Home ಕ್ರೈಂ ನ್ಯೂಸ್ ಮದುವೆಯಾಗಿ ಗರ್ಭಿಣಿಯಾದ ವಿದ್ಯಾರ್ಥಿನಿ ತನಿಷ್ಕಾ! ಆಧಾರ್ ಕಾರ್ಡ್ ತಂತ್ರಜ್ಞಾನದಿಂದ ಸಿಕ್ಕ ಮಹತ್ವದ ಸುಳಿವಿನಿಂದ ಪತ್ತೆಯಾದ ವಿದ್ಯಾರ್ಥಿನಿಯರ ಸ್ಫೋಟಕ ಮಾಹಿತಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮದುವೆಯಾಗಿ ಗರ್ಭಿಣಿಯಾದ ವಿದ್ಯಾರ್ಥಿನಿ ತನಿಷ್ಕಾ! ಆಧಾರ್ ಕಾರ್ಡ್ ತಂತ್ರಜ್ಞಾನದಿಂದ ಸಿಕ್ಕ ಮಹತ್ವದ ಸುಳಿವಿನಿಂದ ಪತ್ತೆಯಾದ ವಿದ್ಯಾರ್ಥಿನಿಯರ ಸ್ಫೋಟಕ ಮಾಹಿತಿ!

Share
ವಿದ್ಯಾರ್ಥಿನಿ
Share

ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳೆದ ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಕೊನೆಗೂ ಸಿಐಡಿ (CID) ಅಧಿಕಾರಿಗಳ ತಕ್ಷ ಹಾಗೂ ತಾಂತ್ರಿಕ ತನಿಖೆಯಿಂದ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ನಾಪತ್ತೆಯಾಗಿದ್ದ ಯುವತಿಯರು. ಈ ವರ್ಷದ ಜನವರಿ 31ರಂದು ಕಾಲೇಜಿಗೆ ತೆರಳಿದ್ದ ಇಬ್ಬರೂ ವಾಪಸ್ ಮನೆಗೆ ಮರಳಿರದ ಹಿನ್ನೆಲೆಯಲ್ಲಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಹೈಕೋರ್ಟ್ ಆದೇಶ ಹಾಗೂ ಸಿಐಡಿಗೆ ತನಿಖೆ ವರ್ಗಾವಣೆ:

ಸ್ಥಳೀಯ ಪೊಲೀಸರ ತನಿಖೆಯಲ್ಲಿ ಯಾವುದೇ ಸ್ಪಷ್ಟ ಸುಳಿವು ಲಭ್ಯವಾಗದ ಕಾರಣ, ತನಿಷ್ಕಾ ಅವರ ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯವು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶಿಸಿತ್ತು. ಸಿಐಡಿ ವಿಶೇಷ ತಂಡವು ಕಳೆದ ಮೂರು ತಿಂಗಳಿಂದ ತೀವ್ರ ಹುಡುಕಾಟ ನಡೆಸಿತ್ತು.

ಆಧಾರ್ ದೃಢೀಕರಣ ತಂತ್ರಜ್ಞಾನದಿಂದ ಸಿಕ್ಕ ಮಹತ್ವದ ಸುಳಿವು:

ಮನೆಯ ಕೌಟುಂಬಿಕ ಒತ್ತಡದಿಂದಾಗಿ ತೆರಳಿದ್ದ ತನಿಷ್ಕಾ, ಮಲೆ ಮಹದೇಶ್ವರ ಬೆಟ್ಟದ ಕಡೆಗೆ ತೆರಳಿ, ಅಲ್ಲಿ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯದ ಬಳಿಕ ತಮಗೆ ಯಾವುದೇ ಕುಟುಂಬವಿಲ್ಲ ಎಂದು ಸುಳ್ಳು ಹೇಳಿ ಆತನೊಂದಿಗೆ ತೆರಳಿದ್ದರು. ಬಳಿಕ ಆ ಯುವಕ ತನಿಷ್ಕಾಳನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದು, ತೇಜಸ್ವಿನಿಯನ್ನು ತಂಗಿ ಎಂದು ಜೊತೆಯಲ್ಲೇ ಆಶ್ರಯ ನೀಡಿದ್ದನು.

ಪ್ರಕರಣದ ತನಿಖೆ ಮುಂದುವರಿಸಿದ ಸಿಐಡಿ ಅಧಿಕಾರಿಗಳಿಗೆ, ಹೊಸ ಸಿಮ್ ಕಾರ್ಡ್ ಖರೀದಿಸುವ ವೇಳೆ ತನಿಷ್ಕಾ ತನ್ನ ಅಧಿಕೃತ ಆಧಾರ್ ಕಾರ್ಡ್ ಬಳಸಿದಾಗ ಟೆಲಿಕಾಂ ಸೇವಾಣಿದಾರರ ಮೂಲಕ ತಾಂತ್ರಿಕ ಮಾಹಿತಿ ಲಭ್ಯವಾಯಿತು. ಆಧಾರ್ ಸಂಖ್ಯೆಯ ದೃಢೀಕರಣದ ಜಾಡು ಹಿಡಿದು ಹೊರಟ ಸಿಐಡಿ ಅಧಿಕಾರಿಗಳು, ನಿಖರವಾದ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಇಬ್ಬರ ಇರುವಿಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮದುವೆಯಾಗಿ ಪ್ರಸ್ತುತ ಗರ್ಭಿಣಿಯಾಗಿರುವ ತನಿಷ್ಕಾ ಹಾಗೂ ತೇಜಸ್ವಿನಿಯನ್ನು ಕೊನೆಗೂ ಸಿಐಡಿ ಅಧಿಕಾರಿಗಳು ರಕ್ಷಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles