Home ದಾವಣಗೆರೆ ಆರ್‌ಜಿಯುಹೆಚ್‌ಎಸ್ ವಾಲಿಬಾಲ್ ಪಂದ್ಯಾವಳಿ: ಪುರುಷರ ವಿಭಾಗದಲ್ಲಿ ಜಿಎಂಐಪಿಎಸ್‌ಆರ್, ಮಹಿಳಾ ವಿಭಾಗದಲ್ಲಿ ಎಸ್‌ಎಸ್‌ಐಎಂಎಸ್‌ ಅಂಡ್‌ ಆರ್‌ಸಿ ಚಾಂಪಿಯನ್‌!
ದಾವಣಗೆರೆಕ್ರೀಡೆನವದೆಹಲಿಬೆಂಗಳೂರು

ಆರ್‌ಜಿಯುಹೆಚ್‌ಎಸ್ ವಾಲಿಬಾಲ್ ಪಂದ್ಯಾವಳಿ: ಪುರುಷರ ವಿಭಾಗದಲ್ಲಿ ಜಿಎಂಐಪಿಎಸ್‌ಆರ್, ಮಹಿಳಾ ವಿಭಾಗದಲ್ಲಿ ಎಸ್‌ಎಸ್‌ಐಎಂಎಸ್‌ ಅಂಡ್‌ ಆರ್‌ಸಿ ಚಾಂಪಿಯನ್‌!

Share
ವಾಲಿಬಾಲ್
Share

ದಾವಣಗೆರೆ: ನಗರದ ಜಿಎಂ ಯೂನಿವರ್ಸಿಟಿ ಆವರಣದಲ್ಲಿರುವ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸಂಸ್ಥೆಯು (ಜಿಎಂಐಪಿಎಸ್‌ಆರ್) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಹೆಚ್‌ಎಸ್) 2026-27ನೇ ಸಾಲಿನ ದಾವಣಗೆರೆ ವಲಯದ ಪುರುಷ ಮತ್ತು ಮಹಿಳಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯು  ಸಮಾರೋಪಗೊಂಡಿತು.

ನವೆಂಬರ್ 2 ರಿಂದ ಜಿಎಂ ಯೂನಿವರ್ಸಿಟಿ ಕ್ಯಾಂಪಸ್‌ನ ಕ್ರೀಡಾ ಮೈದಾನದಲ್ಲಿ ನಡೆದ ಕ್ರೀಡಾ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಸಾಧಿಸುವ ಮೂಲಕ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸಂಸ್ಥೆಯ (ಜಿಎಂಐಪಿಎಸ್‌ಆರ್) ದಾವಣಗೆರೆ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಈ ತಂಡದೊಂದಿಗೆ ಜಯ ಸಾಧಿಸಲು ಪೈಪೋಟಿ ನೀಡಿದ ಚಿತ್ರದುರ್ಗದ ಬಸವೇಶ್ವರ ಮೆಡಿಕಲ್‌ ಕಾಲೇಜ್‌ ಅಂಡ್‌ ಹಾಸ್ಪಿಟಲ್‌ ತಂಡವು ದ್ವಿತೀಯ ಸ್ಥಾನ ಪಡೆದು ರನ್ನರ್ ಅಪ್‌ ಆಗಿ ತೃಪ್ತಿ ಕಂಡಿತು. ದಾವಣಗೆರೆಯ ಸಂಜೀವಿನಿ ಆಯುರ್ವೇದಿಕ್ ಮೆಡಿಕಲ್‌ ಕಾಲೇಜು ತಂಡವು ತೃತೀಯ ಸ್ಥಾನ ಪಡೆದರೆ, ಧಾರವಾಡದ ಸಿ.ಬಿ. ಗುತ್ತಲ ಆಯುರ್ವೇದಿಕ್ ಮೆಡಿಕಲ್‌ ಕಾಲೇಜಿನ ತಂಡವು ನಾಲ್ಕನೇ ಸ್ಥಾನ ಪಡೆಯಿತು.

ಅಂತೆಯೇ ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ದಾವಣಗೆರೆಯ ಎಸ್‌ಎಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ರೀಸರ್ಚ್‌ ಸೆಂಟರ್‌ ತಂಡವು ಚಾಂಪಿಯನ್‌ ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ತಂಡದ ವಿರುದ್ಧ ಸೋಲೊಪ್ಪಿಕೊಂಡ ಶಿವಮೊಗ್ಗದ ಶಿವಮೊಗ್ಗ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ತಂಡವು ದ್ವಿತೀಯ ಸ್ಥಾನ ಮೂಲಕ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದೆ.

ಚಿತ್ರದುರ್ಗದ ಬಸವೇಶ್ವರ ಮೆಡಿಕಲ್‌ ಕಾಲೇಜ್‌ ಅಂಡ್‌ ಹಾಸ್ಪಿಟಲ್‌ ತೃತೀಯ ಸ್ಥಾನ ಸ್ಥಾನಕ್ಕೆ ತೃಪ್ತಿ ಪಡೆದಿದ್ದು, ದಾವಣಗೆರೆಯ ಜಗದ್ಗುರು ಜಯದೇವ ಮುರುಘರಾಜೇಂದ್ರ ಮೆಡಿಕಲ್‌ ಕಾಲೇಜು (ಜೆಜೆಎಂಎಂಸಿ) ತಂಡ ನಾಲ್ಕನೇ ಸ್ಥಾನ ಪಡೆದಿದೆ.

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ಮತ್ತು ಬಹುಮಾನಗಳನ್ನು ನೀಡಿ ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೆಚ್.ಎಸ್. ಕಿರಣ್‌ ಕುಮಾರ್‌, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಜಿ.ಬಿ. ಅಜ್ಜಯ್ಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಲಯ ಸಮನ್ವಯಾಧಿಕಾರಿ ಗೋಪಾಲ ಕೃಷ್ಣ, ದಾವಣಗೆರೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಮಹೇಶ್, ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ದೈಹಿಕ ನಿರ್ದೇಶಕರಾದ ರಮೇಶ್ ನಾಯಕ್, ಜಿಎಂಐಪಿಎಸ್ಆರ್ನ ಯಶವಂತ್ ಎ.ಎಸ್., ಹನುಮಂತಪ್ಪ ವೈ, ಪುಂಡಲೀಕ, ಸಚಿನ್, ಭರತ್ ಸೇರಿದಂತೆ ಇತರರು ಇದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles