ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ನೂತನ ಶಾಸಕರಿಗೆ ತಲೆ ಮಾಸಿಲ್ಲ, ಸರಿಯಾಗಿ ಕೆಲಸ ಮಾಡಿಸಿಕೊಳ್ಳಲು ಬರುತ್ತಿಲ್ಲ ಎಂಬ ಹೇಳಿಕೆ ನೀಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಚನ್ನಗಿರಿ ಕಾಂಗ್ರೆಸ್ ಶಾಸಕ ಹಾಗೂ ಸಿಎಂ ಡಿ. ಕೆ. ಶಿವಕುಮಾರ್ ಆಪ್ತ ಶಿವಗಂಗಾ ಬಸವರಾಜ್ ಅವರು, ಎಸ್ಎಸ್ಎಂ ಅವರ ಪುತ್ರ ನೂತನ ಶಾಸಕರಿಗೆ ಹೇಳಿರಬೇಕು. ಆದರೆ ನೀವ್ಯಾಕೆ ನನ್ನ ಮೇಲೆ ಗುಂಡು ಹೊಡೀತಿರಿ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸೋಷಿಯಲ್ ಮೀಡಿಯಾದಲ್ಲಿ ಬಂದ ವಿಡಿಯೋ ನೋಡಿದ್ದೇನೆ. ಸಮರ್ಥ್ ಶಾಮನೂರು ಅವರೂ ನೂತನ ಶಾಸಕರು. ಅವರೂ ಸಹ ನಮ್ಮ ಟೀಂನವರೇ. ಹಾಗಾಗಿ ಹೊಸ ಶಾಸಕರಾದ ಅವರಿಗೆ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಲಹೆ ನೀಡಿರಬೇಕು ಎಂದು ಹೇಳಿದರು.
ಸುದ್ದಿಯ ಹೈಲೈಟ್ಸ್
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿಕೆಗೆ ತಿರುಗೇಟು: ಹೊಸ ಶಾಸಕರಿಗೆ ತಲೆ ಮಾಸಿಲ್ಲ, ಕೆಲಸ ಮಾಡಿಸಿಕೊಳ್ಳಲು ಬರುತ್ತಿಲ್ಲ ಎಂಬ ಸಚಿವರ ಹೇಳಿಕೆಗೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪುತ್ರ ಸಮರ್ಥ್ ಶಾಮನೂರು ಕಡೆಗೆ ಬೊಟ್ಟು: “ಹೊಸ ಶಾಸಕರೆಂದರೆ ಸಚಿವರ ಪುತ್ರ ಸಮರ್ಥ್ ಶಾಮನೂರು ಅವರೂ ಹೌದು. ಆ ಮಾತು ತನ್ನ ಮಗನಿಗೆ ಅನ್ವಯಿಸಿರಬಹುದು, ನಮ್ಮನ್ನೇಕೆ ಗುರಿಯಾಗಿಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಅನುಭವದ ಪ್ರಶ್ನೆ: ತಾವು ಈಗಾಗಲೇ ಮೂರು ವರ್ಷಕ್ಕೂ ಹೆಚ್ಚು ಕಾಲ ಶಾಸಕರಾಗಿ ಕಾರ್ಯನಿರ್ವಹಿಸಿದ್ದು, ಹೊಸಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಳ್ಮೆಯ ಸಂದೇಶ: ಪಕ್ಷದಲ್ಲಿ ಭಿನ್ನಮತದ ಬಣ್ಣ ಬಳಿಯಬಹುದು ಎಂಬ ಕಾರಣಕ್ಕೆ ತಾಳ್ಮೆಯಿಂದಿರುವುದಾಗಿ ತಿಳಿಸುತ್ತಲೇ, ಹಿರಿಯರ ಹೇಳಿಕೆಗಳ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ಪ್ರಕಾರ ಹೊಸದಾಗಿ ಎಲ್ಲಾ ಪಕ್ಷಗಳಲ್ಲಿಯೂ ಸೇರಿದರೆ ಒಟ್ಟು 60 ರಿಂದ 70 ಶಾಸಕರು ಹೊಸದಾಗಿ ಚುನಾಯಿತರಾದವರೇ ಇದ್ದಾರೆ. ನಾವೇನೂ ಹೊಸಬರಲ್ಲ. ಶಾಸಕರಾಗಿ ಈಗಾಗಲೇ ಮೂರು ವರ್ಷಕ್ಕೂ ಹೆಚ್ಚು ಸಮಯ ಆಗಿದೆ. ಹೊಸಬ ಶಾಸಕರೆಂದರೆ ಅವರ ಪುತ್ರ ಸಮರ್ಥ್ ಶಾಮನೂರು ಅವರು. ಮಗನಿಗೆ ಕಿವಿಮಾತು ಹೇಳಿರಬೇಕು. ಮಾಧ್ಯಮದವರು ಯಾಕೆ ನನ್ನನ್ನೇ ಟಾರ್ಗೆಟ್ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ನಾನು ಏನಾದರೂ ಮಾತನಾಡಿದರೆ ನನಗೂ ಎಸ್ ಎಸ್ ಎಂ ಅವರಿಗೂ ವಿರುದ್ಧವಾಗುತ್ತದೆ. ಭಿನ್ನಮತ ಎಂದು ಹೇಳಲಾಗುತ್ತದೆ. ಹಾಗಾಗಿ ನಾನು ಸಮಾಧಾನ ಮತ್ತು ತಾಳ್ಮೆಯಿಂದ ಇರುತ್ತೇನೆ. ತಲೆ ಮಾಸಿದ ಹಿರಿಯರೇ ಈಗ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ನಮಗೆ ಮಾಸ ಆರಿದೆಯೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ ಎಂದು ಶಿವಗಂಗಾ ಬಸವರಾಜ್ ಹೇಳಿದರು.
- Channagiri MLA
- DAVANAGERE LATEST NEWS
- Davanagere Politics
- Karnataka Congress News
- political controversy Karnataka.
- political controversy Karnataka.Shivaganga Basavaraj
- S. S. MALLIKARJUN
- Samarth Shamanur
- Shivaganga Basavaraj
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ ಸುದ್ದಿ
- ಕಾಂಗ್ರೆಸ್ ಭಿನ್ನಮತ
- ಚನ್ನಗಿರಿ ಶಾಸಕ
- ಡಿ.ಕೆ. ಶಿವಕುಮಾರ್ ಆಪ್ತ
- ದಾವಣಗೆರೆ ರಾಜಕೀಯ
- ಶಿವಗಂಗಾ ಬಸವರಾಜ್
- ಸಮರ್ಥ್ ಶಾಮನೂರು





Leave a comment