SUDDIKSHANA KANNADA NEWS/ DAVANAGERE/ DATE:16-03-2024
ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ 24/7 ನಿರಂತರ ಕುಡಿಯುವ ನೀರು ಪೂರೈಸಲಾಗುತ್ತಿದೆ. ಗ್ರಾಹಕರಿಂದ ಬಳಕೆಗೆ ತಕ್ಕಂತೆ ನೀರಿನ ಶುಲ್ಕ ಸಂಗ್ರಹಣೆ ಕಾರ್ಯವು ಪ್ರಗತಿಯಲ್ಲಿರುತ್ತದೆ.
ನೀರಿನ ಶುಲ್ಕವನ್ನು ಬಳಕೆಗೆ ತಕ್ಕಂತೆ ನಗರಸಭೆ ಆವರಣದಲ್ಲಿರುವ ಹಣ ಪಾವತಿ ಕೇಂದ್ರದಲ್ಲಿಯೇ ಪಾವತಿಸಿ ರಶೀದಿ ಪಡೆಯಬೇಕು. ಅಥವಾ hariharawater.co.in ಆನ್ಲೈನ್ ಮೂಲಕ ಪಾವತಿಸಬಹುದು.
ಬಿಲ್ ವಿತರಕರು, ಮೀಟರ್ ರೀಡರ್ ಕೈಯಲ್ಲಿ ಹಣ ಕೊಡಬಾರದು. ಯೋಜನಾ ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯನ್ನು 8 ವರ್ಷಗಳ ಅವಧಿಯವರೆಗೆ ಗುತ್ತಿಗೆದಾರರಿಗೆ ನೀಡಲಾಗಿದ್ದು, ನೀರಿನ ಶುಲ್ಕ ಪಾವತಿಸಿ ನೀರು ಸರಬರಾಜು ಯೋಜನೆ ಕಾಮಗಾರಿಗಳ ಅಭಿವೃದ್ಧಿಗೆ ಸಹಕರಿಸಬೇಕು.
ತುಂಗಾಭದ್ರ ನದಿ ಪಾತ್ರದಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ನೀರು ಬಳಕೆದಾರರು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ನೀರನ್ನು ಮಿತವಾಗಿ ಬಳಸಬೇಕು. ಕುಡಿಯುವ ನೀರು ಸರಬರಾಜು ಪೈಪ್ ಲೈನ್ಗೆ ಅನಧಿಕೃತ, ಅಕ್ರಮ ನಳ ಸಂಪರ್ಕಗಳು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಹಾಗೂ ಕಾನೂನಿನ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದು.
ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಕೂಡಲೇ ಗ್ರಾಹಕರ ಸೇವಾ ಕೇಂದ್ರ, ದೂ.ಸಂ: 6366962668 ಸಂಪರ್ಕಿಸಬೇಕೆಂದು ಪೌರಾಯುಕ್ತರು ತಿಳಿಸಿದ್ದಾರೆ.