SUDDIKSHANA KANNADA NEWS/ DAVANAGERE/ DATE_04-07_2025
ದಾವಣಗೆರೆ: ಕೆಂದ್ರ ಸರ್ಕಾರ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ 2025ನ್ನು ವಿರೋಧಿಸಿ ಮತ್ತು ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಅಖಿಲ ಭಾರತೀಯ ಮುಸ್ಲಿಂ ಒಕ್ಕೂಟದ ಜಿಲ್ಲಾ ಘಟಕದಿಂದ ನಗರದ ಚಾರ್ಲಿ ಪೈಲ್ವಾನ್ ಆಟೋ ನಿಲ್ದಾಣದಿಂದ ಎಸ್ಸೆಸ್ಸೆಂ ನಗರದ ಹೊಸ ಖಬರಸ್ಥಾನ ವರೆಗೆ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಟಿ.ಅಸ್ಗರ್, ವಕ್ಫ್ ಜಮೀನು ನಮ್ಮ ಪೂರ್ವಜರು ಅಲ್ಲಾಹನನ್ನು ಸಂತೃಪ್ತ ಪಡೆಸಲು ಮತ್ತು ಮುಸ್ಲಿಮರ ಸಬಲೀಕರಣಕ್ಕಾಗಿ ದಾನ ಮಾಡಿದ ಜಮೀನಾಗಿದ್ದು, ಯಾರಿಂದಲೋ ಕಬಳಿಸಿದ ಜಮೀನಲ್ಲ ಎಂದು ಹೇಳಿದರು.
READ ALSO THIS STORY: ಸೌಂದರ್ಯವೇ ಮುಳುವಾಯಿತೇ… ಅನೈತಿಕ ಸಂಬಂಧದ ಶಂಕೆಯಿಂದ ಕೌನ್ಸಿಲರ್ ಪತ್ನಿಯನ್ನೇ ಕೊಚ್ಚಿ ಕೊಂದ ಗಂಡ!
ಇಂದು ಮುಸ್ಲಿಮರು ಗುರಿಯಾಗಿದ್ದರೆ, ನಾಳೆ ಎಲ್ಲಾ ಶೋಷಿತ ದಮನಿತ ವರ್ಗಗಳು ಹೆಜ್ಜೆ ಹೆಜ್ಜೆಯಾಗಿ ಗುರಿಯಾಗುತ್ತವೆ. ನಮ್ಮದು ಹಿಂದೂ-ಮುಸ್ಲಿಂ ಹೋರಾಟವಲ್ಲ, ನಮ್ಮ ಹೋರಾಟ ಹಿಂದೂಗಳ ವಿರುದ್ಧವಲ್ಲ. ನಮ್ಮ ಹೋರಾಟ ಸಂವಿಧಾನ ನೀಡಿರುವಂತಹ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿದೆ ಎಂದರು.
ಕೇಂದ್ರ ವಕ್ಫ್ ತಿದ್ದುಪಡಿ ತಂದಿರುವುದು ಮುಸ್ಲಿಮರ ಹಿತಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರ ಜಮೀನು ಕಬಳಿಸುವ ಯತ್ನವಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಈ ರೀತಿಯ ಕ್ರಮಗಳು ನಮ್ಮ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿದೆ. ನಾವು ಇದನ್ನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಈ ಕಾಯ್ದೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ದಾವಣಗೆರೆಯಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಜೀರ್ ಅಹ್ಮದ್, ತಾಹೀರ್ ಅಹ್ಮದ್, ಮಹಮ್ಮದ್ ಅಲಿ, ಶೋಯೇಬ್, ಸಾಜಿದ್ ಅಹ್ಮದ್, ಮಹಮ್ಮದ್ ಅಲ್ತಾಫ್, ರಜ್ವಿ ರಿಯಾಜ್ ಸಾಬ್, ಇಲು, ನೂರ್ ಅಹ್ಮದ್, ಅಹ್ಮದ್ ರಜಾ, ಯು. ಎಂ ಮನ್ಸೂರ್ ಅಲಿ, ಅತೀಕ್ ಹಜರತ್, ನಾಸೀರ್ ಸಿಲಿಂಡರ್, ಅಜ್ಮತ್, ತಮನ್ ರಫೀಕ್, ಅರಬ್, ಅಸ್ಗರ್ ಇತರರು ಭಾಗವಹಿಸಿದ್ದರು.