Home ಕ್ರೈಂ ನ್ಯೂಸ್ ಚುನಾವಣಾ ಆಯೋಗದ ಬೆಂಬಲಕ್ಕೆ ನಿಂತ 124 ಮಾಜಿ ಅಧಿಕಾರಿಗಳು: ‘ವೋಟ್ ಚೋರಿ’ ಆರೋಪ ತಳ್ಳಿಹಾಕಿದ ನಿವೃತ್ತ ಐಎಎಸ್, ಐಎಫ್‌ಎಸ್ ಅಧಿಕಾರಿಗಳು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಚುನಾವಣಾ ಆಯೋಗದ ಬೆಂಬಲಕ್ಕೆ ನಿಂತ 124 ಮಾಜಿ ಅಧಿಕಾರಿಗಳು: ‘ವೋಟ್ ಚೋರಿ’ ಆರೋಪ ತಳ್ಳಿಹಾಕಿದ ನಿವೃತ್ತ ಐಎಎಸ್, ಐಎಫ್‌ಎಸ್ ಅಧಿಕಾರಿಗಳು!

Share
ಚುನಾವಣಾ
Share

ನವದೆಹಲಿ:ದೇಶದ ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಪ್ರಶ್ನಿಸುತ್ತಿರುವ ವಿರೋಧ ಪಕ್ಷಗಳ ನಾಯಕರ ಆರೋಪಗಳಿಗೆ 124 ಮಾಜಿ ಐಎಎಸ್ (IAS) ಮತ್ತು ಐಎಫ್‌ಎಸ್ (IFS) ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಆಧಾರವಿಲ್ಲದೆ ‘ವೋಟ್ ಚೋರಿ’ (ಮತಗಳ ಕಳ್ಳತನ) ಹಾಗೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವುದು ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಕುಸಿಯುವಂತೆ ಮಾಡುತ್ತದೆ ಎಂದು ನಿವೃತ್ತ ಅಧಿಕಾರಿಗಳು ಭಾರತದ ನಾಗರಿಕರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಎಚ್ಚರಿಸಿದ್ದಾರೆ.

ವಿರೋಧ ಪಕ್ಷಗಳ ನಾಯಕರು ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಪತ್ರ ಹೊರಬಿದ್ದಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಹಿರಿಯ ನಾಯಕರನ್ನು ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಸುದೀರ್ಘ ಕಾಲ ಚುನಾವಣಾ ಪ್ರಕ್ರಿಯೆಗಳನ್ನು ಹತ್ತಿರದಿಂದ ನಿರ್ವಹಿಸಿದ ಅನುಭವ ಹೊಂದಿರುವ ಅಧಿಕಾರಿಗಳು ಚುನಾವಣಾ ಆಯೋಗ ಹಾಗೂ ಇವಿಎಂ (EVM) ಭದ್ರತಾ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಾಕ್ಷ್ಯಾಧಾರ ರಹಿತ ಆರೋಪ: ಯಾವುದೇ ಸೂಕ್ತ ಪುರಾವೆಗಳಿಲ್ಲದೆ ‘ರಿಗ್ಗಿಂಗ್’ ಎಂಬ ಪದ ಬಳಸುವುದು ಪ್ರಜಾಪ್ರಭುತ್ವದ ನಂಬಿಕೆಗೆ ಮಾರಕ.

ಚುನಾವಣಾ ಭದ್ರತೆ: ಮತಗಟ್ಟೆ ಏಜೆಂಟ್‌ಗಳು, ಇವಿಎಂ ಸೀಲಿಂಗ್, ಸ್ಟ್ರಾಂಗ್ ರೂಮ್ ಭದ್ರತೆ ಹಾಗೂ ವಿವಿಪ್ಯಾಟ್  ತಾಳೆ ಪ್ರಕ್ರಿಯೆಗಳಿಂದಾಗಿ ಚುನಾವಣೆಯಲ್ಲಿ ಅಕ್ರಮ ಎಸಗಲು ಸಾಧ್ಯವಿಲ್ಲ.

ಬಿಹಾರ ಚುನಾವಣೆ ಉದಾಹರಣೆ: 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಮರು ಮತದಾನ ನಡೆಯಲಿಲ್ಲ. ಸಾರ್ವಕಾಲಿಕ ಗರಿಷ್ಠ ಮತದಾನದ ಜೊತೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸುಧಾರಿತ ವ್ಯವಸ್ಥೆಗೆ ಸಾಕ್ಷಿ.

ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯಬೇಕಾದರೆ ವಿವಿಧ ರಾಜಕೀಯ ಪಕ್ಷಗಳ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಸೋಲುವ ಅಭ್ಯರ್ಥಿಯ ಏಜೆಂಟ್‌ಗಳು ಶಾಮೀಲಾಗಬೇಕಾಗುತ್ತದೆ, ಇದು ಅಸಾಧ್ಯ. ಆದ್ದರಿಂದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ದುರ್ಬಲಗೊಳಿಸಬಾರದು ಎಂದು ಮಾಜಿ ಅಧಿಕಾರಿಗಳ ಬಳಗ ಮನವಿ ಮಾಡಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles