ಪುಣೆ: ಮಹಾರಾಷ್ಟ್ರದ ಪುಣೆಯ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬೀಳುತ್ತಿವೆ. ಜೂನ್ 18 ರಂದು ಲೋಹಗಢ್ ಕೋಟೆಯ ಕಂದಕಕ್ಕೆ ತಳ್ಳಿ ಕೇತನ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಹತ್ಯೆಗೂ ಮುನ್ನವೇ ಅನುಮಾನಗೊಂಡಿದ್ದ ಕೇತನ್:
ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಕೇತನ್ ತಂದೆ ವಿಶಾಲ್ ಅಗರ್ವಾಲ್ ಮಹತ್ವದ ಮಾಹಿತಿ ನೀಡಿದ್ದಾರೆ. ಮುಂಬರುವ ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಸಿಯಾ ಗೋಯಲ್ ನಡವಳಿಕೆಯ ಬಗ್ಗೆ ಕೇತನ್ ತೀವ್ರ ಅನುಮಾನ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಜೂನ್ 6 ರಂದು ನಿಗದಿಯಾಗಿದ್ದ ಪ್ರೀ-ವೆಡ್ಡಿಂಗ್ ಬಾಲಿ ಪ್ರವಾಸ ರದ್ದಾದಾಗಿನಿಂದ ಸಿಯಾ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡಲು ಆರಂಭಿಸಿದ್ದಳು. ಅಲ್ಲದೆ ಆಕೆಗೆ ಫೋನ್ ಮಾಡಿದಾಗಲೆಲ್ಲಾ ಸದಾ ಬಿಜಿಯಾಗಿರುತ್ತಿತ್ತು ಮತ್ತು ಮಾತಿನ ಮಧ್ಯೆ ಪದೇ ಪದೇ ಚೇತನ್ ಹೆಸರನ್ನು ಪ್ರಸ್ತಾಪಿಸುತ್ತಿದ್ದಳು ಎಂದು ಕೇತನ್ ತನ್ನ ತಂದೆಯ ಬಳಿ ಆತಂಕ ತೋಡಿಕೊಂಡಿದ್ದನು.
ಬ್ಯಾಕ್‌ಗ್ರೌಂಡ್ ಚೆಕ್ ಮಾಡಲು ಕೇಳಿದ್ದ ಮಗ:
ಜೂನ್ 14 ರಂದು ಲೋಹಗಢ್ ಕೋಟೆಗೆ ಭೇಟಿ ನೀಡಿ ಮರಳಿದ ನಂತರವೂ ಕೇತನ್ ತನ್ನ ತಂದೆಯ ಬಳಿ, “ನಾವು ಮದುವೆ ನಿಶ್ಚಯಿಸುವ ಮುನ್ನ ಆಕೆಯ ಹಿನ್ನೆಲೆಯನ್ನು ಸರಿಯಾಗಿ ತನಿಖೆ ಮಾಡಿದ್ದೇವಾ?” ಎಂದು ಮರುಪ್ರಶ್ನಿಸಿದ್ದನು. ಆದರೆ, ಸಿಯಾ ಕುಟುಂಬದವರು ಪರಿಚಯಸ್ಥರ ಮೂಲಕವೇ ಬಂದಿದ್ದರಿಂದ ಯಾವುದೇ ತೊಂದರೆ ಇಲ್ಲ ಎಂದು ತಂದೆ ವಿಶಾಲ್ ಮಗನಿಗೆ ಸಮಾಧಾನ ಹೇಳಿದ್ದರು. ಆದರೆ ಇದಾದ ಕೇವಲ ನಾಲ್ಕೇ ದಿನಗಳಲ್ಲಿ (ಜೂನ್ 18) ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ್‌ನನ್ನು ಕೋಟೆಯ ಮೇಲಿಂದ ತಳ್ಳಿ ಭೀಕರವಾಗಿ ಕೊಂದಿದ್ದಾರೆ. ಆರೋಪಿಗಳನ್ನು ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
- Chetan Chaudhary
- cliff murder case Maharashtra
- Fiancee kills fiance
- Ketan Agarwal case
- lohagad fort murder
- pre-wedding murder investigation
- Pune crime updates
- Pune realtor murder
- Siya Goyal
- ಕೇತನ್ ಅಗರ್ವಾಲ್ ಕೊಲೆ
- ಚೇತನ್ ಚೌಧರಿ
- ನಿಶ್ಚಿತಾರ್ಥದ ನಂತರ ಕೊಲೆ
- ಪುಣೆ ಉದ್ಯಮಿ ಕೊಲೆ
- ಪುಣೆ ರಿಯಲ್ ಎಸ್ಟೇಟ್ ಉದ್ಯಮಿ
- ಪ್ರೇಮ ವ್ಯವಹಾರ ಕೊಲೆ
- ಮಹಾರಾಷ್ಟ್ರ ಕ್ರೈಂ ನ್ಯೂಸ್.
- ಲೋಹಗಢ್ ಕೋಟೆ ಹತ್ಯೆ ಪ್ರಕರಣ
- ಸಿಯಾ ಗೋಯಲ್





Leave a comment