Home ಕ್ರೈಂ ನ್ಯೂಸ್ ರಾಜಸ್ಥಾನದಲ್ಲಿ 2 ನಗರಗಳಲ್ಲಿ 36 ವಿಲ್ಲಾಗಳ ಖರೀದಿ ವಿವಾದ: ಐಎಎಸ್-ಐಪಿಎಸ್ ದಂಪತಿ ಭ್ರಷ್ಟಾಚಾರದ ವಿರುದ್ಧ ಎಸಿಬಿ ತನಿಖೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಜಸ್ಥಾನದಲ್ಲಿ 2 ನಗರಗಳಲ್ಲಿ 36 ವಿಲ್ಲಾಗಳ ಖರೀದಿ ವಿವಾದ: ಐಎಎಸ್-ಐಪಿಎಸ್ ದಂಪತಿ ಭ್ರಷ್ಟಾಚಾರದ ವಿರುದ್ಧ ಎಸಿಬಿ ತನಿಖೆ!

Share
ರಾಜಸ್ಥಾನ
Share

ಜೈಪುರ: ರಾಜಸ್ಥಾನದಲ್ಲಿ ಹಿರಿಯ ಐಎಎಸ್ ಅಧಿಕಾರಿ ಶಿಖರ್ ಅಗರ್ವಾಲ್ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಖಾಸಗಿ ಹೋಟೆಲ್ ಕಂಪನಿಗೆ ಅನುಕೂಲ ಕಲ್ಪಿಸಿದ್ದಾರೆ ಹಾಗೂ ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ದರದಲ್ಲಿ ತಮ್ಮ ಮತ್ತು ಕುಟುಂಬದ ಹೆಸರಿನಲ್ಲಿ ಐಷಾರಾಮಿ ರೆಸಾರ್ಟ್ ವಿಲ್ಲಾಗಳನ್ನು ಖರೀದಿಸಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ಆದೇಶಿಸಿದೆ.

ಉದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಶಿಖರ್ ಅಗರ್ವಾಲ್ ಹಾಗೂ ‘ಅನಂತಾ’ ಬ್ರ್ಯಾಂಡ್ ಅಡಿಯಲ್ಲಿ ಹೋಟೆಲ್ ಮತ್ತು ರೆಸಾರ್ಟ್ ನಡೆಸುವ ‘ಗೋಯಲ್ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್’ ನಿರ್ದೇಶಕರ ನಡುವಿನ ನಂಟಿನ ಬಗ್ಗೆ ಎಸಿಬಿ ತನಿಖೆ ನಡೆಸಲಿದೆ. ಕಂಪನಿಗೆ ರಿಯಾಯಿತಿಗಳು, ರೆಸಾರ್ಟ್ ನಿರ್ಮಾಣದ ನಿಬಂಧನೆಗಳಲ್ಲಿ ಸಡಿಲಿಕೆ ಹಾಗೂ ಕಡ್ಡಾಯ ಪ್ರಮಾಣಪತ್ರಗಳ ಪರಿಶೀಲನೆ ಇಲ್ಲದೆ ಅನುಮೋದನೆ ನೀಡಿರುವ ಆರೋಪಗಳು ತನಿಖೆಯ ಪರಿಧಿಯಲ್ಲಿವೆ. ಎಸಿಬಿ ಮಹಾನಿರ್ದೇಶಕ ಗೋವಿಂದ್ ಗುಪ್ತಾ ಅವರು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17 ಎ ಅಡಿಯಲ್ಲಿ ತನಿಖೆಗೆ ಪೂರ್ವಾನುಮತಿ ಪಡೆದಿರುವುದಾಗಿ ತಿಳಿಸಿದ್ದಾರೆ.

ಉದಯಪುರದಲ್ಲಿ 20 ವಿಲ್ಲಾಗಳು: ಉದಯಪುರದ ಬುಜ್ಧಾದಲ್ಲಿ 2026ರ ಮಾರ್ಚ್‌ನಲ್ಲಿ 20 ರೆಸಾರ್ಟ್ ವಿಲ್ಲಾಗಳನ್ನು ಖರೀದಿಸಲಾಗಿದ್ದು, ಇದರಲ್ಲಿ 10 ವಿಲ್ಲಾಗಳು ಐಎಎಸ್ ಅಧಿಕಾರಿ ಶಿಖರ್ ಅಗರ್ವಾಲ್ ಹಾಗೂ ಮತ್ತಿತರ 10 ವಿಲ್ಲಾಗಳು ಅವರ ಪತ್ನಿ, ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥೂರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಪ್ರತಿ ವಿಲ್ಲಾ ಬೆಲೆ ಸತ್ಯ ಸುಮಾರು 15 ಲಕ್ಷ ರೂ.ಗಳೆದು ತೋರಿಸಲಾಗಿದೆ.

ಅಲ್ವಾರ್‌ನ ಅಜಬ್‌ಗಢದಲ್ಲಿ 16 ವಿಲ್ಲಾಗಳು: ಅಲ್ವಾರ್‌ನ ಅನಂತಾ ರೆಸಾರ್ಟ್‌ನಲ್ಲಿ ಒಟ್ಟು 16 ವಿಲ್ಲಾಗಳನ್ನು ಖರೀದಿಸಲಾಗಿದೆ. ದಂಪತಿ ಹೆಸರಿನಲ್ಲಿ ತಲಾ 4, ಇಬ್ಬರು ಪುತ್ರರ ಹೆಸರಿನಲ್ಲಿ 4 ಹಾಗೂ ಮಾವನವರ ಹೆಸರಿನಲ್ಲಿ 4 ವಿಲ್ಲಾಗಳನ್ನು ಖರೀದಿಸಲಾಗಿದೆ. ಇವುಗಳ ಬೆಲೆ ಪ್ರತಿ ವಿಲ್ಲಾಗೆ 15 ಲಕ್ಷದಿಂದ 16.5 ಲಕ್ಷ ರೂ.ಗಳವರೆಗೆ ಇದೆ ಎಂದು ವರದಿಯಾಗಿದೆ.

ಒಟ್ಟು 36 ವಿಲ್ಲಾಗಳು, ಅಂದಾಜು 5.52 ಕೋಟಿ ರೂ. ಮೌಲ್ಯ: ಒಟ್ಟು ಎರಡು ನಗರಗಳಲ್ಲಿ 36 ವಿಲ್ಲಾಗಳನ್ನು ಖರೀದಿಸಲಾಗಿದ್ದು, ಇವುಗಳ ಒಟ್ಟು ಮೌಲ್ಯ ಅಂದಾಜು 5.52 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ಸಹಾಯಕರೊಂದಿಗೆ ಒಳಸಂಚು: ಹಣಕಾಸು ಇಲಾಖೆಯು 2026ರ ಮಾರ್ಚ್ 27 ರಂದು ಗೋಯಲ್ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ವಿಶೇಷ ರಿಯಾಯಿತಿ ಪ್ಯಾಕೇಜ್ ಘೋಷಿಸಿತ್ತು. ಅದೇ ದಿನ ಅಗರ್ವಾಲ್ ಮತ್ತು ಅವರ ಕುಟುಂಬದ ಹೆಸರಿನಲ್ಲಿ 20 ವಿಲ್ಲಾಗಳು ನೋಂದಣಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಉದಯಪುರ ಜಿಲ್ಲಾಧಿಕಾರಿ, ರಾಜಸ್ಥಾನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಉದ್ಯಮ ಇಲಾಖೆಯ ಎಸಿಎಸ್ ಆಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಕಂಪನಿಗೆ ನೆರವಾಗಿವೆಯೇ ಎಂಬ ಬಗ್ಗೆ ಎಸಿಬಿ ತನಿಖೆ ಮುಂದುವರಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles