Home ದಾವಣಗೆರೆ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ಯಾಕೆ ಸಿಎಂ ಸಿದ್ದರಾಮಯ್ಯ? ಫಲಿತಾಂಶಕ್ಕೂ ಮುನ್ನವೇ ‘ಮಾಸ್ಟರ್ ಪ್ಲಾನ್’, ರಾಜ್ಯ ರಾಜಕೀಯದಲ್ಲಿ ಸಂಚಲನ!
ದಾವಣಗೆರೆಬೆಂಗಳೂರು

ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ಯಾಕೆ ಸಿಎಂ ಸಿದ್ದರಾಮಯ್ಯ? ಫಲಿತಾಂಶಕ್ಕೂ ಮುನ್ನವೇ ‘ಮಾಸ್ಟರ್ ಪ್ಲಾನ್’, ರಾಜ್ಯ ರಾಜಕೀಯದಲ್ಲಿ ಸಂಚಲನ!

Share
ಸಿದ್ದರಾಮಯ್ಯ
Share

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ‘ಗೌಪ್ಯ ಸಭೆ’ಯದ್ದೇ ಸದ್ದು! ಮೇ 4ರಂದು ಐದು ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿರುವ ಒಂದು ಹೈವೋಲ್ಟೇಜ್ ಸಭೆ ಈಗ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸಭೆಯ ಹಿನ್ನೆಲೆ:

ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಸಚಿವ ಬೈರತಿ ಸುರೇಶ್ ಅವರ ಖಾಸಗಿ ಕಟ್ಟಡದಲ್ಲಿ ಈ ಮಹತ್ವದ ಚರ್ಚೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅತ್ಯಂತ ಆಪ್ತ ಸಚಿವರ ದಂಡಿನೊಂದಿಗೆ ಮುಂದಿನ ರಾಜಕೀಯ ನಡೆಗಳ ಬಗ್ಗೆ ಗಂಭೀರ ಸಮಾಲೋಚನೆ ನಡೆಸಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಮತ್ತು ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು.

ಅಸಲಿ ಅಜೆಂಡಾ ಏನು?:

ಮೂಲಗಳ ಪ್ರಕಾರ, ಈ ಸಭೆಯ ಹಿಂದೆ ಪ್ರಮುಖವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ, ಮೇ 4ರ ಫಲಿತಾಂಶದ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹಕ್ಕು ಮಂಡಿಸುವ ಸಾಧ್ಯತೆಯಿದೆ. ಅದನ್ನು ತಡೆದು ತಮ್ಮ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ‘ಕೈ’ ನಾಯಕರ ಬೆಂಬಲ ಕ್ರೋಢೀಕರಿಸುತ್ತಿದ್ದಾರೆ.

ಎರಡನೆಯದಾಗಿ, ಮೇ 21ಕ್ಕೆ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಲಿದ್ದು, ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗುವ ಮುನ್ನವೇ ಸಂಪುಟ ಪುನಾರಚನೆ ಅಥವಾ ಇತರ ಕಾರ್ಯತಂತ್ರಗಳನ್ನು ರೂಪಿಸುವುದು ಈ ಸಭೆಯ ಉದ್ದೇಶ ಎನ್ನಲಾಗಿದೆ.

Share

Leave a comment

Leave a Reply

Your email address will not be published. Required fields are marked *