ನವದೆಹಲಿ: ಡಿಜಿಟಲ್ ಸಂವಹನವನ್ನು ಸುಲಭ ಮತ್ತು ವೇಗಗೊಳಿಸಲು ಪರಿಚಯಿಸಲಾದ ಎಮೋಜಿಗಳು ಇದೀಗ ಹೊಸ ಸಂವಹನ ಗೊಂದಲಗಳಿಗೆ ಕಾರಣವಾಗುತ್ತಿವೆ.
ಮುಖ್ಯವಾಗಿ ‘ಥಂಬ್ಸ್-ಅಪ್’ (👍) ಎಮೋಜಿ ಬಳಕೆ ಕುರಿತು ಯುವ ಪೀಳಿಗೆ ಮತ್ತು ಹಿರಿಯರ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ.
ಹಿರಿಯರು ಮತ್ತು ವೃತ್ತಿಪರರು ಈ ಎಮೋಜಿಯನ್ನು “ಸರಿ”, “ವಿಷಯ ತಲುಪಿದೆ” ಅಥವಾ “ಸಮ್ಮತಿ” ಎಂದು ಸರಳವಾಗಿ ಹೇಳಲು ಬಳಸುತ್ತಾರೆ.
ಆದರೆ ಯುವಜನತೆ ಇದನ್ನು ಸಂಭಾಷಣೆಯನ್ನು ತಕ್ಷಣ ಮುಗಿಸುವ ಉಡಾಫೆ, ನಿರಾಸಕ್ತಿ ಅಥವಾ ‘ಪ್ಯಾಸಿವ್-ಅಗ್ರೆಸಿವ್’ (Passive-Aggressive) ವರ್ತನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ.
ಮನಃಶಾಸ್ತ್ರಜ್ಞರ ಪ್ರಕಾರ, ಸಂದೇಶಗಳಲ್ಲಿ ಧ್ವನಿ ಮತ್ತು ಮುಖಭಾವನೆಗಳ ಕೊರತೆ ಇರುವುದರಿಂದ ಜನರು ಎಮೋಜಿಗಳನ್ನು ತಮ್ಮ ಮಾನಸಿಕ ಸ್ಥಿತಿಗೆ ತಕ್ಕಂತೆ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ.
ಕಚೇರಿ ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಸರಿಯಾದ ಪದಗಳನ್ನು ಬಳಸುವುದು ಇಂತಹ ತಪ್ಪು ತಿಳುವಳಿಕೆಗಳನ್ನು ತಡೆಯಲು ಸಹಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.





Leave a comment