Home ಕ್ರೈಂ ನ್ಯೂಸ್ ಚಲಿಸುವ ರೈಲು ಹತ್ತಲು ಹೋಗಿ ಜಾರಿದ ಪ್ರಯಾಣಿಕ: ಕಾಲರ್ ಹಿಡಿದು ಪ್ರಾಣ ಉಳಿಸಿದ ಟ್ರಾಫಿಕ್ ಕಾನ್ಸ್‌ಟೇಬಲ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಚಲಿಸುವ ರೈಲು ಹತ್ತಲು ಹೋಗಿ ಜಾರಿದ ಪ್ರಯಾಣಿಕ: ಕಾಲರ್ ಹಿಡಿದು ಪ್ರಾಣ ಉಳಿಸಿದ ಟ್ರಾಫಿಕ್ ಕಾನ್ಸ್‌ಟೇಬಲ್!

Share
ರೈಲು
Share

ಆಂಧ್ರಪ್ರದೇಶ (ಅನಂತಪುರ): ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿ ಜಾರಿ ಬಿದ್ದ ಪ್ರಯಾಣಿಕನೊಬ್ಬನನ್ನು ಟ್ರಾಫಿಕ್ ಕಾನ್ಸ್‌ಟೇಬಲ್‌ ಒಬ್ಬರು ತಮ್ಮ ಚತುರತೆ ಮತ್ತು ಕ್ಷಿಪ್ರ ಕಾರ್ಯಚರಣೆಯಿಂದ ಸಾವಿನ ದವಡೆಯಿಂದ ರಕ್ಷಿಸಿದ ಘಟನೆ ಆಂಧ್ರಪ್ರದೇಶದ ಅನಂತಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ಇಡೀ ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯ ವಿವರ:

ಅನಂತಪುರದ ಭೈರವ್ ನಗರದ ನಿವಾಸಿ ರವಿ ಕುಮಾರ್ (49) ಎಂಬವರು ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಏರಲು ಯತ್ನಿಸಿದ್ದಾರೆ. ಈ ವೇಳೆ ಕಾಲಿನ ಹಿಡಿತ ತಪ್ಪಿ ಅವರು ರೈಲಿನ ಬಾಗಿಲಿಗೆ ಜೋಡಾಡುತ್ತಾ ಎಳೆಯಲ್ಪಟ್ಟಿದ್ದಾರೆ.

ಅದೇ ಸಮಯದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಕಾನ್ಸ್‌ಟೇಬಲ್ ಸಿ. ಸುರೇಂದ್ರ ಅವರು ಇದನ್ನು ತಕ್ಷಣವೇ ಗಮನಿಸಿದ್ದಾರೆ. ಸಮಯ ಪ್ರಜ್ಞೆ ಮೆರೆದ ಸುರೇಂದ್ರ, ತಕ್ಷಣ ಓಡಿ ಬಂದು ರವಿ ಕುಮಾರ್ ಅವರ ಶರ್ಟ್ ಕಾಲರ್ ಹಿಡಿದು ಬಲವಾಗಿ ಪ್ಲಾಟ್‌ಫಾರ್ಮ್‌ನತ್ತ ಎಳೆದಿದ್ದಾರೆ. ಕಾನ್ಸ್‌ಟೇಬಲ್ ಅವರ ಈ ಸಮಯೋಚಿತ ನಿರ್ಧಾರದಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಸಣ್ಣಪುಟ್ಟ ಗಾಯಗಳೊಂದಿಗೆ ಪಾರು:

ಘಟನೆಯಲ್ಲಿ ರವಿ ಕುಮಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೇತರಿಸಿಕೊಂಡ ನಂತರ ರವಿ ಕುಮಾರ್ ಕಾನ್ಸ್‌ಟೇಬಲ್ ಸುರೇಂದ್ರ ಅವರಿಗೆ ಧನ್ಯವಾದ ಅರ್ಪಿಸಿದರು. ಪೊಲೀಸ್ ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles