ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತರಳಬಾಳು ಹುಣ್ಣಿಮೆಯತ್ತ ಎಲ್ಲರ ಚಿತ್ತ: ಸಿದ್ಧತೆ ಹೇಗೆ ನಡೆಯುತ್ತಿದೆ? ಭಕ್ತರಿಗೆ ಸಂಗ್ರಹವಾಗುವ ದೇಣಿಗೆ ಎಷ್ಟು ಗೊತ್ತಾ?

On: December 22, 2024 4:29 PM
Follow Us:
---Advertisement---

ದಾವಣಗೆರೆ: ತುಂಗಾಭದ್ರೆಯ ನೀರಿನಿಂದ ಹಸಿರಾಗಿರುವ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಫೆ.4ರಿಂದ 9 ದಿನ ಅದ್ದೂರಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದ್ದು, ಸಿದ್ಧತೆ ಆರಂಭಗೊಂಡಿದೆ. ಭರದ ಕೆಲಸಗಳು ಶುರುವಾಗಿದ್ದು, ಎಲ್ಲರ ಚಿತ್ತ ತರಳಬಾಳು ಹುಣ್ಣಿಮೆಯತ್ತ ನೆಟ್ಟಿದೆ.

ಸಿರಿಗೆರೆಯ ಸಧ್ಧರ್ಮ ನ್ಕಾಯಪೀಠದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಮುದಾಯಗಳ ಮುಖಂಡರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

9 ದಿನಗಳ ವೈಭವದ ತರಳಬಾಳು ಹುಣ್ಣಿಮೆ ಮಹೋತ್ತವ ಆಚರಣೆಗೆ ನೆರವಾಗಲು ಭಕ್ತರು ₹1.26 ಕೋಟಿ ದೇಣಿಗೆ ನೀಡುವುದಾಗಿ ವಾಗ್ದಾನ ನೀಡಿದರು. ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯಗಳ ಭಕ್ತರೂ
ನೆರವಿಗೆ ಮುಂದಾಗಿದ್ದಾರೆ.

ಕೋಗುಂಡೆ ದ್ಯಾಮಣ್ಣ, ಕೋಗುಂಡೆ ಮಂಜುನಾಥ್‌,ಹಾಗೂ ಚೌಲಿಹಳ್ಳಿ ಶಶಿ ಪಾಟೀಲ್‌ ₹10 ಲಕ್ಷ ನೀಡುವುದಾಗಿ ತಿಳಿಸಿದರು.ಭರಮಸಾಗರ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಭಕ್ತರಿಂದ ಹೆಚ್ಚಿನ ಕಾಣಿಕೆ ಸಂಗ್ರಹಿಸುವ ಉದ್ದೇಶವಿದೆ. ಇದಕ್ಕೆ ಸ್ವಾಮೀಜಿ ಭಕ್ತರ ಸಮೃತಿ ಪಡೆದರು. ಉತ್ಪವದ ಖರ್ಚುತೆಗೆದು, ಉಳಿದ ಹಣವನ್ನು ಈ ಬಾರಿ ಸಮಾಜ ಸೇವೆಗೆ ಬಳಸುವುದಾಗಿ ಶ್ರೀಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಅರ್ಧ ಹಣವನ್ನು ಭರಮಸಾಗರ ಕೆರೆ ಯೋಜನೆಯ ತುರ್ತುಕೆಲಸಗಳಿಗೆ ಮೀಸಲಿಡುವುದು. ಉಳಿದ ಅರ್ಧ ಹಣವನ್ನು ಸಿರಿಗೆರೆಯ ಶಾಲಾ- ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳ ಉಚಿತ ಮತ್ತು ವಸತಿಗೆ ಬಳಸಿಕೊಳ್ಳುವುದಾಗಿ ತಿಳಿಸಿದರು.

2024ರಲ್ಲಿಯೇ ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿತ್ತು. ಆಗ ಬರ ಆವರಿಸಿಕೊಂಡಿದ್ದರಿಂದ ಮುಂದೂಡಲಾಗಿತ್ತು. ಈಗ ಸಡಗರ ಮತ್ತು ಸಂಭ್ರಮದಿಂದ ಆಚರಿಸಲು
ಕಾಲ ಒದಗಿಬಂದಿದೆ’ ಎಂದು ಸಾನ್ನಿಧ್ಯ ವಹಿಸಿದ್ದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ತಿಳಿಸಿದರು.

ತರಳಬಾಳು ಹುಣ್ಣಿಮೆ ಸಂಘರ್ಷಗಳ ಮಹೋತ್ಪವವಲ್ಲ. ಇದು ಸಮನ್ವತೆಯ ಸಂದೇಶ ಸಾರುವ ಉತ್ಪವ. ಎಲ್ಲರೂಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಆಚರಿಸಬೇಕು. ಇದು ರಾಷ್ಟ್ರಕವಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದು ಸಲಹೆ ನೀಡಿದರು.

ಹುಣ್ಣಿಮೆ ಆಚರಣೆಯಲ್ಲಿ ಎಲ್ಲಾ ಸಮುದಾಯಗಳ ಭಕ್ತರೂ ಸೇರಬೇಕು. ಭರಮಸಾಗರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಸಮಿತಿ ರಚಿಸಿ ಅವರನ್ನು ತೊಡಗಿಸಿಕೊಳ್ಳಬೇಕು ಎಂಬುದು ಅಪೇಕ್ಷೆಯಾಗಿದೆ. ಎಂದು ಶ್ರೀಗಳು ಹೇಳಿದರು. ಹುಣ್ಣಿಮೆ ಮಹೋತ್ತವದ ವೇದಿಕೆ ಕಾರ್ಯಕ್ರಮಗಳಲ್ಲಿ ಹೊಸತನ ತರುವ. ಆಲೋಚನೆ ಇದೆ. ಈ ಬಾರಿ ಒಂದೊಂದು ದಿನ ನಿರ್ದಿಷ್ಟ ವಿಚಾರಗಳ ಮಂಥನ ನಡೆಯುತ್ತದೆ. ಸಂಸ್ಕೃತಿ ಮತ್ತು ಸಮಾಜ, ಮಹಿಳೆ, ಧರ್ಮ, ರಾಜಕಾರಣ, ಶರಣ ಸಾಹಿತ್ಯ, ಆರೋಗ್ಯ, ಕೃಷಿ ಮತ್ತು ಜಲ ಸಂರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಚಿಂತನಾ ಸಭೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಎಚ್‌. ಆಂಜನೇಯ, ಶಾಸಕ ಎಂ. ಚಂದ್ರಪ್ಪ, ಬಿ. ದೇವೇಂದ್ರಪ್ಪ, ಮುಖಂಡರಾದ ಕೋಗುಂಡೆ ಮಂಜುನಾಥ್‌, ಜಿ.ಕೆ. ನಟರಾಜ್‌, ಡಿ.ವಿ.ಎಸ್‌. ಪ್ರವೀಣ್‌ ಕುಮಾರ್‌ ಮತ್ತಿತರರು ಹಾಜರಿದ್ದರು.

ಜಿ.ಬಿ. ತೀರ್ಥಪ್ಪ,ತಿಪೇಸ್ನಾಮಿ, ಎಚ್‌. ಎಂ. ದ್ಯಾಮಣ್ಣ, ಎಸ್‌.ಎಂ.ಎಲ್‌. ತಿಪ್ಪೇಸ್ವಾಮಿ, ಸಾಮಿಲ್‌ ಶಿವಣ್ಣ ಚೌಲಿಹಳ್ಳಿ ಶಶಿ, ಶೈಲೇಶ್ ಕುಮಾರ್ ಇನ್ನಿತರ ಮುಖಂಡರು ಹಾಜರಿದ್ದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್‌.
ಮರುಳಸಿದ್ದಯ್ಯ ಮರುಳಸಿದ್ದಯ್ಯ ವಂದಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment