Home ದಾವಣಗೆರೆ ದಾವಣಗೆರೆ ಯುಬಿಡಿಟಿ ಕಾಲೇಜಿನ 19 ವಿದ್ಯಾರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ ಆಯ್ಕೆ
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ದಾವಣಗೆರೆ ಯುಬಿಡಿಟಿ ಕಾಲೇಜಿನ 19 ವಿದ್ಯಾರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ ಆಯ್ಕೆ

Share
ಭಾರತ್
Share

ದಾವಣಗೆರೆ: ಇಲ್ಲಿನ ಯು.ಬಿ.ಟಿ.ಡಿ. ಇಂಜಿನಿಯರಿಂಗ್ ಕಾಲೇಜನ ವಿದ್ಯಾರ್ಥಿಗಳು ಭಾರತ ಸರ್ಕಾರದ ಸಾರ್ವಜನಿಕ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಗೆ ಕಾಲೇಜಿನ ಒಟ್ಟು 19 ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದು ಸಾಧನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಗೆ ಇ ಅಂಡ್ ಸಿ ವಿಭಾಗದ ವಿದ್ಯಾರ್ಥಿಗಳಾದ ಆನಂದ ಎಚ್, ಭಾನು, ಭೋದರಾಜ ಎಚ್, ಚಂದನ್ ಎಸ್. ಹಡಗಲಿ, ಪ್ರಿಯಾಂಕ ಎನ್, ರಾಜೇಶ್ವರಿ ಎಸ್. ಭಜಂತ್ರಿ, ಶಿವಕುಮಾರ ಗೌಡರ, ಸಿಂಚನಾ ದೇವರಾಜ ದೊಡ್ಡಗೌಡರ, ವೀರೇಶ್ ಕೊಡ್ಲೇಪ್ಪನವರ ಮತ್ತು ಸಿಎಸ್&ಇ ವಿಭಾಗದ ವಿದ್ಯಾರ್ಥಿಗಳಾದ ಗುರುಬಸವ ಬಿ, ಶ್ರೀಲಕ್ಷ್ಮೀ ಎಲ್. ಪ್ರಸಾಂತಕುಮಾರ, ಮೌನೇಶ ಹಾಗೂ ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳಾದ ಸಿದ್ದೇಶ್ ಬಿ, ಉಲ್ಲಾಸ ಎಚ್.ಎ, ಚನ್ನಬಸವ ಅವರುಗಳು ಆಯ್ಕೆಯಾಗಿದ್ದಾರೆ.

ಕಾರವಾರದಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಗೆ ಇ ಅಂಡ್ ಸಿ ವಿಭಾಗದ ವಿದ್ಯಾರ್ಥಿಗಳಾದ ಕಿರಣ್ ಕುಮಾರ್ ಕರ್ಕಿ, ಲಕ್ಷ್ಮೀನಾರಾಯಣ, ಸುದೇಪ್ ಚಂದ್ರಶೇಖರ್ ವಾಲಿಕಾರ್, ಯೋಗಾನಂದ ಆರ್ ಆಯ್ಕೆಯಾಗಿದ್ದರೆ, ಹೈದರಾಬಾದ್‌ನಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಗೆ ಇ ಅಂಡ್ ಸಿ ವಿಭಾಗದ ವಿದ್ಯಾರ್ಥಿ ಶಂಕರ್ ನೇಮಕಗೊಂಡಿದ್ದಾರೆ.

ಉದ್ಯೋಗ ಪಡೆದು ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ವಿಟಿಯು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಎಸ್. ವಿದ್ಯಾಶಂಕರ್, ಕುಲಸಚಿವ ಡಾ. ಪ್ರಸಾದ್ ಬಿ ರಾಂಪುರೆ, ಯುಬಿಡಿಟಿಸಿಇ ಕಾಲೇಜಿನ ಪ್ರಾಚಾರ್ಯರಾದ ಡಾ. ನಾಗರಾಜಪ್ಪ ಹಾಗೂ ಉದ್ಯೋಗ ಮತ್ತು ತರಬೇತಿ ಅಧಿಕಾರಿಗಳಾದ ಡಾ. ವೆಂಕಟರಮಣ ಅವರುಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆ. ಎಸ್. ಅಪ್ರಮೇಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *