Home ಕ್ರೈಂ ನ್ಯೂಸ್ “ನಮ್ಮ ಫಸ್ಟ್ ಲೇಡಿ ಎಲ್ಲಿದ್ದಾರೆ?”: ಪತ್ನಿ ಮೆಲಾನಿಯಾ ಸಾಧನೆ ಕೊಂಡಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರುವಿದೇಶ

“ನಮ್ಮ ಫಸ್ಟ್ ಲೇಡಿ ಎಲ್ಲಿದ್ದಾರೆ?”: ಪತ್ನಿ ಮೆಲಾನಿಯಾ ಸಾಧನೆ ಕೊಂಡಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

Share
ಡೊನಾಲ್ಡ್ ಟ್ರಂ
Share

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81 ನೇ ಅಧಿವೇಶನದಲ್ಲಿ ಭಾಷಣ ಮಾಡುವ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಗಂಭೀರ ಭಾಷಣದ ನಡುವೆಯೇ ಪತ್ನಿ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ರನ್ನು ಸಾರ್ವಜನಿಕವಾಗಿ ಹೊಗಳುವ ಮೂಲಕ ಗಮನ ಸೆಳೆದಿದ್ದಾರೆ.

ವಿಡಿಯೋ ವೀಕ್ಷಿಸಿ: 

ಭಾಷಣದ ಮಧ್ಯದಲ್ಲಿ ಹಾಸ್ಯಸ್ಪರ್ಶ ನೀಡಿದ ಟ್ರಂಪ್, “ನಮ್ಮ ಫಸ್ಟ್ ಲೇಡಿ ಎಲ್ಲಿದ್ದಾರೆ? ಅವರು ಇಲ್ಲೇ ಎಲ್ಲೋ ಇರಬೇಕು” ಎಂದು ಸಭಿಕರೆಡೆಗೆ ಹುಡುಕಾಡಿದರು. ತಕ್ಷಣವೇ ಸಭಿಕರ ಸಾಲಿನಲ್ಲಿ ಕುಳಿತಿದ್ದ ಮೆಲಾನಿಯಾ ಟ್ರಂಪ್ ಕಡೆಗೆ ಕ್ಯಾಮೆರಾ ತಿರುಗಿದಾಗ, ಅವರು ಮುಗುಳುನಕ್ಕು ಕೈಬೀಸಿದರು.

ಮೆಲಾನಿಯಾ ಅವರ ಜಾಗತಿಕ ರಾಜತಾಂತ್ರಿಕತೆ ಮತ್ತು ಸಾಮಾಜಿಕ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಟ್ರಂಪ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ ಅಮೆರಿಕದ ಮೊದಲ ಫಸ್ಟ್ ಲೇಡಿ ಎಂಬ ಹೆಗ್ಗಳಿಕೆಗೆ ಮೆಲಾನಿಯಾ ಪಾತ್ರರಾಗಿದ್ದಾರೆ ಎಂದು ಸ್ಮರಿಸಿದರು. ಅಲ್ಲದೆ, ಮಕ್ಕಳ ಶಿಕ್ಷಣ, ತಂತ್ರಜ್ಞಾನ ಹಾಗೂ ಆನ್‌ಲೈನ್ ಸುರಕ್ಷತೆಗಾಗಿ ಅವರು ಆರಂಭಿಸಿರುವ ‘ಫಾಸ್ಟರಿಂಗ್ ದಿ ಫ್ಯೂಚರ್ ಟುಗೆದರ್’ (Fostering the Future Together) ಉಪಕ್ರಮದಲ್ಲಿ ಸುಮಾರು 60 ದೇಶಗಳು ಭಾಗಿಯಾಗಿರುವುದನ್ನು ಅವರು ಪ್ರಸ್ತಾಪಿಸಿ ಧನ್ಯವಾದ ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *