SUDDIKSHANA KANNADA NEWS/ DAVANAGERE/ DATE:10-06-2024
ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಗಲಾಟೆ, ದೊಂಬಿ ನಡೆದ ಪ್ರಕರಣ ಇನ್ನೂ ಮಾಸಿಲ್ಲ. ಊರು ಬಿಟ್ಟು ಹೋದವರು ಇನ್ನೂ ವಾಪಸ್ ಬಂದಿಲ್ಲ. ಈ ಕಾರಣಕ್ಕಾಗಿ ಚನ್ನಗಿರಿ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನಾಗರಿಕ ಸೌಹಾರ್ದ ಸಭೆ ನಡೆಯಿತು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಈ ಸಭೆ ನಡೆಸಲಾಯಿತು. ಬಕ್ರೀದ್ ಹಬ್ಬದ ಅಂಗವಾಗಿ ಚನ್ನಗಿರಿ ಉಪವಿಭಾಗದ ನಾಗರೀಕ ಶಾಂತಿ ಸಭೆ ನಡೆಸಿ ಸಲಹೆ ಪಡೆಯಲಾಯಿತು. ಶಾಂತಿಯುತವಾಗಿ ಮೆರವಣಿಗೆ ಹಾಗೂ ಹಬ್ಬ ಆಚರಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಉಪವಿಭಾಗಾಧಿಕಾರಿ ಅಭಿಷೇಕ್, ತಹಶೀಲ್ದಾರ್ ಯರಿಸ್ವಾಮಿ, ಇಒ ಉತ್ತಮ್, ಡಾ. ಅಶೋಕ್ ಕುಮಾರ್, ಪಶು ವೈದ್ಯಾಧಿಕಾರಿಗಳು, ಡಿಎಸ್ಪಿ ಚನ್ನಗಿರಿ ಉಪವಿಭಾಗ,, ಪೊಲೀಸ್ ನಿರೀಕ್ಷಕರು ಚನ್ನಗಿರಿ, ನ್ಯಾಮತಿ, ಹೊನ್ನಾಳಿ ಮತ್ತು ಡಿಎಸ್ಬಿ ಶಾಖೆ ರವರು ಉಪಸ್ಥಿತರಿದ್ದರು,
ಸಭೆಯಲ್ಲಿ ನಾಗರೀಕರಾದ ಹೊನ್ನಾಳಿ ಎಂ.ಆರ್ ಮಹೇಶ್, ಕಾಂಗ್ರೆಸ್ ಮುಖಂಡ ಅಮಾನುಲ್ಲಾ, ರೈತ ಮುಖಂಡ ಶ್ರೀನಿವಾಸ ಮೂರ್ತಿ, ಸರ್ಧಾರ್ ಅಹ್ಮದ್ ಚನ್ನಗಿರಿ, ದೇವೇಂದ್ರಪ್ಪ ಸಂತೇಬೆನ್ನೂರು, ಮಹಬೂಬ್ ಪೀರ್ ಚನ್ನಗಿರಿ, ಮಹ್ಮದ್ ಸೈಫುಲ್ಲಾ, ಜಬ್ಬಾರ್ ಆಲಿಖಾನ್ ಸಾಸ್ಟೆಹಳ್ಳಿ, ವಿಶ್ವ ಹಿಂದೂ ಪರಿಷತ್ ನ ಮಂಜುನಾಥ , ಯೂನಿಷ್ ಭಾಷಾ, ನಾಗಪ್ಪ ಹೊನ್ನಾಳಿ, ಡಿ ಬಸವರಾಜ್, ಫಾಜಿಲ್, ಲಾಲುಸಾಬ್ ನಲ್ಲೂರು ಸೇರಿದಂತೆ ಸುಮಾರು 80 ರಿಂದ 100 ಜನರು ಭಾಗವಹಿಸಿದ್ದರು.
ಸಭೆಯಲ್ಲಿ ನಾಗರಿಕರು ಮಾತನಾಡಿದರು. ಈ ಸಂದರ್ಭದಲ್ಲಿ ಬಕ್ರೀದ್ ಹಬ್ಬವನ್ನು ನಾವುಗಳು ಎಲ್ಲರೂ ಶಾಂತರೀತಿಯಿಂದ ಆಚರಿಸುವುದಾಗಿ ತಿಳಿಸಿದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ದಾವಣಗೆರೆ ಜಿಲ್ಲೆ ಶಾಂತಿಯುತ ಜಿಲ್ಲೆಯಾಗಿದ್ದು, ಬಕ್ರೀದ್ ಹಬ್ಬವನ್ನು ಎಲ್ಲರೂ ಸೌಹಾರ್ದಯುತವಾಗಿ, ಶಾಂತಿಯುತವಾಗಿ ಆಚರಿಸುವಂತೆ ಸೂಚಿಸಿದರು.