SUDDIKSHANA KANNADA NEWS/ DAVANAGERE/ DATE:11-06-2024
ದಾವಣಗೆರೆ: ಹೈವೇಯಲ್ಲಿ ದರೋಡೆ ಮಾಡಿದ್ದ ಆರು ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್ ಗಳೂ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆಯ ಅಶೋಕನಗರದ ಮೂರನೇ ಕ್ರಾಸ್ ನ ತರಗಾರ ಕೆಲಸ ಮಾಡುತ್ತಿದ್ದ ಎಂ. ಬೀರೇಶ ಅಲಿಯಾಸ್ ಬೀರ (26 ವರ್ಷ) ವಿನಾಯಕ ಅಲಿಯಾಸ್ ವಿನ್ನಿ ಅಲಿಯಾಸ್ ಗಿರಿ (24) ವಿನೋಬನಗರದ ಎಲೆಕ್ರ್ಟಿಷನ್ ಕೆಲಸ ಮಾಡುತ್ತಿದ್ದ
ಅರುಣ್ (23), ಕಾರ್ತಿಕ್ (19), ವಾಟರ್ ವಾಶ್ ಕೆಲಸಗಾರ ತರುಣ್ (20), ಗೋಲ್ಡ್ ಕೆಲಸ ಮಾಡುತ್ತಿದ್ದ ಮದನ್ (21) ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ:
ತುಮಕೂರು ತಾಲೂಕಿನ ಕೋರ ಹೋಬಳಿಯ ಬೆಳವರ ಗ್ರಾಮದ ಬಿಪಿನ್ ಕುಮಾರ್ ಅವರಿಂದ ದರೋಡೆ ಮಾಡಲಾಗಿತ್ತು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಜೂನ್ 5ರಂದು ದಾವಣಗೆರೆಯ ರೈಸ್ಮಿಲ್ನಲ್ಲಿ ಕೆಲಸ ಹುಡುಕಿಕೊಂಡು ತುಮಕೂರಿನಿಂದ ಬೆಳಗ್ಗೆ 9 ಗಂಟೆಯಲ್ಲಿ ದಾವಣಗೆರೆಗೆ ಬಂದಿದ್ದು ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ಹೈವೆನಲ್ಲಿದ್ದ ಪೆಟ್ಟಿ ಅಂಗಡಿಯಲ್ಲಿ ಟೀ ಕುಡಿದು ಅಂಡರ್ ಬ್ರಿಡ್ಜ್ ಕೆಳಗೆ ಬಿಪಿಎನ್ ಕುಮಾರ್ ಅವರು ಹೋಗುತ್ತಿದ್ದರು. ಈ ವೇಳೆ ಯಾರೋ ಇಬ್ಬರು ತನ್ನನ್ನು ವಿಚಾರಿಸಿ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಚಾನೆಲ್ ಹತ್ತಿರ ಕರೆದುಕೊಂಡು ಹೋಗಿ ತನ್ನನ್ನು ಹಣಕೊಡುವಂತೆ ಹೆದರಿಸಿ ತನ್ನ ಬಳಿ ಇದ್ದ ರೂ 20000 ಮೌಲ್ಯದ ಸ್ಯಾಮ್ಸಂಗ್ ಎ15 ಮೊಬೈಲ್ ಫೋನ್ನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಎಎಸ್ಪಿ ವಿಜಯಕುಮಾರ್.ಎಂ. ಸಂತೋಷ್, ಮಂಜುನಾಥ ಜಿ., ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ, ವಿದ್ಯಾನಗರ
ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ಅವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಆರೋಪಿಗಳನ್ನು ಬಂಧಿಸಿದ ತಂಡವು ದರೋಡೆ ಮಾಡಿದ್ದ 20,000 ರೂ. ಬೆಲೆ ಬಾಳುವ ಸ್ಯಾಮ್ಸಂಗ್ ಎ15 ಮೊಬೈಲ್, ದರೋಡೆಗೆ ಬಳಸಿದ್ದ KA-17 HH-5172 ನೇ ನಂಬರ್ ಹೋಂಡಾ ಶೈನ್ ಬೈಕ್ ಅಂದಾಜು ಬೆಲೆ ರೂ 50000, KA-17 HM-2020 ಅಂದಾಜು ಬೆಲೆ 60000
ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಆರೋಪಿತರ ಪತ್ತೆಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಇನ್ಸ್ ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ, ಪಿಎಸ್ ಐ ಜಿ. ಎನ್. ವಿಶ್ವನಾಥ, ಪಿಎಸ್ ಐ ಎಂ. ಎಸ್. ಹೊಸಮನಿ, ಸಿಬ್ಬಂದಿಗಳಾದ ಆನಂದ.ಎಂ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಯೋಗೀಶ್ ನಾಯ್ಕ, ಗೋಪಿನಾಥ.ಬಿ.ನಾಯ್ಕ, ಲಕ್ಷ್ಮಣ್.ಆರ್. ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ, ಶಾಂತರಾಜ್ ಮತ್ತು ಕಮಾಂಡ್ ಸೆಂಟರ್ ಸಿಬ್ಬಂದಿ ಮಾರುತಿ, ಸೋಮಶೇಖರ್ ಅವರನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.