Home ಕ್ರೈಂ ನ್ಯೂಸ್ “ನನ್ನ ಮಗನನ್ನು ಪ್ರೀತಿಸಿದ್ರೆ ನೇಣು ಹಾಕಿಕೊ”: ಅಪ್ರಾಪ್ತ ಬಾಲಕಿ ಆತ್ಮಹತ್ಯೆ, ಪ್ರೇಮಿಯ ತಾಯಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ನನ್ನ ಮಗನನ್ನು ಪ್ರೀತಿಸಿದ್ರೆ ನೇಣು ಹಾಕಿಕೊ”: ಅಪ್ರಾಪ್ತ ಬಾಲಕಿ ಆತ್ಮಹತ್ಯೆ, ಪ್ರೇಮಿಯ ತಾಯಿ ಬಂಧನ!

Share
ಮಗ
Share

ಅಹಮದಾಬಾದ್: ನನ್ನ ಮಗನನ್ನು ಸತ್ಯವಾಗಿ ಪ್ರೀತಿಸುವುದಾದರೆ ನೇಣು ಹಾಕಿಕೊ ಎಂದು 17 ವರ್ಷದ ಬಾಲಕಿಗೆ ಮಾನಸಿಕ ಕಿರುಕುಳ ನೀಡಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಸರ್ಖೇಜ್ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಆಗಸ್ಟ್ 31ರಂದು ಅಹಮದಾಬಾದ್‌ನ ಸರ್ಖೇಜ್ ಪ್ರದೇಶದಲ್ಲಿ 12ನೇ ತರಗತಿಯ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಹಾಗೂ ಆಡಿಯೋ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೊಲೀಸರು, ಮೃತನ ಪ್ರೇಮಿಯ ತಾಯಿಯನ್ನು ಬಂಧಿಸಿದ್ದಾರೆ.

ಘಟನೆಯ ವಿವರ:

ಮೃತ ಬಾಲಕಿ ಹಾಗೂ ಆರೋಪಿ ಮಹಿಳೆಯ ಮಗ ಇಬ್ಬರೂ ಸಹಪಾಠಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೇಮ ವಿಚಾರ ತಿಳಿದ ಎರಡೂ ಕುಟುಂಬದವರು ಅವರಿಗೆ ವಿದ್ಯಾಭ್ಯಾಸದತ್ತ ಗಮನಹರಿಸುವಂತೆ ಬುದ್ಧಿವಾದ ಹೇಳಿದ್ದರು. ಆದರೂ ಇಬ್ಬರೂ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ಶಾಲಾ ಅವರಣದಲ್ಲಿ ಇಬ್ಬರೂ ಜೊತೆಯಾಗಿ ಕುಳಿತಿದ್ದನ್ನು ಗಮನಿಸಿದ ಶಾಲೆಯ ಪ್ರಿನ್ಸಿಪಾಲ್ ಎರಡೂ ಕುಟುಂಬದವರನ್ನು ಕರೆಸಿ ಎಚ್ಚರಿಸಿದ್ದರು.

ಇದರಿಂದ ಕೋಪಗೊಂಡ ಹುಡುಗನ ತಾಯಿ, ಆಗಸ್ಟ್ 31ರಂದು ಹುಡುಗಿಯ ಮನೆಗೆ ತೆರಳಿ ಸುಮಾರು 30 ನಿಮಿಷಗಳ ಕಾಲ ಆಕೆಗೆ ತೀವ್ರವಾಗಿ ಮಾನಸಿಕ ಕಿರುಕುಳ ನೀಡಿದ್ದಾರೆ. “ನನ್ನ ಮಗನನ್ನು ನೀನು ನಿಜವಾಗಿಯೂ ಪ್ರೀತಿಸುವುದಾದರೆ ಯಾರೂ ಇಲ್ಲದಿದ್ದಾಗ ನೇಣು ಹಾಕಿಕೊ. ನಿನ್ನ ಹೆತ್ತವರನ್ನು ನಾನು ನೋಡಿಕೊಳ್ಳುತ್ತೇನೆ” ಎಂದು ಹೇಳಿ, ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.

ಈ ಘಟನೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದ ಬಾಲಕಿ ಅದೇ ದಿನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಬಾಲಕಿಯ ತಂದೆ ನೀಡಿದ ದೂರಿನನ್ವಯ ಘಟನೆಯ ಆಡಿಯೋ ರೆಕಾರ್ಡಿಂಗ್ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles