SUDDIKSHANA KANNADA NEWS/ DAVANAGERE/ DATE:12-09-2023
ದಾವಣಗೆರೆ: ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಪಂಚಪೀಠಗಳಲ್ಲಿ ಒಂದಾದ ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ಪೀಠಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ (Shamanur Mallikarjun) ಅವರು ಭೇಟಿ ನೀಡಿದರು.
ಈ ಸುದ್ದಿಯನ್ನೂ ಓದಿ:
Davanagere: ಆನೆ ಕಿರೀಟ ಇಟ್ಟಿತಲೆ ಮಹಾತಾಯಿ ಬೇರುಸೊಪ್ಪು ಬೇಸಿತ್ತಲೆ ಎಚ್ಚರಲ್ಲೇ: ಆನೆಕೊಂಡ ಕಾರಣಿಕದ ಅರ್ಥವೇನು…. ಕೊಟ್ಟ ಎಚ್ಚರಿಕೆ ಏನು?
ಈ ವೇಳೆ ಶ್ರೀಶೈಲ ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರೆವೇರಿಸಿ ಜಗದ್ಗುರುಗಳ ಇಷ್ಟ ಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಚಿವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ, ಪುತ್ರ ಶಾಮನೂರು ಸಮರ್ಥ್ ಮತ್ತು ಸಮಾಜದ ಯುವ ಮುಖಂಡರಾದ ಆರ್. ಟಿ. ಪ್ರಶಾಂತ್ ದುಗ್ಗತ್ತಿಮಠ ಪೂಜೆಯಲ್ಲಿ ಇದ್ದರು.
ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಳೆದೊಂದು ತಿಂಗಳಿನಿಂದ ಟೆಂಪಲ್ ರನ್ ಶುರು ಮಾಡಿದ್ದಾರೆ. ದಾವಣಗೆರೆಯಲ್ಲಿ ಶಾಮನೂರಿನಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನ, ದುರ್ಗಾಂಬಿಕಾ ದೇವಸ್ಥಾನ ಸೇರಿದಂತೆ ಹಲವು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ತುಮಕೂರು, ಹಂಪಿ ಸೇರಿದಂತೆ ವಿವಿಧ ಕಡೆಗಳಲ್ಲಿನ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.
ವಿಧಾನಸಭೆ ಚುನಾವಣೆಗೆ ಮುನ್ನ ದೇವರಲ್ಲಿ ಹರಕೆ ಹೊತ್ತಿರಬಹುದು. ಗೆದ್ದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಹೋಗುತ್ತಿರಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮಲ್ಲಿಕಾರ್ಜುನ್ ಅವರ ಟೆಂಪಲ್ ರನ್ ಜೋರಾಗಿಯೇ ಇದೆ.