Home ಕ್ರೈಂ ನ್ಯೂಸ್ ನಾಸಿಕ್ TCS ‘ಮತಾಂತರ’ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿ ನಿದಾ ಖಾನ್ ಪತ್ತೆಗೆ ಪೊಲೀಸರ ತೀವ್ರ ಶೋಧ; ‘ನಾನು ಗರ್ಭಿಣಿ’ ಎಂದು ಜಾಮೀನು ಕೋರಿದ ಆರೋಪಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ನಾಸಿಕ್ TCS ‘ಮತಾಂತರ’ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿ ನಿದಾ ಖಾನ್ ಪತ್ತೆಗೆ ಪೊಲೀಸರ ತೀವ್ರ ಶೋಧ; ‘ನಾನು ಗರ್ಭಿಣಿ’ ಎಂದು ಜಾಮೀನು ಕೋರಿದ ಆರೋಪಿ!

Share
ನಾಸಿಕ್
Share

ಮುಂಬೈ/ನಾಸಿಕ್: ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಬಲವಂತದ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿರುವ ನಿದಾ ಖಾನ್ ಪತ್ತೆಗಾಗಿ ಆಕೆಯ ಪತಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಪದೇ ಪದೇ ಸ್ಥಳ ಬದಲಾಯಿಸುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ನಿದಾ ಖಾನ್ ಪತಿ ಮೊಯಿನ್ ನವೀದ್ ಇಕ್ಬಾಲ್ ಖಾನ್ ನೀಡಿದ ಮಾಹಿತಿಯಂತೆ ಪೊಲೀಸರು ಸಂಬಂಧಿಕರ ಮನೆಗೆ ತೆರಳಿದಾಗ ಅಲ್ಲಿ ಬೀಗ ಹಾಕಲಾಗಿತ್ತು. ಪ್ರಸ್ತುತ ನಿದಾ ಖಾನ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆಕೆ ನಾಸಿಕ್‌ನಲ್ಲಿರಬಹುದು ಎಂದು ಶಂಕಿಸಲಾಗಿದೆ. ಈ ಮಧ್ಯೆ, ನಿದಾ ಖಾನ್ ತಾನು “ತುಂಬು ಗರ್ಭಿಣಿ” ಎಂಬ ಕಾರಣ ನೀಡಿ ನಾಸಿಕ್ ಸ್ಥಳೀಯ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು (Anticipatory Bail) ಕೋರಿ ಅರ್ಜಿ ಸಲ್ಲಿಸಿದ್ದಾಳೆ.

ಪ್ರಕರಣದ ಹಿನ್ನೆಲೆ: TCS ನಾಸಿಕ್ ಘಟಕದ ಉದ್ಯೋಗಿಯೊಬ್ಬರು ತನ್ನ ಸಹೋದ್ಯೋಗಿ ದಾನಿಶ್ ಶೇಖ್ ವಿರುದ್ಧ ನೀಡಿದ ದೂರಿನಿಂದ ಈ ಜಾಲ ಬಯಲಿಗೆ ಬಂದಿತ್ತು. ನಿದಾ ಖಾನ್, ದಾನಿಶ್ ಶೇಖ್ ಅವರ ಸಹೋದರಿಯಾಗಿದ್ದು, ಈಕೆ ತನ್ನ ಅಧಿಕಾರ ಬಳಸಿ ಮಹಿಳಾ ಉದ್ಯೋಗಿಗಳಿಗೆ ಧರ್ಮ ಬದಲಿಸುವಂತೆ ಒತ್ತಡ ಹೇರುತ್ತಿದ್ದರು ಎಂಬ ಗಂಭೀರ ಆರೋಪವಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಪುರುಷರು ಮತ್ತು ಓರ್ವ ಹೆಚ್‌ಆರ್ ಮುಖ್ಯಸ್ಥೆ ಸೇರಿದಂತೆ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ TCS ಸಂಸ್ಥೆಯು ಅಧಿಕೃತ ಸ್ಪಷ್ಟನೆ ನೀಡಿದ್ದು, “ನಿದಾ ಖಾನ್ ನಮ್ಮ ಸಂಸ್ಥೆಯ ಹೆಚ್‌ಆರ್ ಮ್ಯಾನೇಜರ್ ಅಲ್ಲ ಮತ್ತು ಆಕೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ” ಎಂದು ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *