Home ಕ್ರೈಂ ನ್ಯೂಸ್ ಅಪಘಾತದ ಕಥೆ ಸೃಷ್ಟಿ: ಇಬ್ಬರು ಪ್ರಿಯಕರರೊಂದಿಗೆ ಸೇರಿ ಪತಿ ಕೊಲೆಗೈದು ಸರೋವರಕ್ಕೆ ಶವ ಎಸೆದ ಪತ್ನಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಪಘಾತದ ಕಥೆ ಸೃಷ್ಟಿ: ಇಬ್ಬರು ಪ್ರಿಯಕರರೊಂದಿಗೆ ಸೇರಿ ಪತಿ ಕೊಲೆಗೈದು ಸರೋವರಕ್ಕೆ ಶವ ಎಸೆದ ಪತ್ನಿ ಬಂಧನ!

Share
ಪ್ರಿಯಕರ
Share

ಕಾಮಾರೆಡ್ಡಿ (ತೆಲಂಗಾಣ): ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ ಪತಿಯನ್ನು ಕೊಲೆ ಮಾಡಿ, ಆತನ ಸಾವನ್ನು ಆಕಸ್ಮಿಕ ಅಪಘಾತದಂತೆ ಬಿಂಬಿಸಲು ಯತ್ನಿಸಿದ ಪತ್ನಿ ಹಾಗೂ ಆಕೆಯಿಬ್ಬರು ಪ್ರಿಯಕರನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು 26 ವರ್ಷದ ದೈನಂದಿನ ಕೂಲಿ ಕಾರ್ಮಿಕ ಚಕಾಲಿ ಅಲಿಯಾಸ್ ಗುಮ್ಮಡಿ ಕಾಶಿರಾಂ ಎಂದು ಗುರುತಿಸಲಾಗಿದೆ.

ಅಕ್ಟೋಬರ್ 23 ರಂದು ಹನ್ಮಾಜಿಪೇಟೆ ಗ್ರಾಮದ ಹೊರವಲಯದಲ್ಲಿರುವ ಪಚೇರ ಚೆರುವು ಸರೋವರದಲ್ಲಿ ಕಾಶಿರಾಂ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಲಾಗಿದ್ದರೂ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಇದು ಕೊಲೆ ಎಂಬುದು ಬಹಿರಂಗಗೊಂಡಿದ್ದು, ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆಗೆ ಸಂಚು: ಪತ್ನಿ ಗುಮ್ಮಡಿ ಸವಿತಾಳೊಂದಿಗೆ ಸಂಬಂಧ ಹೊಂದಿದ್ದ ಚಿಂತಕಿಂಡಿ ರಾಮು ಹಾಗೂ ಪಶುಪುಲ ಸಂತೋಷ್ ಎಂಬಿಬ್ಬರು ಪ್ರಿಯಕರು ಸೇರಿ ಮದ್ಯ ಕುಡಿಸಿ ಕಾಶಿರಾಂ ಕುತ್ತಿಗೆಗೆ ನೈಲಾನ್ ಹಗ್ಗ ಬಿಗಿದು ಕೊಲೆ ಮಾಡಿದ್ದರು.

ಅಪಘಾತದಂತೆ ಬಿಂಬಿಸುವ ಯತ್ನ: ಕೊಲೆ ಮಾಡಿದ ಬಳಿಕ ಶವವನ್ನು ಸರೋವರಕ್ಕೆ ಎಸೆದು, ಇದು ಆಕಸ್ಮಿಕ ಸಾವು ಎಂದು ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಹೂಡಿದ ಸಂಚು ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ.

ಪೊಲೀಸ್ ತನಿಖೆ ಮತ್ತು ಬಂಧನ: ತಾಂತ್ರಿಕ ಸಾಕ್ಷ್ಯಗಳು ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ಅಕ್ಟೋಬರ್ 30 ರಂದು ಮೂವರನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 ಹಾಗೂ 238 ರಡಿ ಪ್ರಕರಣ ದಾಖಲಿಸಲಾಗಿದೆ.

ಕುಟುಂಬದ ದೂರು ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಬನ್ಸ್‌ವಾಡಾ ಪೊಲೀಸರು ನಡೆಸಿದ ತ್ವರಿತ ತನಿಖೆಯಿಂದ ಈ ಭೀಕರ ಹತ್ಯೆಯ ರಹಸ್ಯ ಬಹಿರಂಗಗೊಂಡಿದೆ.

Share

Leave a comment

Leave a Reply

Your email address will not be published. Required fields are marked *