SUDDIKSHANA KANNADA NEWS/ DAVANAGERE/ DATE:22-10-2023
ದಾವಣಗೆರೆ (Davanagere): ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ಇರುವುದು ಒಂದೇ ಬಣ ಅದು ಕಾಂಗ್ರೆಸ್ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
READ ALSO THIS STORY:
Big Exclusive: ಚೈತ್ರಾ ಟಿಕೆಟ್ (Ticket) ಕೋಟಿ ಕೋಟಿ ಡೀಲ್ ಮಾಸುವ ಮುನ್ನ ಮತ್ತೊಂದು ಟಿಕೆಟ್ ಡೀಲ್, 2.55 ಕೋಟಿ ರೂ. ವಂಚನೆ ಆರೋಪ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಪ್ರಸ್ತಾಪಿಸಿದ್ದೇಕೆ…?
ಶನಿವಾರ ನಗರದಲ್ಲಿ ದಾಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿ. ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ ಸೇರಿದಂತೆ ಯಾವ ಬಣಗಳೂ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನಲ್ಲಿರುವುದು 70 ಶಾಸಕರಲ್ಲ, 136 ಎಂಎಲ್ ಎ ಗಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಯಾವುದೇ ಹೇಳಿಕೆ ನೀಡದಂತೆ ಯಾರಿಗೂ ಸೂಚನೆ ಕೊಟ್ಟಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆಯಲ್ಲಿ ಕಳೆದ ಮೂರು ದಿನಗಳಿಂದಲೂ ದಾಂಡಿಯಾ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದಾರೆ. ನಾನು ಹೋಗುತ್ತಿದ್ದೇನೆ. ದೇವಿಯು ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥನೆ ಮಾಡಿ ಹೋಗುತ್ತಿದ್ದೇನೆ. ಮೈಸೂರು ದಸರಾಕ್ಕೆ ನನಗೇನೂ ಕರೆದಿಲ್ಲ. ದಾವಣಗೆರೆಯಲ್ಲಿಯೇ ದಸರಾ ಆಚರಿಸುತ್ತಿದ್ದೇವೆ. ಅಲ್ಲಿಗೇನೂ ಹೋಗಿಲ್ಲ. ಇಲ್ಲಿಯೇ ಒಂದು ಗಂಟೆ ಕಾಲ ಕಳೆದು ಹೋಗುತ್ತಿದ್ದೇನೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.