ಕೋಲ್ಕತ್ತಾ: 2024ರ ವೈದ್ಯೆಯ ರೇಪ್ ಹಾಗೂ ಮರ್ಡರ್ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮತ್ತು ಆತುರದ ಅಂತ್ಯಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿರುವ ಪಾಣಿಹಟಿ ಪುರಸಭೆಯ ಮಾಜಿ ಅಧ್ಯಕ್ಷ, ತೃಣಮೂಲ ಕಾಂಗ್ರೆಸ್ (TMC) ನಾಯಕ ಸೋಮನಾಥ್ ಡೇ ಅವರ ಮೇಲೆ ಸಾರ್ವಜನಿಕರ ಗುಂಪೊಂದು ಕಲ್ಲು, ಇಟ್ಟಿಗೆ ಹಾಗೂ ಹಸಿ ಮೊಟ್ಟೆಗಳಿಂದ ತೀವ್ರ ದಾಳಿ ನಡೆಸಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಖಾರ್ಡಾ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ತಲೆಗೆ ಹೆಲ್ಮೆಟ್ ಧರಿಸಿ ಪೊಲೀಸರು ಸೋಮನಾಥ್ ಡೇ ಅವರನ್ನು ಕೋರ್ಟ್ಗೆ ಕರೆದೊಯ್ಯಲು ವಾಹನಕ್ಕೆ ಹತ್ತಿಸುತ್ತಿದ್ದಾಗ ಕೋಪೋದ್ರಿಕ್ತ ಸಾರ್ವಜನಿಕರ ಗುಂಪು ದಾಳಿ ನಡೆಸಿದೆ. ಈ ವೇಳೆ ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಹಲವು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ.
ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಸೋಮನಾಥ್ ಡೇ ಅವರನ್ನು ಇತ್ತೀಚೆಗಷ್ಟೇ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ಪಶ್ಚಿಮ ಬಂಗಾಳಕ್ಕೆ ಕರೆತಂದಿದ್ದರು. ಆರ್ಜಿ ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಹತ್ಯೆಯ ನಂತರ, ಶವವನ್ನು ಆತುರದಲ್ಲಿ ಅಂತ್ಯಕ್ರಿಯೆ ನಡೆಸಿ ಪ್ರಮುಖ ಸಾಕ್ಷ್ಯಗಳನ್ನು ನಾಶಮಾಡಲು ಯತ್ನಿಸಿದ ಆರೋಪ ಇವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮನಾಥ್ ಅವರನ್ನು ಬಾರಕ್ಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲು ಮನವಿ ಮಾಡಿದ್ದಾರೆ.
- Barrackpore court
- Khardah police station attack
- Kolkata doctor case evidence tampering
- Panihati municipality ex chief
- RG Kar Case
- Somnath Dey arrested
- TMC leader arrested
- West Bengal News
- ಆರ್ಜಿ ಕರ್ ಪ್ರಕರಣ
- ಕೋಲ್ಕತ್ತಾ ರೇಪ್ ಮರ್ಡರ್ ಕೇಸ್
- ಖಾರ್ಡಾ ಪೊಲೀಸ್ ಠಾಣೆ
- ತೃಣಮೂಲ ಕಾಂಗ್ರೆಸ್
- ಪಾಣಿಹಟಿ ಪುರಸಭೆ
- ಬಾರಕ್ಪೋರ್ ಕೋರ್ಟ್
- ಸಾಕ್ಷ್ಯ ನಾಶ ಪ್ರಕರಣ
- ಸಾರ್ವಜನಿಕರಿಂದ ದಾಳಿ
- ಸೋಮನಾಥ್ ಡೇ arrest





Leave a comment