ನವದೆಹಲಿ: ಭುವನೇಶ್ವರ-ಹೊಸದೆಹಲಿ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ 14 ವರ್ಷದ ಬಾಲಕಿಗೆ ಅಸಭ್ಯ ಹಾವಭಾವ ಹಾಗೂ ಅಶ್ಲೀಲ ಸೂಚನೆಗಳನ್ನು ನೀಡಿದ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬನಿಗೆ ಆಕ್ರೋಶಗೊಂಡ ಸಹಯಾತ್ರಿಗಳು ಎಳೆದು ಕಾಲರ್ ಹಿಡಿದು ತರಾಟೆಗೆ ತೆಗೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ನವೆಂಬರ್ 13 ರಂದು ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರ ಸುರಕ್ಷತೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
Part 4 of N
2nd drunk guy caught pic.twitter.com/jX4NyqAhgZ— Petrichor (@Garhwali_Guy) November 14, 2026
ಮಧ್ಯಾಹ್ನದಿಂದಲೇ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿ, ಪೋಷಕರೊಂದಿಗೆ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಕಡೆಗೆ ಕಣ್ಣು ಹೊಡೆದು ಅಸಭ್ಯವಾಗಿ ವರ್ತಿಸಿದ್ದಾನೆ. ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ ನಂತರ, ಆಕ್ರೋಶಗೊಂಡ ಪ್ರಯಾಣಿಕರು ಆರೋಪಿಯನ್ನು ಪ್ರಶ್ನಿಸಿದ್ದಾರೆ. ರೈಲಿನಲ್ಲಿ ಎರಡು ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಪ್ರಯಾಣಿಕರು ಟಿಟಿಇ ಹಾಗೂ ಆರ್ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಯಾಣಿಕರ ಆಕ್ರೋಶ: ಅಪ್ರಾಪ್ತ ಬಾಲಕಿಗೆ ಅಸಭ್ಯ ವೀಕ್ಷಣೆ ಹಾಗೂ ಹಾವಭಾವ ತೋರಿದ ಕುಡುಕನನ್ನು ಯುವಕರು ಮೇಲಿನ ಬರ್ತ್ನಿಂದ ಎಳೆದು ತರಾಟೆಗೆ ತೆಗೆದುಕೊಂಡ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.
ಮಹಿಳೆಯರ ಆಕ್ರೋಶ: “ನಿಮ್ಮ ಮನೆಯಲ್ಲಿ ತಾಯಿ-ತಂಗಿ ಇಲ್ಲವೇ?” ಎಂದು ಮಹಿಳಾ ಪ್ರಯಾಣಿಕರು ಆರೋಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್ಪಿಎಫ್ ಬಂಧನ: ತೇಜಸ್ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ರೈಲ್ವೆ ರಕ್ಷಣಾ ಪಡೆ ಹಾಗೂ ಟಿಟಿಇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.





Leave a comment