ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡತೋಗೂರು ಪ್ರದೇಶದಲ್ಲಿ ನೂಡಲ್ಸ್ ಅತಿ ಖಾರವಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಕುಡಿತದ ಅಮಲಿನಲ್ಲಿದ್ದ ಮೂವರು ವ್ಯಕ್ತಿಗಳು ಫಾಸ್ಟ್ ಫುಡ್ ಅಂಗಡಿಯ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಅಸ್ಸಾಂ ಮೂಲದ ದೀಪಕ್ ಥಾಪಾ, ಹೇಮಾ ಮತ್ತು ಲಕ್ಷ್ಮಿ ಲಾಮಾ ಎಂಬುವವರೇ ಹಲ್ಲೆಗೊಳಗಾದ ಸಂತ್ರಸ್ತರು. ಆರೋಪಿಗಳು ಅಂಗಡಿಗೆ ನುಗ್ಗಿ ಸಿಬ್ಬಂದಿಯನ್ನು ಕೆಳಗೆ ತಳ್ಳಿ, ಕಾಲಿನಿಂದ ಒದ್ದು ದೌರ್ಜನ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೆ, ತಡೆಯಲು ಬಂದ ದಾರಿಹೋಕನೊಬ್ಬನ ಮೇೆಯೂ ದಾಳಿ ನಡೆಸಲಾಗಿದ್ದು, ಈ ಸಂಪೂರ್ಣ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ: ನೂಡಲ್ಸ್ ತುಂಬಾ ಖಾರವಾಗಿದೆ ಎಂದು ವಾಗ್ವಾದಕ್ಕಿಳಿದ ಆರೋಪಿಗಳಾದ ನಾಗರಾಜ್, ಚಂದ್ರು ಮತ್ತು ದೇವರಾಜ್ ಎಂಬುವವರು ಸಿಬ್ಬಂದಿಯನ್ನು ಥಳಿಸಿದ್ದಾರೆ.
ಸಂತ್ರಸ್ತರು ಅಸ್ಸಾಂ ಮೂಲದವರು: ಹಲ್ಲೆಗೊಳಗಾದ ಮೂವರು ಸಿಬ್ಬಂದಿ ಅಸ್ಸಾಂ ರಾಜ್ಯದವರಾಗಿದ್ದು, ಆರೋಪಿಗಳು ಕರ್ನಾಟಕದ ಚಾಮರಾಜನಗರ ಜಿಲ್ಲೆಯವರಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾಮಾನ್ಯವಾಗಿ ಗ್ರಾಹಕರು ಖಾರ ಹೆಚ್ಚಾದರೆ ನೀರು ಕೇಳುತ್ತಾರೆ ಅಥವಾ ಮೃದುವಾಗಿ ಮಾತನಾಡುತ್ತಾರೆ, ಆದರೆ ಮದ್ಯದ ಅಮಲಿನಲ್ಲಿ ಇಂತಹ ಅಮಾನವೀಯ ಕೃತ್ಯ ಎಸೆಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.





Leave a comment