Home ಕ್ರೈಂ ನ್ಯೂಸ್ ಕೇರಳ ಹೈಕೋರ್ಟ್ ತೀರ್ಪು: ಅತ್ಯಾಚಾರ ಸಂತ್ರಸ್ತೆ 15 ವರ್ಷದ ಬಾಲಕಿಗೆ 27 ವಾರಗಳ ಗರ್ಭಪಾತಕ್ಕೆ ಅನುಮತಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೇರಳ ಹೈಕೋರ್ಟ್ ತೀರ್ಪು: ಅತ್ಯಾಚಾರ ಸಂತ್ರಸ್ತೆ 15 ವರ್ಷದ ಬಾಲಕಿಗೆ 27 ವಾರಗಳ ಗರ್ಭಪಾತಕ್ಕೆ ಅನುಮತಿ!

Share
ಕೇರಳ
Share

ಕೊಚ್ಚಿ: ಲೈಂಗಿಕ ದೌರ್ಜನ್ಯಕ್ಕೊಳಗಾಗಿ 27 ವಾರಗಳ ಗರ್ಭಿಣಿಯಾಗಿದ್ದ 15 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಕೇರಳ ಹೈಕೋರ್ಟ್ ಅನುಮತಿ ನೀಡಿ ಮಹತ್ವದ ತೀರ್ಪು ನೀಡಿದೆ. ಗರ್ಭಪಾತ ಮುಂದುವರಿಸಿದರೆ ಹುಟ್ಟುವ ಮಗುವಿಗೆ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯಕೀಯ ಮಂಡಳಿಯು 32 ವಾರಗಳವರೆಗೆ ಕಾಯುವಂತೆ ಸಲಹೆ ನೀಡಿತ್ತು. ಆದರೂ ಬಾಲಕಿಯ ಮಾನಸಿಕ ಆಘಾತ ಹಾಗೂ ಇಚ್ಛೆಯನ್ನು ಪರಿಗಣಿಸಿ ನ್ಯಾಯಮೂರ್ತಿ ಹರಿಸಂಕರ್ ವಿ. ಮೆನೆನ್ ಅವರು ಈ ಆದೇಶ ಹೊರಡಿಸಿದ್ದಾರೆ.

ದೌರ್ಜನ್ಯದ ಆಘಾತದಿಂದಾಗಿ ಗರ್ಭಧಾರಣೆಯನ್ನು ಮುಂದುವರಿಸಲು ಬಾಲಕಿ ಒಪ್ಪುತ್ತಿಲ್ಲ ಎಂದು ಗಮನಿಸಿದ ಕೋರ್ಟ್, ವಿಳಂಬವಿಲ್ಲದೆ ವೈದ್ಯಕೀಯ ಗರ್ಭಪಾತಕ್ಕೆ ವ್ಯವಸ್ಥೆ ಮಾಡುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶಿಸಿದೆ. ಬಾಲಕಿ ಮತ್ತು ಆಕೆಯ ಪೋಷಕರಿಂದ ಲಿಖಿತ ಒಪ್ಪಿಗೆ ಪಡೆದು ಈ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ. ಜತೆಗೆ, ಮಗು ಬದುಕುಳಿದರೆ ಅದಕ್ಕೆ ಅಗತ್ಯವಿರುವ ನವಜಾತ ಶಿಶುವಿನ ವೈದ್ಯಕೀಯ ಆರೈಕೆಯನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳಬೇಕು ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.

ವೈದ್ಯಕೀಯ ಮಂಡಳಿಯ ವರದಿ: 27 ವಾರಗಳ ಗರ್ಭದಲ್ಲಿ ಮಗುವಿಗೆ ತೀವ್ರ ಆರೋಗ್ಯ ಜಟಿಲತೆಗಳು ಮತ್ತು ಅಂಗವೈಕಲ್ಯದ ಅಪಾಯವಿರುವುದರಿಂದ 32 ವಾರಗಳವರೆಗೆ ಕಾಯುವುದು ಸೂಕ್ತ ಎಂದು ವೈದ್ಯಕೀಯ ಮಂಡಳಿ ಅಭಿಪ್ರಾಯಪಟ್ಟಿತ್ತು.

ನ್ಯಾಯಾಲಯದ ಸೂಚನೆ: ಬಾಲಕಿಯ ಇಚ್ಛೆಗೆ ಮನ್ನಣೆ ನೀಡಿರುವ ಕೋರ್ಟ್, ಗರ್ಭಪಾತದ ನಂತರ ಮಗು ಜೀವಂತವಾಗಿಲ್ಲದಿದ್ದರೆ, ತನಿಖೆಗಾಗಿ ಡಿಎನ್‌ಎ ಮತ್ತು ರಕ್ತದ ಮಾದರಿಗಳನ್ನು ಸಂರಕ್ಷಿಸಿಡಬೇಕು ಎಂದು ಆದೇಶಿಸಿದೆ.

ದತ್ತು ಪ್ರಕ್ರಿಯೆ: ಮಗು ಬದುಕುಳಿದು, ಬಾಲಕಿಗೆ ಮಗುವನ್ನು ಇಟ್ಟುಕೊಳ್ಳಲು ಇಷ್ಟವಿಲ್ಲದಿದ್ದರೆ, ಅದನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಬೇಷರತ್ತಾಗಿ ಒಪ್ಪಿಸಬೇಕು ಎಂದು ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles