ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಸಿದ್ಧ ಆಟಗಾರ ಕುಸಲ್ ಮೆಂಡಿಸ್ ಸೇರಿದಂತೆ ಹಲವು ಪ್ರತಿಭಾವಂತ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಿದ್ದ ಹಿರಿಯ ಕ್ರಿಕೆಟ್ ತರಬೇತುದಾರ ಸುಮಿತ್ ಫೆರ್ನಾಂಡೋ (62) ಆಟಗಾರರೊಂದಿಗಿನ ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕುಡಿಯುವ ನೀರಿನ ವಿಚಾರಕ್ಕೆ ಶುರುವಾದ ಗಲಾಟೆ:
ಆಗಸ್ಟ್ 8 ರಂದು ಕೊಲಂಬೊದ ಕ್ರೀಡಾಂಗಣದಲ್ಲಿ ತರಬೇತಿ ಸಮಯದಲ್ಲಿ ಕುಡಿಯುವ ನೀರು ಲಭ್ಯವಿಲ್ಲದ ಕಾರಣ ಆಟಗಾರರು ಮತ್ತು ಮೈದಾನದ ಸಿಬ್ಬಂದಿ ನಡುವೆ ವಾಗ್ವಾದ ಶುರುವಾಗಿತ್ತು. ಈ ಗಲಾಟೆಯನ್ನು ಬಿಡಿಸಲು ಹೋದ ಕೋಚ್ ಸುಮಿತ್ ಫೆರ್ನಾಂಡೋ ಅವರ ಮೇಲೆಯೇ 17 ವರ್ಷದ ಶಾಲಾ ಕ್ರಿಕೆಟ್ ಆಟಗಾರನೊಬ್ಬ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಫೆರ್ನಾಂಡೋ ಅವರನ್ನು ಕೊಲಂಬೊದ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಅವರು ಆಗಸ್ಟ್ 12 ರಂದು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ಆಗಸ್ಟ್ 17 ರವರೆಗೆ ಬಾಲ ಮಂದಿರದ ವಶಕ್ಕೆ ನೀಡಲಾಗಿದೆ.
ಸುಮಿತ್ ಫೆರ್ನಾಂಡೋ ಅವರು ಪ್ರಿನ್ಸ್ ಆಫ್ ವೇಲ್ಸ್ ಕಾಲೇಜಿನಲ್ಲಿ ತರಬೇತುದಾರರಾಗಿ ಮತ್ತು ಬ್ಲೂಮ್‌ಫೀಲ್ಡ್ ಕ್ರಿಕೆಟ್ ಅಂಡ್ ಅಥ್ಲೆಟಿಕ್ ಕ್ಲಬ್‌ನಲ್ಲಿ ಕ್ಯುರೇಟರ್ ಆಗಿ ಸೇವೆ ಸಲ್ಲಿಸಿದ್ದರು
- Bloomfield Cricket Club
- Colombo cricket fight
- drinking water dispute cricket
- Kusal Mendis mentor
- school cricketer arrested
- Sri Lanka cricket coach dies
- Sri Lanka cricket news
- Sumith Fernando
- ಕುಸಲ್ ಮೆಂಡಿಸ್ ಕೋಚ್
- ಕೊಲಂಬೊ ಕ್ರಿಕೆಟ್ ಗಲಾಟೆ
- ಕ್ರಿಕೆಟ್ ಕೋಚ್ ಹತ್ಯೆ
- ಬಾಲ ಆಟಗಾರ ಬಂಧನ
- ಶ್ರೀಲಂಕಾ ಕ್ರಿಕೆಟ್ ಕೋಚ್ ಸಾವು
- ಶ್ರೀಲಂಕಾ ಸುದ್ದಿ
- ಸುಮಿತ್ ಫೆರ್ನಾಂಡೋ





Leave a comment