Home ದಾವಣಗೆರೆ ಜಮ್ಮು ಕಾಶ್ಮೀರದ ಬಡ್ಗಾಮ್‌ನಲ್ಲಿ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ: ಓರ್ವ ಉಗ್ರ ಹತ್ಯೆ, ಮತ್ತೊಬ್ಬ ಉಗ್ರನಿಗೆ ಬೆನ್ನಟ್ಟಿದ ಪಡೆಗಳು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಜಮ್ಮು ಕಾಶ್ಮೀರದ ಬಡ್ಗಾಮ್‌ನಲ್ಲಿ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ: ಓರ್ವ ಉಗ್ರ ಹತ್ಯೆ, ಮತ್ತೊಬ್ಬ ಉಗ್ರನಿಗೆ ಬೆನ್ನಟ್ಟಿದ ಪಡೆಗಳು!

Share
ಜಮ್ಮು ಕಾಶ್ಮೀರ
Share

ಶ್ರೀನಗರ: ಜಮ್ಮು ಕಾಶ್ಮೀರದ ಬಡ್ಗಾಮ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ (CRPF) ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಪುಲ್ವಾಮ ಜಿಲ್ಲೆಯ ಪಖರ್‌ಪೋರಾದಿಂದ ಬಡ್ಗಾಮ್‌ನ ಯೂಸ್‌ಮಾರ್ಗ್‌ ಕಡೆಗೆ ಶಂಕಿತ ಉಗ್ರರ ಗುಂಪೊಂದು ಚಲಿಸುತ್ತಿರುವ ಕುರಿತು ಲಭಿಸಿದ ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್, “ಬಡ್ಗಾಮ್‌ನ ಅಶ್‌ದರ್ ಗಲಿ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಶಂಕಿತ ಚಟುವಟಿಕೆ ಕಂಡುಬಂದಾಗ ಭದ್ರತಾ ಪಡೆಗಳು ಎಚ್ಚರಿಕೆ ನೀಡಿದವು. ಆದರೆ ಉಗ್ರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದಾಗ, ಸೈನಿಕರು ಪ್ರತಿಹಲ್ಲೆ ನಡೆಸಿದರು. ಈ ತೀವ್ರ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದು, ಆತನಿಂದ ಒಂದು ಎಕೆ ಸರಣಿಯ ರೈಫಲ್ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದೆ.

ಅಶ್‌ದರ್ ಗಲಿ ಅರಣ್ಯ ಭಾಗದಲ್ಲಿ ಇನ್ನೂ ಒಬ್ಬ ಉಗ್ರ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ. ಹತನಾದ ಉಗ್ರನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಕಣಿವೆ ಪ್ರದೇಶದಲ್ಲಿ ಕಳೆದ ಹಲವು ತಿಂಗಳ ಶಾಂತಿಯ ನಂತರ ಈ ಎನ್‌ಕೌಂಟರ್ ನಡೆದಿದೆ

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles