Home ಕ್ರೈಂ ನ್ಯೂಸ್ ಒಳ ಉಡುಪಿನಲ್ಲಿ ಆಕ್ಷನ್ ಸೀನ್ ಮಾಡಿದರೆ ಹೇಗೆ? ನಗ್ನ ಹಾಗೂ ಬೋಲ್ಡ್ ದೃಶ್ಯಗಳ ಅನಗತ್ಯ ಬೇಡಿಕೆ ಬಗ್ಗೆ ನಟಿ ರಾಧಿಕಾ ಆಪ್ಟೆ ಸ್ಫೋಟಕ ಹೇಳಿಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಒಳ ಉಡುಪಿನಲ್ಲಿ ಆಕ್ಷನ್ ಸೀನ್ ಮಾಡಿದರೆ ಹೇಗೆ? ನಗ್ನ ಹಾಗೂ ಬೋಲ್ಡ್ ದೃಶ್ಯಗಳ ಅನಗತ್ಯ ಬೇಡಿಕೆ ಬಗ್ಗೆ ನಟಿ ರಾಧಿಕಾ ಆಪ್ಟೆ ಸ್ಫೋಟಕ ಹೇಳಿಕೆ!

Share
ರಾಧಿಕಾ ಆಪ್ಟೆ
Share

ಮುಂಬೈ: ಬಾಲಿವುಡ್‌ನ ಪ್ರತಿಭಾವಂತ ನಟಿ ರಾಧಿಕಾ ಆಪ್ಟೆ, ಚಿತ್ರರಂಗದಲ್ಲಿ ನಟಿಯರ ಗಡಿ ಮತ್ತು ಆಯ್ಕೆಗಳನ್ನು ನಿರ್ದೇಶಕರು ಹಾಗೂ ನಿರ್ಮಾಪಕರು ಗೌರವಿಸಬೇಕು ಎಂದು ಗಂಭೀರವಾಗಿ ಪ್ರತಿಪಾದಿಸಿದ್ದಾರೆ.

ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ತಾವು ಮಾಡಿದ ಕೆಲವು ಧೈರ್ಯದ (Bold) ಪಾತ್ರಗಳನ್ನು ನೋಡಿ, ನಿರ್ದೇಶಕರು ಕಥೆಗೆ ಅಗತ್ಯವಿಲ್ಲದಿದ್ದರೂ ಬೋಲ್ಡ್ ಹಾಗೂ ಇಂಟಿಮೇಟ್ ದೃಶ್ಯಗಳನ್ನು ಮಾಡಲು ತಮ್ಮನ್ನು ಸುಲಭವಾಗಿ ಒಪ್ಪಿಸಬಹುದು ಎಂಬ ತಪ್ಪು ಕಲ್ಪನೆಗೆ ಬಂದಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ.

ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಾಧಿಕಾ ಆಪ್ಟೆ, “ನನ್ನ ವೃತ್ತಿಜೀವನದ ಆರಂಭದಲ್ಲಿ 4-5 ಸಿನಿಮಾಗಳಲ್ಲಿ ನಗ್ನವಾಗಿ ನಟಿಸಿದ್ದೆ. ಹೀಗಾಗಿ ಚಿತ್ರರಂಗದಲ್ಲಿದ್ದ ಕೆಲವರು ‘ಈಕೆಯಂತೂ ಈ ದೃಶ್ಯಗಳನ್ನು ಸುಲಭವಾಗಿ ಮಾಡುತ್ತಾಳೆ’ ಎಂದು ಭಾವಿಸಿದ್ದರು. ಆದರೆ ನಾನು ಅವರಿಗೆ ಸ್ಪಷ್ಟವಾಗಿ ಹೇಳಬೇಕಾಯಿತು— ‘ನಾನು ಈಗಾಗಲೇ ಅಂತಹ ದೃಶ್ಯಗಳಲ್ಲಿ ನಟಿಸಿದ್ದೇನೆ, ಈಗ ನನಗೆ ಅದರ ಅರಿವಿದೆ, ಆದ್ದರಿಂದ ಕಥೆಗೆ ಅಗತ್ಯವಿಲ್ಲದಿದ್ದರೆ ನಾನು ಖಂಡಿತ ಮಾಡುವುದಿಲ್ಲ’. ಯಾವುದೇ ಕಾರಣವಿಲ್ಲದೆ ಸಹನಟನಿಗೆ ಕಿಸ್ ಮಾಡಲು ಹೇಳಿದಾಗ ‘ಏಕೆ ಈ ದೃಶ್ಯ ಬೇಕು?’ ಎಂದು ಕೇಳಿದರೆ, ‘ಸ್ವಲ್ಪ ಕಿಸ್ಸಿಂಗ್, 15 ಸೆಕೆಂಡ್ ಇಂಪ್ರೊವೈಸೇಶನ್ ಮಾಡಿ’ ಎಂದು ಉಡಾಫೆಯ ಉತ್ತರ ನೀಡುತ್ತಿದ್ದರು” ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಶೂಟಿಂಗ್ ಸೆಟ್‌ವೊಂದರಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯನ್ನು ನೆನಪಿಸಿಕೊಂಡ ನಟಿ, “ಒಂದು ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ, ‘ಶರ್ಟ್ ಬಟನ್ ಹಾಕಿಕೊಳ್ಳದೇ ಆಕ್ಷನ್ ಸೀನ್ ಮಾಡುತ್ತೀರಾ?’ ಎಂದು ಕೇಳಿದರು. ಆಕ್ಷನ್ ಮಾಡುವಾಗ ಶರ್ಟ್ ಸರಿದಾಡುತ್ತದೆ, ಅದು ಸಾಧಾರಣ ಫಿಸಿಕ್ಸ್ ಎಂದು ನಾನು ಹೇಳಿದೆ. ಅದಕ್ಕೆ ಅವರು, ‘ಬ್ರಾ ಮತ್ತು ಒಳ ಉಡುಪಿನಲ್ಲಿ (Bra and Underwear) ಆಕ್ಷನ್ ಸೀನ್ ಮಾಡಿದರೆ ಹೇಗೆ?’ ಎಂದು ಕೇಳಿದರು. ಆ ಮಾತನ್ನು ಕೇಳಿ ನನಗೆ ಆಶ್ಚರ್ಯವಾಯಿತು— ‘ನಾವು ಈ ದೃಶ್ಯದಿಂದ ಏನು ಸಾಧಿಸಲು ಹೊರಟಿದ್ದೇವೆ?’ ಎಂದು ನಾನು ನೇರವಾಗಿಯೇ ಪ್ರಶ್ನಿಸಿದೆ. ಆ ಪ್ರಾಜೆಕ್ಟ್ ಯಾವುದೆಂದು ಹೆಸರು ಹೇಳಿದರೆ ನಿಮಗೂ ಆಘಾತವಾಗುತ್ತದೆ, ಏಕೆಂದರೆ ಅಷ್ಟು ದೊಡ್ಡ ಬ್ಯಾನರ್‌ನಿಂದ ಇಂತಹ ಬೇಡಿಕೆಯನ್ನು ಯಾರೂ ನಿರೀಕ್ಷಿಸಿರುವುದಿಲ್ಲ” ಎಂದಿದ್ದಾರೆ.

ಸಿನಿಮಾವನ್ನು ಹಿಟ್ ಮಾಡುವ ಏಕೈಕ ಕಾರಣಕ್ಕೆ ನಟ-ನಟಿಯರ ಮೇಲೆ ಅನಗತ್ಯವಾಗಿ ಗ್ಲಾಮರ್ ಅಥವಾ ಬೋಲ್ಡ್ ದೃಶ್ಯಗಳಲ್ಲಿ ನಟಿಸುವಂತೆ ಒತ್ತಡ ಹೇರಬಾರದು. ಪ್ರತಿಯೊಬ್ಬ ನಟನ ವ್ಯಕ್ತಿಗತ ಗಡಿಗಳನ್ನು ನಿರ್ದೇಶಕರು ಗೌರವಿಸಬೇಕು ಎಂದು ರಾಧಿಕಾ ಆಪ್ಟೆ ಅಭಿಪ್ರಾಯಪಟ್ಟಿದ್ದಾರೆ. ನಟಿ ಪ್ರಸ್ತುತ ನೆಟ್‌ಫ್ಲಿಕ್ಸ್‌ನ ‘ಲಸ್ಟ್ ಸ್ಟೋರೀಸ್ 3’  ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles