SUDDIKSHANA KANNADA NEWS/ DAVANAGERE/ DATE:05-10-2024
ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದ ಸಾರ್ವಜನಿಕ ಹಿಂದೂ ಮಹಾಗಣಪತಿ ಮೆರವಣಿಗೆಯು ಈ ಬಾರಿ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ.
ಶೋಭಾ ಯಾತ್ರೆಯಲ್ಲಿ ಚಂಡೆನಾದ, ಡ್ರಮ್ ಗಮನ ಸೆಳೆಯಿತು. ಮಹಿಳೆಯರಿಗಾಗಿ ಪ್ರತ್ಯೇಕ ಸೇರಿದಂತೆ ಐದು ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಕಾಲೇಜು ವಿದ್ಯಾರ್ಥಿನಿಯರು, ಹುಡುಗಿಯರು ಮಹಿಳೆಯರು ಡಿಜೆ ಶಬ್ಧಕ್ಕೆ ಕುಣಿದು ಕುಪ್ಪಳಿಸಿದರು.
ದಾರ್ಶನಿಕರ ಮೂರ್ತಿ ಮೆರವಣಿಗೆ:
ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಂಟಿಂಗ್ಸ್, ಬಾವುಟ ಕಟ್ಟಲಾಗಿತ್ತು. ಬಸವಣ್ಣ, ವಾಲ್ಮೀಕಿ, ಕನಕದಾಸರು ಸೇರಿದಂತೆ 11 ಕ್ಕೂ ಹೆಚ್ಚು ದಾರ್ಶನಿಕರ ಮೂರ್ತಿಯನ್ನು ಮೆರವಣಿಗೆ ಸಾಗುವ ಮಾರ್ಗದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಶೋಭಾಯಾತ್ರೆಯಲ್ಲಿ ಯಾವುದೇ ರಾಜಕಾರಣಿಗಳು, ಚಿತ್ರನಟರು,ವೈಯಕ್ತಿಕ ಬಾವುಟ ಹಾಗೂ ಬ್ಯಾನರ್ ಪ್ರದರ್ಶನ ಮಾಡದಿರುವುದು ವಿಶೇಷ.
ಅಂಗಡಿ ಮುಂಗಟ್ಟು ಮುಚ್ಚಿಸಿದ ಪೊಲೀಸರು..!
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಎವಿಕೆ ರಸ್ತೆ, ಅಂಬೇಡ್ಕರ್ ಸರ್ಕಲ್, ಜಯದೇವ ವೃತ್ತ, ಪಿ. ಬಿ. ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದರು. ಯಾವುದೇ ರೀತಿಯ ತೊಂದರೆಯಾಗದಂತೆ ಮೆರವಣಿಗೆ ಸಾಗಿತು.
ಅಚ್ಚುಕಟ್ಟು ವ್ಯವಸ್ಥೆ:
ಇನ್ನೂ ಮೆರವಣಿಗೆಯುದ್ದಕ್ಕೂ ಅಚ್ಚುಕಟ್ಟು ವ್ಯವಸ್ಥೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕುಡಿಯುವ ನೀರು, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ರೈಸ್ ಬಾತ್, ಪಲಾವ್ ಟೇಸ್ಟ್ ಸವಿದವರು ಸಂತಸ ಪಟ್ಟರು.
ಬಿಗಿ ಭದ್ರತೆ:
ಇನ್ನೂ ಮೆರವಣಿಗೆ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡ ಕಾರಣಕ್ಕೆ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು. ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಿಂದಲೂ ಪೊಲೀಸರು ಭದ್ರತೆಗೆ ಆಗಮಿಸಿದ್ದರು. ಯಾವುದೇ ಸಮಸ್ಯೆ ಇಲ್ಲದೇ ಸುಸೂತ್ರವಾಗಿ, ಅಚ್ಚುಕಟ್ಟಾಗಿ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಿತು.