SUDDIKSHANA KANNADA NEWS/ DAVANAGERE/ DATE:24-07-2024
ದಾವಣಗೆರೆ: ನಗರದ ವಿವಿಧ ಕಡೆ ಇರುವ ಬೆಸ್ಕಾಂ ಯುಜಿ ಕೇಬಲ್ ಬಾಕ್ಸ್ ಗಳ ಬಳಿ ಕೆಲವು ಸಾರ್ವಜನಿಕರು ಹಾಗೂ ಕೆಲವು ಅಂಗಡಿಯವರು ಕಸ ಹಾಕುತಿದ್ದದ್ದು ಸ್ಥಳೀಯ ವಾಸಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಕ್ಕ ಪಕ್ಕದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಮತ್ತೆ ಕೆಲವರು ಕಸ ಎಸೆದು ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ನೇತೃತ್ವದಲ್ಲಿ ಬಾಕ್ಸ್ ಗಳಿಗೆ ಪೋಸ್ಟರ್ ಅಂಟಿಸಿ ಜಾಗೃತಿ ಮೂಡಿಸಲಾಯಿತು.
ಸಾರ್ವಜನಿಕರು ಇಲ್ಲಿ ಹಾಗೂ ಸುತ್ತಮುತ್ತ ಕಸ ಹಾಕುವುದರಿಂದ ಕಸ ವಿಲೇವಾರಿ ಮಾಡಲು ಪೌರ ಕಾರ್ಮಿಕರಿಗೆ ಹಾಗೂ ವಿದ್ಯುತ್ ತುರ್ತು ದುರಸ್ಥಿ ಮಾಡುವಾಗ ಈ ಬಾಕ್ಸ್ ಗಳಲ್ಲಿ ದುರ್ನಾತ ಬರುತ್ತಿದೆ. ಆರೋಗ್ಯದ ತೊಂದರೆ ಬರಬಹುದು.
ಸೊಳ್ಳೆ ,ಹಾಗೂ ನಾಯಿಗಳ ಹಾವಳಿಯೂ ಹೆಚ್ಚಾಗುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಎದುರಾಗಿದೆ.
ಅಲ್ಲದೇ ಕೆಲವರು ಮಹಾನಗರ ಪಾಲಿಕೆಯ ವತಿಯಿಂದ ಬರುವ ವಾಹನಗಳಿಗೆ ಕಸ ಕೊಡದೆ ರಾತ್ರಿ ಹೊತ್ತು ವಾಕಿಂಗ್ ನೆಪದಲ್ಲಿ ಬಂದು ಕಸ ಹಾಕುತ್ತಿದ್ದಾರೆ, ಜನರು ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಬೆಸ್ಕಾಂನ ಪವನ್ ಅವರು ಮನವಿ ಮಾಡಿದರು,
ಪಾಲಿಕೆ ಆರೋಗ್ಯ ನಿರೀಕ್ಷಕ ಮದನ್ ಕುಮಾರ್, ಎಂ. ಜಿ. ಶ್ರೀಕಾಂತ್, ,ಶೋಭಿತ್ ಕಂಪ್ಯೂಟರ್ ನ ಮಾಲೀಕ ಸಂತೋಷ್, ಎಂ. ಆರ್. ಕಿರಣಕುಮಾರ್, ಪಾಲಿಕೆ ಸಿಬ್ಬಂದಿ ತ್ರಿಮೂರ್ತಿ ಅವರು ಜಾಗೃತಿ ಮೂಡಿಸುವ ವೇಳೆ ಹಾಜರಿದ್ದರು.