತು ನಿಕಾಬ್‌ಗಳನ್ನು ನಿಷೇಧಿಸಲು ಉದ್ದೇಶಿಸಲಾಗಿದೆ).
ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ: ಪ್ರತಿಯೊಂದು ತರಗತಿಯಲ್ಲಿ ವಿದೇಶಿ ಮೂಲದ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರ್ದಿಷ್ಟ ಪ್ರಮಾಣಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ತರಗತಿಯಲ್ಲಿ ಸ್ಥಳೀಯ ಇಟಾಲಿಯನ್ ವಿದ್ಯಾರ್ಥಿಗಳು ತಾವೇ ಅಲ್ಪಸಂಖ್ಯಾತರು (ಮೈನಾರ್ಟಿ) ಎಂಬ ಭಾವನೆಗೆ ಒಳಗಾಗಬಾರದು ಹಾಗೂ ಭಾಷಾ ಸಮಸ್ಯೆಯಿಂದ ಶಿಕ್ಷಣದ ಗುಣಮಟ್ಟ ಕುಸಿಯಬಾರದು ಎಂಬುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಪೋಷಕರಿಗೆ ಇಟಾಲಿಯನ್ ಭಾಷೆ ಕಡ್ಡಾಯ: ಇಟಲಿ ಶಿಕ್ಷಣ ವ್ಯವಸ್ಥೆಯೊಂದಿಗೆ ಬೆರೆಯಲು ಹೆಣಗಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ಇಟಾಲಿಯನ್ ಭಾಷಾ ತರಬೇತಿಯನ್ನು ಪಡೆಯಬೇಕು. ಇದರಿಂದ ಪೋಷಕರು ಮತ್ತು ಶಾಲೆಯ ನಡುವೆ ಉತ್ತಮ ಸಂವಹನ ಸಾಧ್ಯವಾಗುತ್ತದೆ ಎಂದು ಸರ್ಕಾರ ಪ್ರತಿಪಾದಿಸಿದೆ.
ಈ ಹೊಸ ಕರಡು ಮಸೂದೆಯು ಸಚಿವ ಸಂಪುಟದ ಅನುಮೋದನೆ ಪಡೆದ ನಂತರ 60 ದಿನಗಳ ಒಳಗೆ ಇಟಲಿ ಸಂಸತ್ತಿನಲ್ಲಿ ಅನುಮೋದನೆಗೊಳ್ಳಬೇಕಿದೆ. ಸರ್ಕಾರದ ಈ ಕಠಿಣ ಕ್ರಮಗಳು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂಸ್ಕೃತಿ ರಕ್ಷಣೆಯ ನಡುವಿನ ಚರ್ಚೆಯನ್ನು ಯುರೋಪ್‌ನಾದ್ಯಂತ ಮತ್ತೆ ಮುನ್ನೆಲೆಗೆ ತಂದಿವೆ.
- Brothers of Italy
- Foreign Student Cap Italy
- Giorgia Meloni
- Italy Burqa Ban
- Italy Education Policy
- Italy Immigration Rules
- Mandatory Italian Language Parents
- Niqab Ban in Italian Schools
- World News in Kannada.
- ಇಟಲಿ ಪ್ರಧಾನಿ
- ಇಟಲಿ ವಲಸೆ ನೀತಿ
- ಇಟಲಿ ಶಾಲೆಗಳಲ್ಲಿ ಬುರ್ಖಾ ನಿಷೇಧ
- ಇಟಲಿ ಶಿಕ್ಷಣ ನಿಯಮಗಳು
- ಇಟಾಲಿಯನ್ ಭಾಷೆ ಕಡ್ಡಾಯ
- ಜಾರ್ಜಿಯಾ ಮೆಲೋನಿ
- ನಿಕಾಬ್ ನಿಷೇಧ
- ವಿದೇಶಿ ವಿದ್ಯಾರ್ಥಿಗಳ ಮಿತಿ
- ವಿದೇಶಿ ಸುದ್ದಿ





Leave a comment