ಬೆಂಗಳೂರು: ಚಿತ್ರರಂಗದಲ್ಲಿ ಗ್ಲಾಮರ್, ಸ್ಟಾರ್‌ಡಮ್ ಜೊತೆಗೆ ಕರಾಳ ಮುಖಗಳೂ ಇರುತ್ತವೆ ಎಂಬುದಕ್ಕೆ 80 ಮತ್ತು 90ರ ದಶಕದ ಬಾಲಿವುಡ್ ಇತಿಹಾಸವೇ ಸಾಕ್ಷಿ. ಮುಂಬೈ ಭೂಗತ ಲೋಕದ (Underworld) ಕರಾಳ ನೆರಳು ಬಾಲಿವುಡ್ ಮೇಲೆ ಎಷ್ಟು ಗಾಢವಾಗಿ ಆವರಿಸಿತ್ತು ಎನ್ನುವುದನ್ನು ಖ್ಯಾತ ನಟಿ ಸಾಕ್ಷಿ ಶಿವಾನಂದ್ ಅವರ ಜೀವನದ ಘಟನೆಯೊಂದು ನೆನಪಿಸುತ್ತದೆ.
ಕನ್ನಡದಲ್ಲಿ ‘ಸೈನಿಕ’, ‘ಗಲಾಟೆ ಅಳಿಯಂದಿರು’ ಚಿತ್ರಗಳ ಮೂಲಕ ಮನೆಮಾತಾಗಿದ್ದ ದಕ್ಷಿಣ ಭಾರತದ ಜನಪ್ರಿಯ ನಟಿ ಸಾಕ್ಷಿ ಶಿವಾನಂದ್, ಪ್ರಾಣಭಯದಿಂದ ತಮಗೆ ಸಿಕ್ಕ ದೊಡ್ಡ ಬಾಲಿವುಡ್ ಅವಕಾಶವನ್ನೇ ಕೈಬಿಟ್ಟು ಓಡಿ ಹೋಗಿದ್ದ ಕಹಿ ಸತ್ಯ ಈಗ ಮತ್ತೆ ಚರ್ಚೆಗೆ ಬಂದಿದೆ.
‘ತುಮ್’ ಚಿತ್ರದ ಪ್ರೊಡ್ಯೂಸರೇ ಅಂಡರ್‌ವರ್ಲ್ಡ್ ಡಾನ್!
1993ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಸಾಕ್ಷಿ ಶಿವಾನಂದ್ ದಕ್ಷಿಣದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾಗ ಅವರಿಗೆ ಬಾಲಿವುಡ್‌ನಿಂದ ಸೆಕೆಂಡ್ ಇನ್ನಿಂಗ್ಸ್‌ನ ದೊಡ್ಡ ಅವಕಾಶ ಸಿಕ್ಕಿತು. ಸೈಫ್ ಅಲಿ ಖಾನ್ ನಾಯಕರಾಗಿದ್ದ ‘ತುಮ್’ (Tum) ಚಿತ್ರದಲ್ಲಿ ಅವರಿಗೆ ಮುಖ್ಯ ಪಾತ್ರದ ಆಫರ್ ಬಂದಿತ್ತು. ಆದರೆ, ಚಿತ್ರದ ಶೂಟಿಂಗ್ ಆರಂಭವಾಗುವ ಹೊತ್ತಿಗೆ ಆ ಚಿತ್ರದ ನಿರ್ಮಾಪಕನಿಗೆ ಭೂಗತ ಲೋಕದೊಂದಿಗೆ ನೇರ ಸಂಪರ್ಕವಿದೆ ಎಂಬ ಸತ್ಯ ಸಾಕ್ಷಿ ಅವರಿಗೆ ತಿಳಿಯಿತು. “ಆ ಪ್ರೊಡ್ಯೂಸರ್ ಅಂಡರ್‌ವರ್ಲ್ಡ್ ಹಿನ್ನೆಲೆಯವನು ಎಂದು ತಿಳಿದಾಗ ನಾನು ಅಕ್ಷರಶಃ ನಡುಗಿಹೋಗಿದ್ದೆ. ಮಾಫಿಯಾ ಜಗತ್ತಿನ ಹಿಡಿತಕ್ಕೆ ಹೆದರಿ ನಾನು ಎಲ್ಲವನ್ನೂ ಬಿಟ್ಟು ತಕ್ಷಣವೇ ದಕ್ಷಿಣದ ಸಿನಿಮಾಗಳ ಕಡೆಗೆ ಓಡಿಬಂದೆ” ಎಂದು ಹಳೆಯ ಸಂದರ್ಶನವೊಂದರಲ್ಲಿ ಸಾಕ್ಷಿ ಹಂಚಿಕೊಂಡಿದ್ದಾರೆ.
ಫೋನ್ ನಂಬರ್ ಬದಲಾಯಿಸಿ ಎಸ್ಕೇಪ್ ಆದ ನಟಿ
ಪ್ರಾಜೆಕ್ಟ್‌ನಿಂದ ಹೊರಬಂದ ಮೇಲೂ ಆ ನಿರ್ಮಾಪಕ ಸಾಕ್ಷಿ ಅವರನ್ನು ಸಂಪರ್ಕಿಸಲು ನಿರಂತರವಾಗಿ ಯತ್ನಿಸುತ್ತಿದ್ದನಂತೆ. ಇದರಿಂದ ತೀವ್ರ ಭಯಭೀತರಾದ ನಟಿ, ತಮ್ಮ ಫೋನ್ ನಂಬರ್ ಅನ್ನೇ ಬದಲಾಯಿಸಬೇಕಾಯಿತು. ತಾನು ಎಲ್ಲಿದ್ದೇನೆ ಎಂಬುದು ಯಾರಿಗೂ ತಿಳಿಯದಂತೆ ಅನಾಮಧೇಯರಾಗಿ ಬದುಕಿದರು. ಈ ಒಂದೇ ಒಂದು ಘಟನೆ ಅವರ ಇಡೀ ಬಾಲಿವುಡ್ ವೃತ್ತಿಜೀವನವನ್ನು ಕೊನೆಗಾಣಿಸಿತು. ನಂತರ ಅವರು ಕನ್ನಡದ ‘ಕೋದಂಡರಾಮ’, ‘ತಂದೆಗೆ ತಕ್ಕ ಮಗ’ ಹಾಗೂ 2014ರಲ್ಲಿ ತೆರೆಕಂಡ ರವಿಚಂದ್ರನ್ ಅವರ ‘ಪರಮಶಿವ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.
ಡೇವಿಡ್ ಧವನ್, ಕರಣ್ ಜೋಹರ್‌ಗೂ ಇತ್ತು ಮಾಫಿಯಾ ಕಾಟ
ಕೇವಲ ಸಾಕ್ಷಿ ಶಿವಾನಂದ್ ಮಾತ್ರವಲ್ಲ, ಆ ಕಾಲದಲ್ಲಿ ಬಾಲಿವುಡ್‌ನ ದೊಡ್ಡ ದೊಡ್ಡ ದಿಗ್ಗಜರು ಕೂಡ ಅಂಡರ್‌ವರ್ಲ್ಡ್‌ಗೆ ಹೆದರಿ ಬದುಕುತ್ತಿದ್ದರು. ಖ್ಯಾತ ನಟ ವರುಣ್ ಧವನ್ ಇತ್ತೀಚೆಗೆ ಮಾತನಾಡಿ, ತಮ್ಮ ತಂದೆ ಡೇವಿಡ್ ಧವನ್ ಅವರಿಗೆ ಅಂಡರ್‌ವರ್ಲ್ಡ್‌ನಿಂದ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಬಹಿರಂಗಪಡಿಸಿದ್ದಾರೆ. ಅತ್ತ ನಿರ್ದೇಶಕಿ ಫರಾ ಖಾನ್ ಹಂಚಿಕೊಂಡ ಮಾಹಿತಿಯಂತೆ, ಕರಣ್ ಜೋಹರ್ ತಮ್ಮ ಮೊದಲ ಸಿನಿಮಾ ‘ಕುಚ್ ಕುಚ್ ಹೋತಾ ಹೈ’ ಪ್ರೀಮಿಯರ್ ಶೋ ವೇಳೆಗೆ ಮಾಫಿಯಾದಿಂದ ನೇರ ಜೀವಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದರು. ಬೆಳ್ಳಿತೆರೆಯ ಮೇಲೆ ರಂಜಿಸುತ್ತಿದ್ದ ನಟ-ನಟಿಯರ ನಿಜ ಜೀವನದ ಹಿಂದೆ ಇಂತಹದ್ದೊಂದು ಭಯಾನಕ ಕತ್ತಲೆಯ ಪ್ರಪಂಚವಿತ್ತು ಎಂಬುದಕ್ಕೆ ಸಾಕ್ಷಿ ಶಿವಾನಂದ್ ಅವರ ಸಿನಿಮೀಯ ಬದುಕೇ ಸಾಕ್ಷಿ.
- 90ರ ದಶಕದ ಬಾಲಿವುಡ್ ಮಾಫಿಯಾ
- Bollywood News Kannada
- Bollywood Underworld Connection 90s
- Sainika Actress Sakshi
- Sakshi Shivanand
- Sakshi Shivanand Kannada Movies
- Sakshi Shivanand Underworld Fear
- Tum Movie Producer Mafia
- Why Sakshi Shivanand Left Bollywood
- ಅಂಡರ್‌ವರ್ಲ್ಡ್ ಬೆದರಿಕೆ
- ಕನ್ನಡ ಸಿನಿಮಾಗಳು
- ಕರಣ್ ಜೋಹರ್ ಭೂಗತ ಲೋಕ
- ಗಲಾಟೆ ಅಳಿಯಂದಿರು
- ನಟಿ ಸಾಕ್ಷಿ ಶಿವಾನಂದ್
- ಬಾಲಿವುಡ್ ಮಾಫಿಯಾ
- ಸಾಕ್ಷಿ ಶಿವಾನಂದ್
- ಸೈನಿಕ ನಟಿ ಸಾಕ್ಷಿ ಶಿವಾನಂದ್





Leave a comment