ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Police Station: ವಿಷ ಸೇವಿಸಿ ಪೊಲೀಸ್ ಠಾಣೆ ಮುಂದೆಯೇ ಆತ್ಮಹತ್ಯೆಗೆ ಯತ್ನ…!

On: August 9, 2023 3:06 AM
Follow Us:
Crime
---Advertisement---

SUDDIKSHANA KANNADA NEWS/ DAVANAGERE/ DATE:09-08-2023

ದಾವಣಗೆರೆ: ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ (Police) ಠಾಣೆ ಎದುರು ನಡೆದಿದೆ.

ಮಾಯಕೊಂಡ ಹೋಬಳಿಯ ಬೊಮ್ಮೇನಹಳ್ಳಿ ತಾಂಡಾ ನಿವಾಸಿ ರವಿ ನಾಯ್ಕ್ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಮಂಗಳವಾರ ಸಂಜೆ ಪೊಲೀಸ್ (Police)  ಠಾಣೆ ಎದುರು ವಿಷ ಸೇವಿಸಿದ್ದು, ಕೂಡಲೇ ಠಾಣೆಗೆ ವಿಚಾರಣೆಗೆ ಬಂದಿದ್ದ ಆತನ ಪತ್ನಿ ರೇಣುಕಾ ಬಾಯಿಗೆ ವಿಷಯ ತಿಳಿಯಿತು. ಆಕೆಯ ಜೊತೆ ಬಂದಿದ್ದ ಸಂಬಂಧಿಕರ ಸಹಾಯದಿಂದ ಮಾಯಕೊಂಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 

HARIHARA MLA B.P. HARISH ANGRY: ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ವಿರುದ್ಧ ಬೆಂಕಿಯುಗುಳಿದ ಬಿಜೆಪಿ ಶಾಸಕ ಬಿ. ಪಿ. ಹರೀಶ್…!

ಆದ್ರೆ, ವೈದ್ಯರು ತಕ್ಷಣ ದಾವಣಗೆರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದು, ಸಿ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಗದ ವಿಚಾರಕ್ಕೆ ಈ ಮೊದಲು ದಾಖಲಾದ ಪ್ರಕರಣವು ಕೋರ್ಟ್ ನಲ್ಲಿತ್ತು. ವ್ಯಾಜ್ಯವೂ ಇತ್ತು. ಈ ವಿಚಾರ ಕುರಿತಂತೆ ತಾಂಡಾದ ನಿವಾಸಿಯೊಬ್ಬರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ರವಿ ನಾಯ್ಕ್ ಪತ್ನಿ ರೇಣುಕಾ ಬಾಯಿ ಆರೋಪಿಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Police, Police Station, Police Station Mayakonda, Police News, Police Suddi,

Police Suddi Updates, Police News Updates

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment