ದಾವಣಗೆರೆ: “100 ವರ್ಷಗಳಿಂದ ದೇಶದಾದ್ಯಂತ ಲಕ್ಷಾಂತರ ಸ್ವಯಂಸೇವಕರೊಂದಿಗೆ ಸಾರ್ವಜನಿಕವಾಗಿ ಕಾರ್ಯನಿರ್ವಹಿಸುತ್ತಿರುವ ಆರ್‌ಎಸ್‌ಎಸ್ ನೋಂದಣಿ ಮಾಡಿಕೊಂಡರೆ ತಪ್ಪೇನು? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವುದು ಕೇಳಿರುವ ಪ್ರಶ್ನೆಗಳು ಸರಿಯಾಗಿಯೇ ಇದೆ. ಉಡಾಫೆ ಉತ್ತರ ಬಿಟ್ಟು ಲಿಖಿತವಾಗಿ ಆರ್ ಎಸ್ ಎಸ್ ಮಾಹಿತಿ ನೀಡಲಿ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಶ್ವ ಹಿಂದೂ ಪರಿಷತ್, ಸೇವಾ ಭಾರತಿಯಂಥ ಸಂಸ್ಥೆಗಳನ್ನು ನೋಂದಣಿ ಮಾಡಲಾಗಿದೆ. ಇದೇ ಕಾಯ್ದೆಯಡಿ ಬೇಕಾದರೆ ಆರ್ ಎಸ್ ಎಸ್ ನೋಂದಣಿ ಮಾಡಲಿ. ಆದರೆ ಸರ್ಕಾರದ ಸೌಲಭ್ಯ ಬೇಡ ಎಂಬ ಕಾರಣಕ್ಕೆ ನೋಂದಣಿ ಅವಶ್ಯಕತೆ ಇಲ್ಲ ಎಂಬ ತಕಾರರು ಸರಿಯಾದ ಕ್ರಮ ಅಲ್ಲ. ನೋಂದಣಿ ಮಾಡಿಸಲು ಆರ್ ಎಸ್ ಎಸ್ ಗೆ ಹೆದರಿಕೆ ಏಕೆ ಎಂದು ಹೇಳಿದ್ದಾರೆ.
ಅಖಿಲ ಭಾರತೀಯ ಪ್ರತಿನಿಧಿ ಸಭೆಯ 2025-26ರ ವಾರ್ಷಿಕ ವರದಿಯ ಪ್ರಕಾರ, ಕರ್ನಾಟಕವೊಂದರಲ್ಲೇ ಆರ್‌ಎಸ್‌ಎಸ್ 4,127 ದೈನಂದಿನ ಶಾಖೆಗಳು, 1,389 ವಾರದ ಸಾಪ್ತಾಹಿಕ ಸಭೆಗಳು ಮತ್ತು 562 ಪಥಸಂಚಲನಗಳನ್ನು ನಡೆಸಿದೆ. ದೇಶಾದ್ಯಂತ 60,000ಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವ ಇಷ್ಟು ದೊಡ್ಡ ಸಂಘಟನೆಗೆ ಸಾರ್ವಜನಿಕ ಹೊಣೆಗಾರಿಕೆ ಇರಬೇಕಲ್ಲವೇ ಎಂಬ ಪ್ರಶ್ನೆಯನ್ನು ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ಕೇಳಿದ್ದಾರೆ. ಇದರಲ್ಲಿ
ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಸಾಮಾನ್ಯ ನಾಗರಿಕರು, ಎನ್‌ಜಿಒಗಳು, ಟ್ರಸ್ಟ್‌ಗಳು ಮತ್ತು ಕಂಪನಿಗಳು ಕಾನೂನಿನ ಪರಿಪಾಲನೆ ಮಾಡಬೇಕಾಗಿರುವಾಗ, ಆರ್‌ಎಸ್‌ಎಸ್‌ನ ನೋಂದಣಿ ಮತ್ತು ಕಾನೂನುಬದ್ಧ ಸ್ಥಾನಮಾನವೇನು? ಹಣಕಾಸಿನ ಮೂಲ ಮತ್ತು ತೆರಿಗೆ: ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಬಳಕೆಯಾಗುವ ವೆಚ್ಚ, ಹಣಕಾಸಿನ ಮೂಲಗಳು ಮತ್ತು ಅದಕ್ಕೆ ಪಾವತಿಸುವ ತೆರಿಗೆಗಳ ವಿವರಗಳನ್ನು ಬಹಿರಂಗಪಡಿಸಬೇಕು. ಇದು ಆರ್ ಎಸ್ ಎಸ್ ನ ಕರ್ತವ್ಯ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಆರ್‌ಎಸ್‌ಎಸ್ ಸಂವಿಧಾನದ ಚೌಕಟ್ಟಿನೊಳಗೆ ಸಂಪೂರ್ಣ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಒತ್ತಾಯಿಸಿದ್ದಾರೆ.
- Congress vs RSS
- DAVANAGERE NEWS
- Karnataka Politics News
- Priyank Kharge letter to Mohan Bhagwat
- RSS funds transparency
- RSS income tax
- RSS registration
- RSS Shakha Karnataka
- RSS status
- Syed Khalid Ahmed
- ಆರ್‌ಎಸ್‌ಎಸ್ ನೋಂದಣಿ
- ಆರ್‌ಎಸ್‌ಎಸ್ ಶಾಖೆಗಳು ಕರ್ನಾಟಕ
- ಆರ್‌ಎಸ್‌ಎಸ್ ಹಣಕಾಸು ಮೂಲ
- ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್
- ದಾವಣಗೆರೆ ಸುದ್ದಿ
- ಪಾರದರ್ಶಕತೆ
- ಪ್ರಿಯಾಂಕ್ ಖರ್ಗೆ ಪತ್ರ
- ಮೋಹನ್ ಭಾಗವತ್
- ಯುವ ಕಾಂಗ್ರೆಸ್
- ಸೈಯದ್ ಖಾಲಿದ್ ಅಹ್ಮದ್





Leave a comment