SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ಕೇಂದ್ರ ಸರ್ಕಾರ ಆರ್.ಬಿ.ಐ ಮೂಲಕ ಅವಕಾಶ ಕಲ್ಪಿಸಿರಲಾಗಿರುವ ಗೋಲ್ಡ್ ಬಾಂಡ್ ಸ್ಕೀಮ್ ಫೆ. 12 ರಿಂದ 16 ರ ತನಕ ಖರೀದಿಗೆ ಲಭ್ಯವಿದೆ ಎಂದು ಅಂಚೆ ಅಧೀಕ್ಷಕರಾದ ಚಂದ್ರಶೇಖರ್ ತಿಳಿಸಿದ್ದಾರೆ.
ಅಂಚೆ ಇಲಾಖೆಯ ಬಹು ಬೇಡಿಕೆಯ ಜನಪ್ರಿಯ ಸಾವರಿನ್ ಗೋಲ್ಡ್ ಬಾಂಡ್ ಐದು ದಿನ ತನ್ನ ಗ್ರಾಹಕರಿಗೆ ಅಂಚೆ ಇಲಾಖೆ ಅವಕಾಶ ಕಲ್ಪಿಸಿದೆ. ಸಾವರಿನ್ ಗೋಲ್ಡ್ ಬಾಂಡ್ ಎಂಟು ವರ್ಷ ಮರಳಿಕೆಯ ಅವಧಿಯಾಗಿದ್ದು ಐದನೇ ವರ್ಷದ ನಂತರ ಮುಂಚಿತವಾಗಿ ಬಾಂಡ್ ಪಡೆಯಲು ಅವಕಾಶವಿದೆ. ಬ್ಯಾಂಕ್ ಮೂಲಕ ತೊಡಗಿಸಿದ ಹಣಕ್ಕೆ ವಾರ್ಷಿಕ ಶೇಕಡ 2.5 ಬಡ್ಡಿ ನೀಡಲಿದ್ದು ಮೇಕಿಂಗ್ ಹಾಗು ವೇಸ್ಟೆಜ್ ಶುಲ್ಕದ ಹೊರೆ ಇರುವುದಿಲ್ಲ.
ಬಂಗಾರದ ದರಕ್ಕೆ ಇರುವಂತ ಹಣ ಪಡೆಯಬಹುದಾಗಿದೆ. ಒಂದು ಗ್ರಾಂ ಬಂಗಾರಕ್ಕೆ 6263 ನಿಗದಿಪಡಿಸಿದ್ದು ಕನಿಷ್ಠ 1 ಗ್ರಾಂ ನಿಂದ 4 ಕೆ.ಜಿ.ವರೆಗೆ ಖರೀದಿ ಮಾಡಲು ಅವಕಾಶವಿದೆ.
ಬೇಕಾಗಿರುವ ದಾಖಲೆಗಳು: ಪಾನ್ಕಾರ್ಡ್, ಆಧಾರ್, ಬ್ಯಾಂಕ್ ಪಾಸ್ಬುಕ್, ಫೆÇೀಟೋ ದೊಂದಿಗೆ ಗ್ರಾಹಕರು ಅಂಚೆ ಕಚೇರಿಗೆ ತೆರಳಿ ಬಾಂಡ್ ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಸಂಪರ್ಕಿಸಿ ಅಥವಾ ಮಾರುಕಟ್ಟೆ ನಿರ್ವಾಹಕ ಸಂತೋಷ್ ಮೊ. 886112683 / 9380061564 ಇವರನ್ನು ಸಂಪರ್ಕಿಸಬಹುದು.