ದಾವಣಗೆರೆ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಹಾಗೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ತಕ್ಷಣವೇ ತಡೆಯಬೇಕು ಎಂದು ಆಗ್ರಹಿಸಿ ಇಂದು ನಗರದ ಜಯದೇವ ವೃತ್ತದಲ್ಲಿ ಎಸ್‌ಡಿಪಿಐ ಪಕ್ಷದ ಯುವ ಘಟಕವಾಗಿರುವ ಯಂಗ್ ಡೆಮಾಕ್ರೆಟ್ಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನಾಯಕರು, “ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ನೀಟ್ ಹಗರಣದ ಹಿಂದೆ ಬೃಹತ್ ದಂಧೆಯೇ ಅಡಗಿದೆ. ಹಗಲು-ರಾತ್ರಿ ಕಷ್ಟಪಟ್ಟು ಓದಿದ ಅರ್ಹ ಹಾಗೂ
ಬಡ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜೊತೆಗೆ ತಮ್ಮ ಭವಿಷ್ಯಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ದಮನಕಾರಿ ನೀತಿಯನ್ನು
ಸರ್ಕಾರ ತಕ್ಷಣವೇ ಕೈಬಿಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು:
- NEET ವ್ಯವಸ್ಥೆಯಿಂದ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ನ್ಯಾಯವನ್ನು ಒದಗಿಸಬೇಕು.
- ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ ಕ್ರಮದ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆಯನ್ನು ಆದೇಶಿಸಬೇಕು.
- ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾದ ಎಲ್ಲಾ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ವಿದ್ಯಾರ್ಥಿಗಳು ಹಾಗೂ ಯುವ ಕಾರ್ಯಕರ್ತರ ಮೇಲಿನ ಕಿರುಕುಳವನ್ನು ನಿಲ್ಲಿಸಬೇಕು.
- NEET ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಮತ್ತು ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗಳ ಮೂಲಕ ಪ್ರವೇಶ ನಡೆಸಲು ರಾಜ್ಯಗಳಿಗೆ ಇರುವ ಹಕ್ಕನ್ನು ಪುನಃಸ್ಥಾಪಿಸಬೇಕು. ಈ ಪರೀಕ್ಷೆಗಳನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರದ ಅಡಿಯಲ್ಲಿ ನಡೆಸಬೇಕು.
- ಸಮಾನತೆ, ಪಾರದರ್ಶಕತೆ ಮತ್ತು ವಿದ್ಯಾರ್ಥಿ-ಸ್ನೇಹಿಯಾದ ವೈದ್ಯಕೀಯ ಪ್ರವೇಶ ವ್ಯವಸ್ಥೆಯನ್ನು ಖಚಿತಪಡಿಸಬೇಕು. ಅದು ಫೆಡರಲ್ ವ್ಯವಸ್ಥೆ ಮತ್ತು ಸಮಾನ ಶೈಕ್ಷಣಿಕ ಅವಕಾಶಗಳಿಗೆ ಗೌರವ ನೀಡುವಂತಿರಬೇಕು.
ಇದರೊಂದಿಗೆ ಇದಕ್ಕೆ ಹೊಣೆ ಹೊತ್ತ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಕೇವಲ ರಾಜೀನಾಮೆ ನೀಡಿದರೆ ಅಷ್ಟೇ ಅಲ್ಲ,ಇವರ ಮೇಲೆ 22 ವಿದ್ಯಾರ್ಥಿಗಳ ಕೊಲೆ ಆರೋಪದಲ್ಲಿ ಕೇಸ್ ಅನ್ನು ದಾಖಲಿಸಿಕಾನೂನು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ನೊಂದ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಯಂಗ್ ಡೆಮೊಕ್ರೆಟ್ಸ್ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರಮುಖ ನಾಯಕರು ಭಾಗಿ:
ಈ ಪ್ರತಿಭಟನಾ ಸ್ಥಳದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಜಿಲ್ಲಾ ಎಸ್ ಡಿಪಿಐ ಅಧ್ಯಕ್ಷ ಎ.ಆರ್. ತಾಹಿರ್, ಉಪಾಧ್ಯಕ್ಷರಾಧ ರಿಯಾಜ್ ಅಹಮದ್ ರಿಝಿ ಕಾರ್ಯದರ್ಶಿಗಳಾದ ಮಹಮ್ಮದ್ ಸಾದ್, ಮಹಮ್ಮದ್ ಮೋಸಿನ್, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ಅಹಮದ್, ಯಂಗ್ ಡೆಮಾಕ್ರೆಟ್ಸ್ ರಾಜ್ಯ ಸಮಿತಿ ಸದಸ್ಯರಾದ ಸಲೀಮ್ ಮಲಿಕ್ ಉಪಸ್ಥಿತರಿದ್ದು ಹೋರಾಟಕ್ಕೆ ನೇತೃತ್ವ ನೀಡಿದರು.
ಅಲ್ಲದೆ, ಯಂಗ್ ಡೆಮಾಕ್ರೆಟ್ಸ್ ಸಂಘಟನೆಯ ವಿವಿಧ ಪದಾಧಿಕಾರಿಗಳು, ಪ್ರಮುಖ ಮಹಿಳಾ ಹೋರಾಟಗಾರರು, ವಿವಿಧ ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷರು ಹಾಗೂ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಲ್ಲಿಕಾರ್ಜುನ್ ಅವರು ಭಾಗವಹಿಸಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದರು.
- Abolish NEET
- DAVANAGERE LATEST NEWS
- DAVANAGERE NEWS
- Dharmendra Pradhan Resignation
- Jayadeva Circle protest
- Karnataka student protest
- NEET exam scam
- NEET paper leak protest
- SDPI Young Democrats
- ಎಸ್‌ಡಿಪಿಐ ಪ್ರತಿಭಟನೆ
- ಕನ್ನಡಿಗರ ಧ್ವನಿ
- ಜಯದೇವ ವೃತ್ತ ದಾವಣಗೆರೆ
- ದಾವಣಗೆರೆ ಸುದ್ದಿ
- ಧರ್ಮೇಂದ್ರ ಪ್ರಧಾನ್
- ನೀಟ್ ಪತ್ರಿಕೆ ಸೋರಿಕೆ
- ನೀಟ್ ರದ್ದತಿ
- ಯಂಗ್ ಡೆಮಾಕ್ರಾಟ್ಸ್
- ವಿದ್ಯಾರ್ಥಿ ಹೋರಾಟ





Leave a comment