Home ಕ್ರೈಂ ನ್ಯೂಸ್ ವೇಶ್ಯಾವಾಟಿಕೆಯಲ್ಲಿ ಪ್ರತಿಷ್ಠಿತ ಕಾಲೇಜುಗಳ ಉನ್ನತ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರು: ಹೊಟೇಲ್, ಲಾಡ್ಜ್ ಗಳ ಮೇಲೆ ಪೊಲೀಸರ ದಾಳಿ ವೇಳೆ ಸ್ಫೋಟಕ ವಿಚಾರ ಬಯಲಿಗೆ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ವೇಶ್ಯಾವಾಟಿಕೆಯಲ್ಲಿ ಪ್ರತಿಷ್ಠಿತ ಕಾಲೇಜುಗಳ ಉನ್ನತ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರು: ಹೊಟೇಲ್, ಲಾಡ್ಜ್ ಗಳ ಮೇಲೆ ಪೊಲೀಸರ ದಾಳಿ ವೇಳೆ ಸ್ಫೋಟಕ ವಿಚಾರ ಬಯಲಿಗೆ!

Share
ವೇಶ್ಯಾವಾಟಿಕೆ
Share

ಹೈದರಾಬಾದ್: ನಗರದ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಕೆಪಿಎಚ್‌ಬಿ ಕಾಲೋನಿ ಹಾಗೂ ಕೂಕಟ್‌ಪಲ್ಲಿ ವ್ಯಾಪ್ತಿಯಲ್ಲಿರುವ ಕೆಲವು OYO ಹೋಟೆಲ್‌ಗಳು ಮತ್ತು ಲಾಡ್ಜ್‌ಗಳ ಮೇಲೆ ಸೈಬರಾಬಾದ್ ಪೊಲೀಸರು ಹಠಾತ್ ದಾಳಿ ನಡೆಸಿ, ದೊಡ್ಡ ಪ್ರಮಾಣದ ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿದ್ದಾರೆ. ಖಚಿತ ಮಾಹಿತಿ ಹಾಗೂ ರಹಸ್ಯ ಕಾವಲಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ದಂಧೆಯಲ್ಲಿ ತೊಡಗಿದ್ದ ಸಂಘಟಕರು ಹಾಗೂ ಗ್ರಾಹಕರು ಸೇರಿದಂತೆ ಒಟ್ಟು 11 ಜನರನ್ನು ವಶಕ್ಕೆ ಪಡೆಯಲಾಗಿದೆ.

ವಿದ್ಯಾರ್ಥಿನಿಯರ ಬಳಕೆ:

ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವ ಆಘಾತಕಾರಿ ಸಂಗತಿಯೆಂದರೆ, ಈ ಜಾಲದಲ್ಲಿ ಸಿಲುಕಿರುವ ಯುವತಿಯರಲ್ಲಿ ಬಹುಪಾಲು ಮಂದಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು. ಆರ್ಥಿಕ ಮುಗ್ಗಟ್ಟು, ಸುಲಭವಾಗಿ ಹಣ ಸಂಪಾದಿಸುವಾಸೆ ಅಥವಾ ಇತರೆ ಮೋಸದ ಜಾಲಗಳಿಗೆೆ ಬಳಕೆಯಾಗಿ ಇವರು ಈ ಅಕ್ರಮ ವೃತ್ತಿಗೆ ಇಳಿದಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಹೋಟೆಲ್ ಮಾಲೀಕರು ಮತ್ತು ದಂಧೆಯ ಪ್ರಮುಖ ಏಜೆಂಟರ ವಿರುದ್ಧ ಅನೈತಿಕ ವ್ಯಾಪಾರ ತಡೆ ಕಾಯ್ದೆ  ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಕಾನೂನು ತೊಡಕುಗಳು ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು:

ಈ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೇಶ್ಯಾವಾಟಿಕೆ ಹಾಗೂ ಭಾರತೀಯ ಕಾನೂನುಗಳ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿವೆ. ಕಾನೂನು ತಜ್ಞರ ಪ್ರಕಾರ:

ವಯಸ್ಕರೊಬ್ಬರು ಸ್ವಇಚ್ಛೆಯಿಂದ ಲೈಂಗಿಕ ವೃತ್ತಿಯಲ್ಲಿ ತೊಡುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಲಾಡ್ಜ್‌ಗಳನ್ನು ವೇಶ್ಯಾಗೃಹಗಳಾಗಿ  ನಡೆಸುವುದು, ದಲ್ಲಾಳಿಗಳ ಮೂಲಕ ವ್ಯವಹಾರ ಮಾಡುವುದು ಹಾಗೂ ಇತರರನ್ನು ಈ ದಂಧೆಗೆ ಪ್ರೇರೇಪಿಸುವುದು ಐಟಿಪಿಎ ಕಾಯ್ದೆಯಡಿ ಗಂಭೀರ ಸ್ವರೂಪದ ಅಪರಾಧವಾಗಿದೆ.

ಐಪಿಸಿ ಸೆಕ್ಷನ್ 497 ರದ್ದುಗೊಂಡ ಬಳಿಕ ವ್ಯಭಿಚಾರವು ಕ್ರಿಮಿನಲ್ ಅಪರಾಧವಲ್ಲದಿದ್ದರೂ, ಸಿವಿಲ್ ಕಾನೂನಿನಡಿ ವಿಚ್ಛೇದನಕ್ಕೆ ಇದು ಪ್ರಮುಖ ಆಧಾರವಾಗಿದೆ.

ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ರ ಅಡಿಯಲ್ಲಿ ಮಗುವಿನ ಪಿತೃತ್ವದ ಹಕ್ಕು ಹಾಗೂ ಡಿಎನ್‌ಎ ಪರೀಕ್ಷೆಯ ಕಾನೂನು ಬದ್ಧತೆಯ ಬಗ್ಗೆಯೂ ಈಗ ಚರ್ಚೆ ಮುನ್ನೆಲೆಗೆ ಬಂದಿದೆ.

ಪ್ರಕರಣದ ಕುರಿತು ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಈ ಜಾಲದ ಹಿಂದೆ ದೊಡ್ಡ ಮಟ್ಟದ ನೆಟ್‌ವರ್ಕ್ ಇರಬಹುದೆಂದು ಶಂಕಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles