Home ಕ್ರೈಂ ನ್ಯೂಸ್ ಜನರೇ ದೇವರು, ಮಾತು ತೂಕವಾಗಿರಲಿ: ಕಂಗನಾಗೆ ತಿರುಗೇಟು ನೀಡಿದ ಸೋನು ಸೂದ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜನರೇ ದೇವರು, ಮಾತು ತೂಕವಾಗಿರಲಿ: ಕಂಗನಾಗೆ ತಿರುಗೇಟು ನೀಡಿದ ಸೋನು ಸೂದ್!

Share
ಸೋನು ಸೂದ್
Share

ನವದೆಹಲಿ: ಪ್ರತಿಭಟನಾನಿರತ ಯುವಕರನ್ನು (Gen Z) ಉದ್ದೇಶಿಸಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ನೀಡಿರುವ “ಜನರೇಷನ್ ಗಟ್ಟರ್” (Generation Gutter) ಎಂಬ ಹೇಳಿಕೆಗೆ ಬಾಲಿವುಡ್ ನಟ ಸೋನು ಸೂದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವಕರನ್ನು ಗೌರವದಿಂದ ಕಾಣಬೇಕು ಹಾಗೂ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಮಾತನಾಡುವ ಮುನ್ನ ಯೋಚಿಸಿ ಮಾತನಾಡಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ದೆಹಲಿಯ ಜಂತರ್ ಮಂತರ್ ಹಾಗೂ ವಿವಿಧೆಡೆ ನಡೆಯುತ್ತಿರುವ ‘ಜೆನ್ ಜೀ’ ಯುವಕರ ಪ್ರತಿಭಟನೆಯ ವಿಡಿಯೋಗಳನ್ನು ಉಲ್ಲೇಖಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಕಂಗನಾ, ಯುವಕರ ಭಾಷೆ ಮತ್ತು ನಡವಳಿಕೆಯನ್ನು ತೀವ್ರವಾಗಿ ನಿಂದಿಸಿದ್ದರು. ಅಲ್ಲದೆ ಅವರನ್ನು ‘ಜನರೇಷನ್ ಗಟ್ಟರ್’ ಎಂದು ಕಟುವಾಗಿ ಟೀಕಿಸಿದ್ದರು.

ಈ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸೋನು ಸೂದ್, “ಕಂಗನಾ ಹೀಗೆ ಹೇಳಿದ್ದರೆ ಅದು ಅತ್ಯಂತ ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ಜೀವನದಲ್ಲಿ ‘ತೋಲ್ ಮೊಲ್ ಕೇ ಬೋಲ್’ (ಮಾತನಾಡುವ ಮುನ್ನ ತೂಕ ಮಾಡಿ ಮಾತನಾಡು) ಎಂಬ ಗಾದೆಯಂತೆ ಎಚ್ಚರಿಕೆಯಿಂದ ಮಾತನಾಡಬೇಕು. ಏಕೆಂದರೆ ಸಾರ್ವಜನಿಕರೇ ದೇವರ ಇನ್ನೊಂದು ರೂಪ” ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ಯಾವ ಉದ್ಯೋಗದಲ್ಲೇ ಇರಲಿ — ನಟ, ವೈದ್ಯ ಅಥವಾ ಯಾವುದೇ ಹುದ್ದೆಯಾಗಲಿ — ಜನರು ನಿಮ್ಮೊಂದಿಗಿದ್ದರೆ ಮಾತ್ರ ನಿಮ್ಮ ಇರುವಿಕೆಗೆ ಅರ್ಥವಿರುತ್ತದೆ. ನಟರನ್ನು ಬೆಳೆಸುವುದೇ ಈ ಯುವಜನತೆ. ಅವರ ಬೆಂಬಲವಿದ್ದಾಗ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರನ್ನೂ ಗೌರವದಿಂದ ಜೊತೆಗೆ ಕರೆದೊಯ್ಯುವುದು ಮುಖ್ಯ” ಎಂದು ಪ್ರತಿಪಾದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles