Home ಕ್ರೀಡೆ ಸೂರ್ಯಕುಮಾರ್ ಯಾದವ್‌ಗೆ ಮುಂಬೈ ಟಿ20 ತಂಡದ ನಾಯಕತ್ವ ಜವಾಬ್ದಾರಿ: ಟೀಂ ಇಂಡಿಯಾ ಕೈಬಿಟ್ಟಿದ್ದಕ್ಕೆ 15ನೇ ವಯಸ್ಸಿನ ಕ್ರಿಕೆಟ್ ಉತ್ಸಾಹ ಮರುಕಳಿಸಿದೆ ಎಂದ ಸೂರ್ಯ!
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

ಸೂರ್ಯಕುಮಾರ್ ಯಾದವ್‌ಗೆ ಮುಂಬೈ ಟಿ20 ತಂಡದ ನಾಯಕತ್ವ ಜವಾಬ್ದಾರಿ: ಟೀಂ ಇಂಡಿಯಾ ಕೈಬಿಟ್ಟಿದ್ದಕ್ಕೆ 15ನೇ ವಯಸ್ಸಿನ ಕ್ರಿಕೆಟ್ ಉತ್ಸಾಹ ಮರುಕಳಿಸಿದೆ ಎಂದ ಸೂರ್ಯ!

Share
ಸೂರ್ಯಕುಮಾರ್ ಯಾದವ್‌
Share

ಮುಂಬೈ: ಟೀಂ ಇಂಡಿಯಾದ ಮಾಜಿ ಟಿ-20 ನಾಯಕ ಸೂರ್ಯಕುಮಾರ್ ಯಾದವ್ ದೇಶಿ ಕ್ರಿಕೆಟ್‌ನಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಲು ಸಜ್ಜಾಗಿದ್ದಾರೆ. ಮುಂಬರುವ ಸೈಯದ್ ಮುಷ್ತಕ್ ಅಲಿ ಟ್ರೋಫಿ ಟಿ-20 ಟೂರ್ನಿಗಾಗಿ ಮುಂಬೈ ಕ್ರಿಕೆಟ್ ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ನೇಮಕಗೊಂಡಿದ್ದಾರೆ.

ರಾಜೇಶ್ ಪವಾರ್ ನೇತೃತ್ವದ ಮುಂಬೈ ಹಿರಿಯ ಆಯ್ಕೆ ಸಮಿತಿಯು 16 ಸದಸ್ಯರ ಬಲSಯ ಬಲವಾದ ತಂಡವನ್ನು ಪ್ರಕಟಿಸಿದ್ದು, ಸೂರ್ಯಕುಮಾರ್ ಮುಂಚೂಣಿಯಿಂದ ತಂಡವನ್ನು ಮುನ್ನಡೆಸಲಿದ್ದಾರೆ.

ರಾಷ್ಟ್ರೀಯ ತಂಡದ ನಾಯಕತ್ವ ಹಾಗೂ ಸ್ಥಾನ ಕಳೆದುಕೊಂಡ ಬಳಿಕ ಕೆಲವು ಕಾಲ ಕ್ರಿಕೆಟ್‌ನಿಂದ ದೂರವಿದ್ದ ಸೂರ್ಯ, ಈಗ ಹಳೇ ಹಿನ್ನಡೆಗಳನ್ನು ಮರೆತು ಸಂಪೂರ್ಣ ಉತ್ಸಾಹದೊಂದಿಗೆ ಮೈದಾನಕ್ಕೆ ಮರಳುತ್ತಿದ್ದಾರೆ. ನವೆಂಬರ್ 14ರಿಂದ ಕೋಲ್ಕತ್ತಾದಲ್ಲಿ ಆರಂಭವಾಗಲಿರುವ ಟೂರ್ನಿಯಲ್ಲಿ ಮುಂಬೈ ತಂಡವು ತನ್ನ ಮೊದಲ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ನಾಯಕ: ಸೂರ್ಯಕುಮಾರ್ ಯಾದವ್

ಪ್ರಮುಖ ಆಟಗಾರರು: ಶಿವಂ ದುಬೆ, ಶಾರ್ದೂಲ್ ಠಾಕೂರ್ (ಕೈಯ ಗಾಯದಿಂದ ಚೇತರಿಸಿಕೊಂಡು ವಾಪಸಾಗಿದ್ದಾರೆ), ಸರ್ಫರಾಜ್ ಖಾನ್, ಮುಶೀರ್ ಖಾನ್ ಮತ್ತು ಅನುಭವಿ ಆಟಗಾರರು.

ಪಂದ್ಯಾವಳಿಯ ವಿವರ: ಎಲೈಟ್ ಗ್ರೂಪ್ ‘ಡಿ’ ನಲ್ಲಿ ಸ್ಥಾನಪಡೆದಿರುವ ಮುಂಬೈ ತಂಡವು ನವೆಂಬರ್ 14ರಂದು ಹೈದರಾಬಾದ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles