Home ದಾವಣಗೆರೆ ಕುಟುಂಬದಿಂದ ದೂರವಿರುವುದೇ ಸ್ವಾತಂತ್ರ್ಯವಲ್ಲ: ಪೋಷಕರೊಂದಿಗೆ ವಾಸಿಸುವ ಬಗ್ಗೆ ಐಶ್ವರ್ಯಾ ರೈ ಹಳೆಯ ಹೇಳಿಕೆ ಈಗ ವೈರಲ್!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಕುಟುಂಬದಿಂದ ದೂರವಿರುವುದೇ ಸ್ವಾತಂತ್ರ್ಯವಲ್ಲ: ಪೋಷಕರೊಂದಿಗೆ ವಾಸಿಸುವ ಬಗ್ಗೆ ಐಶ್ವರ್ಯಾ ರೈ ಹಳೆಯ ಹೇಳಿಕೆ ಈಗ ವೈರಲ್!

Share
ಐಶ್ವರ್ಯಾ ರೈ
Share

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಈ ಹಿಂದೆ ಅಮೆರಿಕದ ಪ್ರಸಿದ್ಧ ‘ದಿ ಲೇಟ್ ಶೋ ವಿತ್ ಡೇವಿಡ್  ಕಾರ್ಯಕ್ರಮದಲ್ಲಿ ನೀಡಿದ್ದ ಹಳೆಯ ಸಂದರ್ಶನದ ವೀಡಿಯೊ ತುಣುಕೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಈ ಸಂದರ್ಶನದಲ್ಲಿ ಅವರು ಭಾರತೀಯ ಮತ್ತು ಅಮೆರಿಕನ್ ಕುಟುಂಬ ಸಂಸ್ಕೃತಿಯ ನಡುವಿನ ವ್ಯತ್ಯಾಸ ಹಾಗೂ ಪೋಷಕರೊಂದಿಗೆ ವಾಸಿಸುವ ಕುರಿತು ನೀಡಿರುವ ಹೇಳಿಕೆ ನೆಟ್ಟಿಗರ ಗಮನ ಸೆಳೆದಿದೆ.

ಅಮೆರಿಕದಲ್ಲಿ ಯುವಕರು ಪೋಷಕರಿಂದ ದೂರವಾಗಿ ವಾಸಿಸುವ ಪದ್ಧತಿಯ ಕುರಿತು ಮಾತನಾಡಿದ್ದ ಐಶ್ವರ್ಯಾ, “ನನ್ನ ವೃತ್ತಿಯ ಕಾರಣದಿಂದಾಗಿ ನಾನು ಸದಾ ಪ್ರಯಾಣದಲ್ಲಿರುತ್ತೇನೆ. ಇದರಿಂದ ಕುಟುಂಬದೊಂದಿಗೆ ಕಳೆಯಲು ಸಿಗುವ ಸಮಯ ಬಹಳ ಕಡಿಮೆ. ನಮಗೆ ಒಟ್ಟಿಗೆ ಕುಳಿತು ಊಟ ಮಾಡಲು ಸಿಗುವ ಅಪರೂಪದ ದಿನಗಳನ್ನು ನಾವು ಬಹಳ ಗೌರವಿಸುತ್ತೇವೆ,” ಎಂದು ಹೇಳಿದ್ದರು.

ಇದೇ ವೇಳೆ, ಡೇವಿಡ್ ಲೆಟರ್‌ಮ್ಯಾನ್ ಅವರು ಐಶ್ವರ್ಯಾ ಅವರಲ್ಲಿ ‘ನೀವು ಸ್ವತಂತ್ರ ಮಹಿಳೆಯೇ?’ ಎಂದು ಪ್ರಶ್ನಿಸಿದಾಗ, “ಖಂಡಿತವಾಗಿಯೂ ಹೌದು. ಆದರೆ ಕುಟುಂಬದಿಂದ ದೂರ ಹೋಗಿ ಪ್ರತ್ಯೇಕವಾಗಿ ವಾಸಿಸುವುದು ಒಂದೇ ಸ್ವಾತಂತ್ರ್ಯದ ಸಂಕೇತ ಅಥವಾ ಹೇಳಿಕೆ ಎಂದು ನಾನು ಭಾವಿಸುವುದಿಲ್ಲ,” ಎಂದು ಐಶ್ವರ್ಯಾ ಖಡಕ್ ಆಗಿ ಉತ್ತರಿಸಿದ್ದರು.

ಮಣಿರತ್ನಂ ಅವರ ‘ಇರುವರ್’ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಐಶ್ವರ್ಯಾ ರೈ, ನಂತರ ಭಾರತೀಯ ಚಿತ್ರರಂಗದ ಪ್ರಮುಖ ನಟಿಯಾಗಿ ಬೆಳೆದು ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *