Home ದಾವಣಗೆರೆ “ಅಮೆರಿಕನ್ನರಿಗೆ ಎಲ್ಲವೂ ಗೊತ್ತು ಅಂದ್ಕೊಂಡಿದ್ದೆ”: ಯುಎಸ್ ಸಹೋದ್ಯೋಗಿಗಳ ರಹಸ್ಯ ಬಯಲು ಮಾಡಿದ ಭಾರತೀಯ ಯುವತಿ!
ದಾವಣಗೆರೆನವದೆಹಲಿಬೆಂಗಳೂರು

“ಅಮೆರಿಕನ್ನರಿಗೆ ಎಲ್ಲವೂ ಗೊತ್ತು ಅಂದ್ಕೊಂಡಿದ್ದೆ”: ಯುಎಸ್ ಸಹೋದ್ಯೋಗಿಗಳ ರಹಸ್ಯ ಬಯಲು ಮಾಡಿದ ಭಾರತೀಯ ಯುವತಿ!

Share
ಅಮೆರಿಕ
Share

ವಾಷಿಂಗ್ಟನ್: ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಹರಿಣಿ ಎಂಬ ಮಹಿಳೆ, ವಿದೇಶಿ ಕಂಪನಿಯಲ್ಲಿ ತಾವು ಕಲಿತ ಪ್ರಮುಖ ಪಾಠವೊಂದನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದು, ಅದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಆರಂಭದಲ್ಲಿ ತಮ್ಮ ಅಮೆರಿಕನ್ ಸಹೋದ್ಯೋಗಿಗಳು ತಮಗಿಂತ ಹೆಚ್ಚು ಜ್ಞಾನ ಹೊಂದಿದ್ದಾರೆ ಎಂದು ಅವರು ಭಾವಿಸಿದ್ದರು. ಆದರೆ ದಿನ ಕಳೆದಂತೆ ಅಸಲಿ ವಿಚಾರ ಏನೆಂಬುದು ಅವರಿಗೆ ಅರಿವಾಯಿತು.

ಅಮೆರಿಕದ ಉದ್ಯೋಗಿಗಳು ವಿಷಯ ಸಂಪೂರ್ಣವಾಗಿ ತಿಳಿಯದಿದ್ದರೂ ಸಹ, ತಮ್ಮ ಅನಿಸಿಕೆಗಳನ್ನು ಆಫೀಸ್ ಸಭೆಗಳಲ್ಲಿ ಧೈರ್ಯವಾಗಿ ಹಂಚಿಕೊಳ್ಳುತ್ತಾರೆ. ಭಾರತದಲ್ಲಿ ಬೆಳೆದ ನಮಗೆ “ಸಂಪೂರ್ಣವಾಗಿ ಖಚಿತವಾದ ಮೇಲೆಯೇ ಮಾತನಾಡು” ಎಂದು ಕಲಿಸಲಾಗಿರುತ್ತದೆ. ಇದರಿಂದಾಗಿ ನಮಗೆ ಸರಿಯಾದ ಕಲ್ಪನೆ ಇದ್ದರೂ, ಹೇಳಲು ಸೂಕ್ತ ಸಮಯ ಕಾಯುತ್ತಾ ಕೂರುವುದರಿಂದ ಅವಕಾಶ ಕೈತಪ್ಪುತ್ತದೆ ಎಂದು ಹರಿಣಿ ವಿವರಿಸಿದ್ದಾರೆ.

ಆತ್ಮವಿಶ್ವಾಸ ಎಂಬುದು ಹುಟ್ಟಿನಿಂದ ಬರುವುದಲ್ಲ, ಅದನ್ನು ಅಭ್ಯಾಸದಿಂದ ಬೆಳೆಸಿಕೊಳ್ಳಬಹುದು. ಪ್ರತಿಯೊಂದಕ್ಕೂ ನೂರಕ್ಕೆ ನೂರರಷ್ಟು ಪರ್ಫೆಕ್ಟ್ ಆಗಿರಲು ಕಾಯುವ ಬದಲು, ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಧೈರ್ಯ ತೋರುವುದೇ ನಿಜವಾದ ಆತ್ಮವಿಶ್ವಾಸ ಎಂದು ಅವರು ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *