ಅಹಲ್ಯಾನಗರ: ಮಹಾರಾಷ್ಟ್ರದ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಾಸಿಕ್ ನ ವಿವಾದಿತ ದೇವಮಾನವ ಅಶೋಕ್ ಖರಾತ್ ಅವರ ಆಪ್ತ ಸಹಾಯಕ ಜಿತೇಂದ್ರ ಶೆಲ್ಕೆ (55) ಮತ್ತು ಅವರ ಪತ್ನಿ ಅನುರಾಧಾ (50) ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಛತ್ರಪತಿ ಸಂಭಾಜಿನಗರದಿಂದ ಥಾಣೆಗೆ ಹೋಗುತ್ತಿದ್ದ ಇವರ ಕಾರು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಜಿತೇಂದ್ರ ಶೆಲ್ಕೆ ಅವರು ಖರಾತ್ ಅವರ ಉದ್ಯಮ ಪಾಲುದಾರರಾಗಿದ್ದರು ಮತ್ತು ‘ಶಿವನಿಕಾ ಟ್ರಸ್ಟ್’ನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.






Leave a comment