ದಾವಣಗೆರೆ: ತಪಸ್ಸು ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ಉಪಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿದ್ದು, ಅವರಿಗೆ ಕೋಟಿ ಕೋಟಿ ಧನ್ಯವಾದ ಸಲ್ಲಿಸುತ್ತೇನೆ ಎಂದು ನೂತನ ಶಾಸಕ ಸಮರ್ಥ್ ಶಾಮನೂರು ಹೇಳಿದ್ದಾರೆ.
ಫಲಿತಾಂಶ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಜಯ ಗಳಿಸಿದ್ದು ತುಂಬಾನೇ ಸಂತೋಷ ತಂದಿದೆ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯ,
ರಾಷ್ಟ್ರ ಮಾತ್ರವಲ್ಲ, ಜಿಲ್ಲೆ ಜಿಲ್ಲೆಗಳಿಂದ ಮುಖಂಡರು, ಕಾರ್ಯಕರ್ತರು ಆಗಮಿಸಿ ನನಗೆ ಆಶೀರ್ವದಿಸಿದ್ದರು. ಜನರು ಆಶೀರ್ವಾದ ಮಾಡಿದ್ದಾರೆ. ಮತದಾರರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ, ತಂದೆ ಎಸ್. ಎಸ್. ಮಲ್ಲಿಕಾರ್ಜುನ್, ತಾಯಿ ಪ್ರಭಾ ಮಲ್ಲಿಕಾರ್ಜುನ್ ಅವರು ಸೇರಿದಂತೆ ಆಶೀರ್ವಾದ ನನ್ನ ಮೇಲಿದೆ. ತಾತ ಅಕಾಲಿಕ ನಿಧನರಾದ ಬಳಿಕ ಎದುರಾದ ಚುನಾವಣೆಯಲ್ಲಿ ಹಗಲಿರುಳು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಿದ್ದಾರೆ. ಗೆಲುವು ಸೋಲಿಗಿಂತ ಮುಖ್ಯವಾದದ್ದು ಜವಾಬ್ದಾರಿ. 2 ವರ್ಷ ಸೇವೆ ಮಾಡುತ್ತೇನೆ. ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ತಪಸ್ಸು ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಈ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಆಸ್ಪತ್ರೆ, ಶಾಲಾ ಕಾಲೇಜು,
ಆಶ್ರಯ ಯೋಜನೆಯಡಿ ನಿರ್ಗತಿಗರಿಕೆ ಮನೆ, ನಿವೇಶನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇನೆ. ವಯಸ್ಸು ಎಷ್ಟಾದರೂ ಇರಲಿ, ಗೆದ್ದಿದ್ದೇನೆ, ಕೆಲಸ ಮಾಡಬೇಕಷ್ಟೇ ಎಂಬುದು ನನ್ನ ಭಾವನೆ ಎಂದು ನೂತನ ಶಾಸಕರು ಹೇಳಿದರು.
- Congress Victory
- Davanagere Politics
- Davanagere South By-election Result
- Development Projects
- S. S. MALLIKARJUN
- Samarth Shamanur
- Shamanur Shivashankarappa
- voters thanks
- ಅಭಿವೃದ್ಧಿ ಕೆಲಸಗಳು
- ಎಸ್. ಎಸ್. ಮಲ್ಲಿಕಾರ್ಜುನ್
- ಕಾಂಗ್ರೆಸ್ ಗೆಲುವು
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ
- ಮತದಾರರಿಗೆ ಧನ್ಯವಾದ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು





Leave a comment