Home ಕ್ರೈಂ ನ್ಯೂಸ್ ಶಾರ್ಜಾದಲ್ಲಿ ಉಡುಪಿ ಮೂಲಕ ಉದ್ಯೋಗಿ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್: ಪಾಕ್ ಪ್ರಜೆ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪುತ್ರ, ಪ್ರಿಯಕರನ ಜೊತೆ ಸೇರಿ ಹತ್ಯೆಗೈದಳಾ ಪತ್ನಿ?
ಕ್ರೈಂ ನ್ಯೂಸ್ಬೆಂಗಳೂರು

ಶಾರ್ಜಾದಲ್ಲಿ ಉಡುಪಿ ಮೂಲಕ ಉದ್ಯೋಗಿ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್: ಪಾಕ್ ಪ್ರಜೆ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪುತ್ರ, ಪ್ರಿಯಕರನ ಜೊತೆ ಸೇರಿ ಹತ್ಯೆಗೈದಳಾ ಪತ್ನಿ?

Share
ಉಡುಪಿ
Share

ಉಡುಪಿ: ಯುಎಇಯ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದ ಉಡುಪಿಯ ಕುಂದಾಪುರ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ (50) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಿ, ದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕಾರಿನ ಡಿಕ್ಕಿಯಲ್ಲಿ ಬಾಂಧಿಸಿಟ್ಟಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಅನುಮಾನ ತಂದ ಮೆಸೇಜ್: ಜುಲೈ 20ರ ನಂತರ ಪ್ರಕಾಶ್  ಧ್ವನಿ ಸಂದೇಶಗಳ ಬದಲಿಗೆ ಕೇವಲ ಪಠ್ಯ ಸಂದೇಶಗಳು  ಬರಲು ಪ್ರಾರಂಭವಾಗಿದ್ದವು. ಇದರಿಂದ ಅನುಮಾನಗೊಂಡ ಭಾರತದಲ್ಲಿದ್ದ ಸಹೋದರ ಅನಿಲ್ ಪ್ರಶಾಂತ್ ಕುಂದರ್ ತನಿಖೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ.

ಡಿಎನ್ಎ ಪರೀಕ್ಷೆಯಿಂದ ದೃಢ: ಶಾರ್ಜಾ ಪೊಲೀಸರು ನಡೆಸಿದ ಹುಡುಕಾಟದ ವೇಳೆ ಒಮಾನ್ ಮಾರ್ಗದ ಬಳಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯಲ್ಲಿ 9 ತುಂಡುಗಳಾಗಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಡಿಎನ್ಎ ಪರೀಕ್ಷೆಯ ಮೂಲಕ ಅದು ಪ್ರಕಾಶ್ ಅವರದ್ದೇ ದೇಹ ಎಂದು ದೃಢಪಟ್ಟಿದೆ.

ಪತ್ನಿ, ಪ್ರಿಯಕರನ ಮೇಲೆ ಅನುಮಾನ: ಹತ್ಯೆ ನಡೆದ ಬೆನ್ನಲ್ಲೇ ಪತ್ನಿ ಟೀನಾ ಹಾಗೂ ಆಕೆಯ ಅಪ್ರಾಪ್ತ ಮಗ ನಾಪತ್ತೆಯಾಗಿದ್ದಾರೆ. ಟೀನಾಳಿಗೆ ಪಾಕಿಸ್ತಾನಿ ಪ್ರಜೆಯೊಂದಿಗೆ ಇದ್ದ ಅಕ್ರಮ ಸಂಬಂಧಕ್ಕೆ ಅಡ್ಡವಾಗಿದ್ದ ಗಂಡ ಪ್ರಕಾಶ್‌ನನ್ನು ಪತ್ನಿ, ಆಕೆಯ ಪ್ರಿಯಕರ ಮತ್ತು ಮಗ ಸೇರಿ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದು, ಶಾರ್ಜಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *