Home ದಾವಣಗೆರೆ ಕೊಳೆತ ಹಣ್ಣು, ಬೂಸ್ಟ್ ಹಿಡಿದ ಹಣ್ಣುಗಳ ಸಂಗ್ರಹ: ಶಿವಮೊಗ್ಗದಲ್ಲಿ ಜ್ಯೂಸ್ ಸೆಂಟರ್, ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ, 2 ಮಳಿಗೆ ಸೀಲ್!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಕೊಳೆತ ಹಣ್ಣು, ಬೂಸ್ಟ್ ಹಿಡಿದ ಹಣ್ಣುಗಳ ಸಂಗ್ರಹ: ಶಿವಮೊಗ್ಗದಲ್ಲಿ ಜ್ಯೂಸ್ ಸೆಂಟರ್, ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ, 2 ಮಳಿಗೆ ಸೀಲ್!

Share
ಶಿವಮೊಗ್ಗ
Share

ಶಿವಮೊಗ್ಗ: ನಗರದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಆಹಾರ ನೈರ್ಮಲ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆಹಾರ ಸುರಕ್ಷತಾ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಶಿವಮೊಗ್ಗ ಉಪವಿಭಾಗಾಧಿಕಾರಿ (AC) ಡಾ. ಎಚ್.ಪಿ.ಎಸ್. ಮೈತ್ರಿ ಅವರ ನೇತೃತ್ವದ ಅಧಿಕಾರಿಗಳ ತಂಡವು ನಗರದ ವಿವಿಧ ಜ್ಯೂಸ್ ಸೆಂಟರ್‌ಗಳು, ನಾನ್‌ವೆಜ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದೆ.

ಕೊಳೆತ ಹಾಗೂ ಬೂಷ್ಟು ಹಿಡಿದ ಹಣ್ಣುಗಳ ಸಂಗ್ರಹ:

ನಗರದ ಹೃದಯಭಾಗದಲ್ಲಿರುವ ಪ್ರಸಿದ್ಧ ‘ತನು ಜ್ಯೂಸ್ ಸೆಂಟರ್’ ನ ಎರಡು ಮಳಿಗೆಗಳ ಮೇಲೆ ದಾಳಿ ನಡೆಸಿದಾಗ ಅಧಿಕಾರಿಗಳಿಗೆ ಆಘಾತಕಾರಿ ದೃಶ್ಯ ಕಂಡುಬಂದಿದೆ. ಫ್ರಿಡ್ಜ್‌ಗಳಲ್ಲಿ ದೀರ್ಘಕಾಲದಿಂದ ಸಂಗ್ರಹಿಸಿಟ್ಟಿದ್ದ ದ್ರಾಕ್ಷಿ, ಚಿಕ್ಕು, ಡ್ರ್ಯಾಗನ್ ಫ್ರೂಟ್, ಅವಕಾಡೊ ಮತ್ತು ದಾಳಿಂಬೆ ಹಣ್ಣುಗಳು ಸಂಪೂರ್ಣ ಕೊಳೆತು, ಬೂಷ್ಟು (fungus) ಹಿಡಿದಿರುವುದು ಪತ್ತೆಯಾಗಿದೆ. ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಇದೇ ಹಣ್ಣುಗಳಿಂದ ಜ್ಯೂಸ್ ಮಾಡಿ ನೀಡಲಾಗುತ್ತಿತ್ತು.

ಕೃತಕ ಬಣ್ಣ ಹಾಗೂ ಹಳೆಯ ಮಾಂಸದ ಬಳಕೆ:

ದರ್ಗಾ ಕಾಂಪ್ಲೆಕ್ಸ್ ಸುತ್ತಮುತ್ತಲಿನ ಮಾಂಸಾಹಾರಿ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿದಾಗ ‘ಹೋಟೆಲ್ ರೆಡ್’ ನಲ್ಲಿ ಕೊಳೆತ ಮಾಂಸ ಹಾಗೂ ಅಪಾಯಕಾರಿ ಕೃತಕ ಬಣ್ಣಗಳನ್ನು ಬಳಸಿ ತಯಾರಿಸಿದ ಹಳೆಯ ಕೆಬಾಬ್ ಪತ್ತೆಯಾಗಿದೆ.

ಅವಧಿ ಮುಗಿದ ಉತ್ಪನ್ನಗಳು:

‘ಹೋಟೆಲ್ ಮಲ್ನಾಡ್’ ನಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಇಡಲಾಗಿದ್ದ ಅವಧಿ ಮುಗಿದ (expired) ಜ್ಯೂಸ್ ಬಾಟಲಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಧಿಕಾರಿಗಳು ಕೈಗೊಂಡ ತಕ್ಷಣದ ಕ್ರಮಗಳು:

ಜ್ಯೂಸ್ ಸೆಂಟರ್ ಸೀಲ್‌ಡೌನ್: ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಅಪಾಯ ಉಂಟುಮಾಡುತ್ತಿದ್ದ ‘ತನು ಜ್ಯೂಸ್ ಸೆಂಟರ್’ನ ಎರಡೂ ಶಾಖೆಗಳನ್ನು ತಕ್ಷಣದಿಂದಲೇ ಜಪ್ತಿ ಮಾಡಿ ಸೀಲ್ ಮಾಡಲಾಗಿದೆ.

ಲ್ಯಾಬ್ ಪರೀಕ್ಷೆಗೆ ಮಾದರಿ ಸಂಗ್ರಹ: ದಾಳಿಗೊಳಗಾದ ಎಲ್ಲಾ ಹೋಟೆಲ್‌ಗಳಿಂದ ಕೆಬಾಬ್, ಮಾಂಸ ಮತ್ತು ಜ್ಯೂಸ್‌ಗಳ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ಬೆಂಗಳೂರಿನ FSSAI (ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ) ಅಧಿಕೃತ ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನಿಸಲಾಗಿದೆ.

15 ದಿನಗಳ ಗಡುವು: ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳದ ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದ್ದು, ಕಂಡುಬಂದ ಲೋಪಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಖಡಕ್ ಎಚ್ಚರಿಕೆ: ನಿಗದಿಪಡಿಸಿದ ಅವಧಿಯೊಳಗೆ ನಿಯಮ ಪಾಲಿಸದಿದ್ದರೆ ಅಥವಾ ಲ್ಯಾಬ್ ವರದಿಯಲ್ಲಿ ಆಹಾರ ಕಲಬೆರಕೆ ಸಾಬೀತಾದರೆ ಸಂಬಂಧಪಟ್ಟ ಮಳಿಗೆಗಳ ಲೈಸೆನ್ಸ್ ರದ್ದುಗೊಳಿಸಿ, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಾ. ಮೈತ್ರಿ ಎಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles