ಬೆಂಗಳೂರು: ಆರ್ಎಸ್ಎಸ್ ಹಣಕಾಸು ಲೆಕ್ಕಪತ್ರ ಎಲ್ಲಿದೆ? ನೋಂದಣಿ ಶುಲ್ಕ ನಾನೇ ಕೊಡ್ತೀನಿ. ಬೇಗನೇ ನೋಂದಣಿ ಮಾಡಿಸಿಕೊಳ್ಳಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಮತ್ತೆ ಆರ್ ಎಸ್ ಎಸ್ ಗೆ ಕುಟುಕಿದ್ದಾರೆ.
ಚುನಾವಣಾ ಆಯೋಗ ನೀಡುತ್ತಿರುವ ‘ಇವಿಎಂ ಸವಾಲು’ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಸನಬದ್ಧ ನೋಂದಣಿ ಮತ್ತು ಆರ್ಥಿಕ ಪಾರದರ್ಶಕತೆಗೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರ ಹಾಗೂ ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇವಿಎಂ ಭದ್ರತೆ ಮತ್ತು ತಾಂತ್ರಿಕ ಆಡಿಟ್ಗೆ ಆಗ್ರಹ
ರಾಜಕೀಯ ಪಕ್ಷಗಳಿಗೆ ಇವಿಎಂ ಹ್ಯಾಕ್ ಮಾಡಲು ಸವಾಲು ನೀಡುವ ಚುನಾವಣಾ ಆಯೋಗದ ಧೋರಣೆಯನ್ನು ಪ್ರಿಯಾಂಕ್ ಖರ್ಗೆ ತೀವ್ರವಾಗಿ ಪ್ರಶ್ನಿಸಿದ್ದಾರೆ.
ತಾಂತ್ರಿಕ ಆಡಿಟ್ಗೆ ಸವಾಲು: ರಾಜಕೀಯ ಪಕ್ಷಗಳ ಬದಲು ಸ್ವತಂತ್ರ ಸೈಬರ್ ಭದ್ರತಾ ತಜ್ಞರು, ಸಾಫ್ಟ್ವೇರ್ ಎಂಜಿನಿಯರ್ಗಳು ಮತ್ತು ಸಂಶೋಧಕರನ್ನು ಒಳಗೊಂಡ ನ್ಯಾಯಾಲಯದ ಮೇಲ್ವಿಚಾರಣೆಯ ತಾಂತ್ರಿಕ ಆಡಿಟ್ ಹಾಗೂ ಎಥಿಕಲ್ ಹ್ಯಾಕಥಾನ್ ನಡೆಸಬೇಕು ಎಂದು ಅವರು ಕೇಂದ್ರ ಚುನಾವಣಾ ಆಯುಕ್ತರಿಗೆ (CEC) ಪತ್ರ ಬರೆದಿದ್ದಾರೆ.
ಕರ್ನಾಟಕ ಸರ್ಕಾರದ ಕೊಡುಗೆ: ಇವಿಎಂ ಯಂತ್ರಗಳ ಆರ್ಕಿಟೆಕ್ಚರ್, ಕೋಡಿಂಗ್, ಆಕ್ಸೆಸ್ ಕಂಟ್ರೋಲ್ ಹಾಗೂ ಸೈಬರ್ ಭದ್ರತೆಯನ್ನು ಪರೀಕ್ಷಿಸಲು ಬೆಂಗಳೂರಿನ ತಂತ್ರಜ್ಞಾನ ಪರಿಸರ ವ್ಯವಸ್ಥೆ (Tech Ecosystem) ಸಂಪೂರ್ಣವಾಗಿ ಸಜ್ಜಾಗಿದೆ. ಈ ಸ್ವತಂತ್ರ ತಾಂತ್ರಿಕ ಆಡಿಟ್ಗೆ ತಗಲುವ ಸಂಪೂರ್ಣ ವೆಚ್ಚವನ್ನು ವಹಿಸಲು ಕರ್ನಾಟಕ ಸರ್ಕಾರ ಸಿದ್ಧವಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಆರ್ಎಸ್ಎಸ್ ನೋಂದಣಿ ಮತ್ತು ಆರ್ಥಿಕ ಪಾರದರ್ಶಕತೆ ವಿವಾದ
ಆರ್ಎಸ್ಎಸ್ ಸಂಸ್ಥೆಯ ಶಾಸನಬದ್ಧ ಕಾನೂನಾತ್ಮಕ ಸ್ಥಿತಿಗತಿ ( ಹಾಗೂ ಅದರ ಹಣಕಾಸಿನ ಮೂಲಗಳ ಬಗ್ಗೆ ಖರ್ಗೆ ಸುದೀರ್ಘ ಪ್ರಶ್ನೆಗಳನ್ನು ಎತ್ತಿದ್ದಾರೆ.
ನೋಂದಣಿ ಇಲ್ಲದ ಸಂಸ್ಥೆ: ವಿಶ್ವದ ಅತಿದೊಡ್ಡ ಸಂಘಟನೆಗಳಲ್ಲಿ ಒಂದಾಗಿರುವ ಆರ್ಎಸ್ಎಸ್, ಯಾವುದೇ ಸೊಸೈಟಿ, ಟ್ರಸ್ಟ್ ಅಥವಾ ಸರ್ಕಾರಿ ಶಾಸನಬದ್ಧ ಕಾಯ್ದೆಯಡಿ ನೋಂದಣಿಯಾಗಿಲ್ಲ.
ಆದಾಯ ಮತ್ತು ತೆರಿಗೆ ಲೆಕ್ಕಪತ್ರ: ಸಾರ್ವಜನಿಕ ಹಾಗೂ ಖಾಸಗಿ ಮೂಲಗಳಿಂದ ಮತ್ತು ‘ಗುರುದಕ್ಷಿಣೆ’ ಹೆಸರಿನಲ್ಲಿ ಪಡೆಯುವ ಕೋಟ್ಯಂತರ ರೂಪಾಯಿ ದೇಣಿಗೆಗಳಿಗೆ ಸೂಕ್ತ ಹಣಕಾಸು ಲೆಕ್ಕಪತ್ರ ಸಲ್ಲಿಕೆಯಾಗುತ್ತಿಲ್ಲ.
ನೋಂದಣಿ ಶುಲ್ಕದ ಆಫರ್: ಆರ್ಎಸ್ಎಸ್ ಸಂಸ್ಥೆಯನ್ನು ಅಧಿಕೃತವಾಗಿ ಕಾಯ್ದೆಯಡಿ ನೋಂದಾಯಿಸಲು ಬೇಕಾಗುವ ಶುಲ್ಕವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೀಡಲು ಸಿದ್ಧವಿರುವುದಾಗಿ ಹೇಳಿ, ಸಚಿವ ಖರ್ಗೆ ಅವರು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಸವಾಲು ಎಸೆದಿದ್ದಾರೆ.
- Bengaluru Tech Experts
- ECI Technical Audit
- Election Commission of India
- Ethical Hackathon
- EVM Challenge
- Karnataka IT Minister
- Keshav Kunj
- Priyank Kharge
- RSS Funding Transparency
- RSS registration
- ಆರ್ಎಸ್ಎಸ್ ನೋಂದಣಿ ವಿವಾದ
- ಇವಿಎಂ ಹ್ಯಾಕಥಾನ್
- ಕರ್ನಾಟಕ ರಾಜಕೀಯ
- ಕೇಶವ ಕುಂಜ
- ಚುನಾವಣಾ ಆಯೋಗ
- ತಾಂತ್ರಿಕ ಆಡಿಟ್
- ಪ್ರಿಯಾಂಕ್ ಖರ್ಗೆ
- ಮೋಹನ್ ಭಾಗವತ್
- ಸೈಬರ್ ಭದ್ರತಾ ಪರಿಶೋಧನೆ





Leave a comment