SUDDIKSHANA KANNADA NEWS/ DAVANAGERE/ DATE:26-01-2025
ಹುಬ್ಬಳ್ಳಿ: ಮೈಕ್ರೊ ಫೈನಾನ್ಸ್ ನಿಯಂತ್ರಣಕ್ಕೆ ಆರ್ಬಿಐ ನಿಯಮಗಳಿವೆ. ಸುಗ್ರೀವಾಜ್ಞೆ ಬಹಳಷ್ಟಿವೆ. ಆದರೆ, ಅವುಗಳನ್ನು ಜಾರಿಗೆ ತರುವ ಕೆಲಸ ಆಗಬೇಕು. ಪೊಲಿಸರು ಕಳ್ಳರ ಜೊತೆ ಸೇರಿದರೆ ಹೇಗೆ ನಿಯಂತ್ರಣ ಆಗುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಕ್ರೊ ಫೈನಾನ್ಸನ್ನು ಪೊಲೀಸರು ಬೆಂಬಲಿಸುತ್ತಿದ್ದಾರೆ. ಏಕೆಂದರೆ ಟಾನ್ಸ್ ಫರ್ನಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ. ದುಡ್ಡು ಕೊಟ್ಟು ಬಂದ ಅಧಿಕಾರಿ ತನ್ನ ಆದಾಯ ಹೆಚ್ಚಿಸಿಕೊಳ್ಳುವಲ್ಲಿ
ಮೈಕ್ರೋ ಫೈನಾನ್ಸ್ ಕೂಡ ಒಂದು. ಬಡವರು ಪೊಲಿಸರಿಗೆ ಏನೂ ಕೊಡುವುದಿಲ್ಲ. ಮೈಕೋ ಫೈನಾನ್ಸ್ ಮಾಲಿಕರೇ ಹಣ ಕೊಡುವುದು. ಅದನ್ನು ಮೊದಲು ನಿಯಂತ್ರಣ ಮಾಡಲಿ, ತಮ್ಮ ಹುಳುಕನ್ನು ಮುಚ್ಚಿಟ್ಟುಕೊಂಡು ಮೈಕ್ರೊ ಫೈನಾನ್ಸಿಗೆ ಬೆಂಬಲಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೇವಲ ಸಭೆ ಮಾಡಿ, ಸುಗ್ರೀವಾಜ್ಞೆ ಮಾಡುವುದರಿಂದ ಏನೂ ಆಗುವುದಿಲ್ಲ. ಏನಾದರೂ ಸಮಸ್ಯೆ ಬಂದರೆ ಸಭೆ ಮಾಡುವ ಚಾಳಿ ಮುಖ್ಯಮಂತ್ರಿಗೆ ಇದೆ. ಅದರಿಂದ ಏನೂ ಪರಿಹಾರ ಆಗುವುದಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಅನುಷ್ಠಾನಕ್ಕೆ ಇಳಿಯಬೇಕು ಎಂದು ಆಗ್ರಹಿಸಿದರು.
ಮಗೆ ಸ್ವಾತಂತ್ರೋತ್ಸವ ಎಷ್ಟು ಮುಖ್ಯವೋ ಗಣರಾಜ್ಯೋತ್ಸವವೂ ಅಷ್ಟೇ ಮುಖ್ಯ. ನಮ್ಮಷ್ಟಕ್ಕೆ ನಾವೇ ಗಣರಾಜ್ಯವನ್ನು ಒಪ್ಪಿಕೊಂಡಿದ್ದೇವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ. ಅಷ್ಟೇ ಅಲ್ಲ ನಮ್ಮ ದೇಶದೊಂದಿಗೆ 19 ದೇಶಗಳು ಸ್ವಾತಂತ್ರ್ಯವಾಗಿದ್ದವು. ಅಲ್ಲಿ ಎಲ್ಲಿಯೂ ಪ್ರಜಾಪ್ರಭುತ್ವ ಉಳಿದಿಲ್ಲ. ಆದರೆ, ಭಾರತದಲ್ಲಿ ಮಾತ್ರ ಪಜಾಪಭುತ್ವ ಉಳಿದಿದೆ. ಇದಕ್ಕೆ ಭಾರತೀಯರು ಪ್ರಜಾಪ್ರಭುತ್ತದ ಮೇಲೆ ಇಟ್ಟಿರುವ ನಂಬಿಕೆ ಕಾರಣ ಎಂದು ಹೇಳಿದರು.