Home ಕ್ರೈಂ ನ್ಯೂಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾಡುತ್ತಿದೆ “ಆ ಸೋಂಕಿನ” ಭಯ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾಡುತ್ತಿದೆ “ಆ ಸೋಂಕಿನ” ಭಯ!

Share
ಪ್ರಜ್ವಲ್ ರೇವಣ್ಣ
Share

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಆ ಸೋಂಕಿನ ಭಯ ಕಾಡುತ್ತಿದೆಯಂತೆ!

ಹೌದು. ಜೈಲು ಅಧಿಕಾರಿಗಳ ಬಳಿ ಗೋಳಾಡಿರುವ ಪ್ರಜ್ವಲ್ ರೇವಣ್ಣ ನನಗೆ ಕಜ್ಜಿ, ತುರಿಕೆ, ಕೆಮ್ಮು ಸೇರಿದಂತೆ ಇತರೆ ಸೋಂಕಿನ ಭಯ ಕಾಡುತ್ತಿದೆ. 25ಕ್ಕೂ ಹೆಚ್ಚು ಸಹ ಖೈದಿಗಳಿದ್ದು ಅವರಿಗೆ ಕಜ್ಜಿ ಮತ್ತು ಕೆಮ್ಮು ಇದೆ. ಈ ಸೋಂಕು ನನಗೂ ತಗುಲುವ ಭೀತಿ ಇದ್ದು, ಬೇರೆ ವಾರ್ಡ್ ಗೆ ಶಿಫ್ಟ್ ಮಾಡುವಂತೆ ಗೋಳಾಡಿದ್ದು ಈಗ ಬಯಲಾಗಿದೆ.

ಪ್ರಮುಖ ಅಂಶಗಳು:

ಶೌಚಾಲಯದ ಸಮಸ್ಯೆ: ವಾರ್ಡ್ ಒಂದರಲ್ಲಿ 25ಕ್ಕೂ ಹೆಚ್ಚು ಖೈದಿಗಳಿಗೆ ಒಂದೇ ಶೌಚಾಲಯ (Toilet) ಇರುವುದರಿಂದ ನೈರ್ಮಲ್ಯದ ಕೊರತೆ ಉಂಟಾಗಿದೆ.

ಸ್ಥಳಾಂತರಕ್ಕೆ ಮನವಿ: ನೈರ್ಮಲ್ಯ ಮತ್ತು ಪ್ರತ್ಯೇಕ ಸೌಲಭ್ಯವಿರುವ ಸ್ವಚ್ಛ ವಾರ್ಡ್‌ಗೆ ತಮ್ಮನ್ನು ಶಿಫ್ಟ್ ಮಾಡುವಂತೆ ಜೈಲು ಸಿಬ್ಬಂದಿಗೆ ಮನವಿ ಮಾಡಿದ್ದಾರೆ.

ಅಧಿಕಾರಿಗಳ ಉತ್ತರ: “ಖೈದಿಗಳ ಮನವಿಗೆ ತಕ್ಷಣವೇ ಸ್ಪಂದಿಸಲು ಸಾಧ್ಯವಿಲ್ಲ. ನ್ಯಾಯಾಲಯ ಅಥವಾ ನ್ಯಾಯಾಧೀಶರ ಅನುಮತಿ ಪಡೆದ ನಂತರವಷ್ಟೇ ಈ ಬಗ್ಗೆ ಪರಿಶೀಲಿಸಲಾಗುವುದು” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಲ್ಲಿ 25 ಜನರಿಗೆ ಒಂದೇ ಶೌಚಾಲಯ ಇದೆ. ಇದರಿಂದಾಗಿ ಕಾಯಿಲೆಯ ಸೋಂಕು ತಗುಲುವ ಆತಂಕ ಇದೆ. ಹಾಗಾಗಿ, ಸ್ವಚ್ಛವಾಗಿರುವ ಶೌಚಾಲಯ ಮತ್ತು ಇತರೆ ವ್ಯವಸ್ಥೆಗಳನ್ನು ನೀಡುವಂತೆ ಪರಿಪರಿಯಾಗಿ
ಮನವಿ ಮಾಡಿದ್ದು, ಜೈಲು ಅಧಿಕಾರಿಗಳು ಪ್ರಜ್ವಲ್ ರೇವಣ್ಣಗೆ ಶಾಕ್ ಕೊಟ್ಟಿದ್ದಾರೆ.

ನೀವು ಹೇಳಿದಾಕ್ಷಣ ನಾವು ವ್ಯವಸ್ಥೆ ಮಾಡಲು ಆಗುವುದಿಲ್ಲ. ನ್ಯಾಯಾಧೀಶರ ಅನುಮತಿ ಪಡೆದು ವ್ಯವಸ್ಥೆ ನೀಡುವ ಕುರಿತಂತೆ ಪರಮಾರ್ಶೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Share

Leave a comment

Leave a Reply

Your email address will not be published. Required fields are marked *