Home ದಾವಣಗೆರೆ “ಪ್ರತಿಮೆಗಳನ್ನೇ ಬಿಡದ ಸಮಾಜದಲ್ಲಿ ಹೆಣ್ಣುಮಕ್ಕಳು ಸೇಫ್ ಹೇಗೆ?”: ಮೀರಾ ರಸ್ತೆಯ ದೃಶ್ಯ ಕಂಡು ಮಹಿಳೆಯರ ಆಕ್ರೋಶ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಪ್ರತಿಮೆಗಳನ್ನೇ ಬಿಡದ ಸಮಾಜದಲ್ಲಿ ಹೆಣ್ಣುಮಕ್ಕಳು ಸೇಫ್ ಹೇಗೆ?”: ಮೀರಾ ರಸ್ತೆಯ ದೃಶ್ಯ ಕಂಡು ಮಹಿಳೆಯರ ಆಕ್ರೋಶ!

Share
ಮೀರಾ
Share

ಥಾಣೆ: ಮಹಾರಾಷ್ಟ್ರದ ಥಾಣೆಯ ಮೀರಾ ರಸ್ತೆಯ ಶಾಂತಿ ಭಾಗ್ ಪ್ರದೇಶದಲ್ಲಿ ಸಾರ್ವಜನಿಕರಿಗಾಗಿ ಸ್ಥಾಪಿಸಲಾದ ಹೆಣ್ಣುಮಕ್ಕಳ ಪ್ರತಿಮೆಗಳನ್ನು ದುಷ್ಕರ್ಮಿಗಳು ವಿಕೃತ ರೀತಿಯಲ್ಲಿ ಧ್ವಂಸಗೊಳಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಓದುತ್ತಿರುವಂತೆ ವಿನ್ಯಾಸಗೊಳಿಸಲಾದ ಈ ಪ್ರತಿಮೆಗಳು ಹಿಡಿದಿರುವ ಪುಸ್ತಕಗಳ ಮೇಲೆ ಅತ್ಯಂತ ಅಶ್ಲೀಲ ಹಾಗೂ ಲೈಂಗಿಕ ಪ್ರಚೋದಕ ಪದಗಳನ್ನು (“Open your panty”) ಬರೆಯಲಾಗಿದೆ.

ಈ ಘಟನೆಯನ್ನು ವಿಷಯ ಸಂಯೋಜಕಿ (Content Creator) ರೋಶ್ನಿ ಗುಪ್ತಾ ಎಂಬುವವರು ವೀಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

“ಜನರ ಮನಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ರಸ್ತೆಯ ಬದಿಯಲ್ಲಿರುವ ಪ್ರತಿಮೆಗಳನ್ನು ಬಿಡುತ್ತಿಲ್ಲ, ಇಂತಹ ವಿಕೃತಿಯ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಹೇಗೆ ಸುರಕ್ಷಿತವಾಗಿರಲು ಸಾಧ್ಯ?” ಎಂದು ಅವರು ಪ್ರಶ್ನಿಸಿ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆ ಗ್ವಾಲಿಯರ್‌ನಲ್ಲಿ ಯೋಗ ಭಂಗಿಯಲ್ಲಿದ್ದ ಮಹಿಳಾ ಚಿತ್ರಗಳ ಮೇಲೆಯೂ ಇಂತಹುದೇ ಅಶ್ಲೀಲ ಪದಗಳನ್ನು ಬರೆದು ವಿಕೃತಿ ಮೆರೆಯಲಾಗಿತ್ತು. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಭದ್ರತೆ ಹಾಗೂ ಜನರ ವಿಕೃತ ಮನಸ್ಥಿತಿಯ ಕುರಿತು ಮತ್ತೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

Share

Leave a comment

Leave a Reply

Your email address will not be published. Required fields are marked *